ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​​...

news18
Updated:August 31, 2018, 10:02 PM IST
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​​...
news18
Updated: August 31, 2018, 10:02 PM IST
- ಶ್ರೀನಿವಾಸ ಹಳಕಟ್ಟಿ, ನ್ಯೂಸ್ 18 ಕನ್ನಡ

 ಬೆಂಗಳೂರು ( ಆಗಸ್ಟ್ 31) : ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ಸಮನ್ವಯ ಸಮಿತಿ ಅಸ್ತು ಎಂದಿದೆ. ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಜೊತೆಗೆ ಏಕ ಕಾಲದಲ್ಲೇ ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಏಕಾಏಕಿ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಸರಿಯಲ್ಲ. ಸಂಬಂಧಪಟ್ಟ ಇಲಾಖಾ ಸಚಿವರ ಗಮನಕ್ಕೆ ತರುವುದು ಒಳ್ಳೆಯದು. ಇಲ್ಲದಿದ್ದರೆ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತೆ ಅಂತಾ ತಿಳಿಸಿದ ಅವರು ಈಗಾಗಲೇ ಈ ವಿಚಾರವಾಗಿ ಕೆಲ ಸಚಿವರಲ್ಲಿ ಬೇಸರ ಮೂಡಿಸಿದೆ. ಹಾಗಾಗಿ ಚರ್ಚಿಸಿ ವರ್ಗಾವಣೆ ಮಾಡಿ ಅಂತಾನೂ ತಿಳಿಸಿದರು.

ಎಸ್ ಸಿ ಎಸ್ಟಿ ನೌಕರರ ಬಡ್ತಿ ಮೀಸಲಾತಿ ಜಾರಿ ವಿಚಾರ ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ಕೂಡಲೇ ಕಾನೂನು ಜಾರಿ ಮಾಡ್ಲಿ ಎಂದ ಸಿದ್ದರಾಮಯ್ಯ ಹೇಳಿದರು. ಬಡ್ತಿ ಮೀಸಲಾತಿ ಕಾನೂನು ಜಾರಿ ಮಾಡಿದ್ರೆ ನೌಕರರಲ್ಲಿ ಮತ್ತೆ ಗೊಂದಲ ಸೃಷ್ಟಿ ಆಗುತ್ತೆ. ಈ ಹಿಂದೆಯೂ ಮುಂಬಡ್ತಿ ಮಾಡಿದವರನ್ನ ಹಿಂಬಡ್ತಿ ಮಾಡಲಾಗಿತ್ತು. ಹೀಗಾಗಿ ಸರ್ಕಾರ ಟೇಕ್ ಆಫ್ ಆಗೋವರೆಗೂ ಬಡ್ತಿ ಮೀಸಲಾತಿ ವಿಚಾರವನ್ನ ಪೆಂಡಿಂಗ್ ಇಡೋಣ ಎಂದು  ಸಭೆಗೆ ಸಿಎಂ ತಿಳಿಸಿದರು.

ಇಲ್ಲ ಇದು ನಮಗೆ ಚುನಾವಣಾ ವಿಚಾರ. ಸದಾಶಿವ ಆಯೋಗದ ವಿಚಾರದಲ್ಲಿ ನಾವು ಮಾಡಿದ ಎಡವಟ್ಟು ನಮಗೆ ಹಲವು ಕಡೆ ಫಲಿತಾಂಶ ನಮ್ಮ ವಿರುದ್ಧ ಬರುವುದಕ್ಕೆ ಕಾರಣವಾಯಿತು. ಹೀಗಾಗಿ ಬಡ್ತಿ ಮೀಸಲಾತಿ ವಿಚಾರದಲ್ಲಿ ನಾವು ರಾಜಿ ಆಗಲು ಸಾಧ್ಯವಿಲ್ಲ ಇದಕ್ಕೆ ಸಿಎಂ ಎಲ್ಲ ವರ್ಗದ ನೌಕರರನ್ನ ನಾವು ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಬೇಕು. ಅದಕ್ಕೆ ಸಮಯ ಕೇಳುತ್ತಿದ್ದೇನೆ ಎಂದರು.

ಎಲ್ಲರಿಗೂ ಮಂತ್ರಿ ಮಾಡಲು ಆಗುವುದಿಲ್ಲ

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರಿಗೂ ಮಂತ್ರಿ ಮಾಡಲು ಆಗಲ್ಲ. ಕಾಂಗ್ರೆಸ್​ನಿಂದ ಇಪ್ಪತ್ತು, ಜೆಡಿಎಸ್​ನಿಂದ ಹತ್ತು ಶಾಸಕರಿಗೆ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
Loading...

ಬೆಂಗಳೂರಿನಲ್ಲಿ ನಡೆದ ಸಮನ್ವಯ ಸಮಿತಿಯಲ್ಲಿ ಮಾತನಾಡಿ ಅವರು, ಸೆಪ್ಟಂಬರ್​ನ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈ ಕುರಿತು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಕಾಂಗ್ರೆಸ್​​​ನಿಂದ 6, ಜೆಡಿಎಸ್​ನಿಂದ ಒಬ್ಬ ಶಾಸಕರು ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಇನ್ನು, ಪರಿಷತ್ ಮೂರು ಸ್ಥಾನಗಳನ್ನು ತುಂಬುವ ಬಗ್ಗೆ ಪರಿಷತ್ ನಾಮ‌ನಿರ್ದೇಶನ ಬಗ್ಗೆ ಚರ್ಚೆಯಾಗಿದೆ. ಯಾರಿಗೆ ಎಷ್ಟು ಎಂಬುದನ್ನು ನಂತರ ಪ್ರಕಟಿಸಲಾಗುತ್ತದೆ. 105 ಸ್ಥಳೀಯ ಸಂಸ್ಥೆಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡಿದ್ದೇವೆ. ಎಲ್ಲೆಲ್ಲಿ ಅತಂತ್ರವಾಗುತ್ತದೆ ಎಂಬುದನ್ನು ನೋಡಿ, ಜೆಡಿಎಸ್ ಜತೆ ಸೇರಿ ಅಧಿಕಾರ ಹಿಡಿಯುವ ಬಗ್ಗೆ ತೀರ್ಮಾಸುತ್ತೇವೆ ಎಂದರು.

ಸಮನ್ವಯ ಸಮಿತಿಯಲ್ಲಿ ಬಡ್ತಿ ಮೀಸಲು ಬಗ್ಗೆ ಚರ್ಚೆ ಮಾಡಿದ್ದೇವೆ. ಇದರ ಕುರಿತು 5 ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ. ನಂತರ ಕಾಯ್ದೆ ಅನುಷ್ಠಾನಕ್ಕೆ ತೀರ್ಮಾನ ಮಾಡಲಾಗುತ್ತದೆ. ಇನ್ನು ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಕೊಡಗು ಪರಿಹಾರ ಕಾರ್ಯಕ್ಕೆ ವೇಗ ನೀಡಲು ಸಮಿತಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಎಂದರು.

ಇನ್ನು, ನನ್ನ ಹಾಗೂ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಬರುತ್ತಿದೆ. ಇದೆಲ್ಲಾ ಸಂಪೂರ್ಣ ಆಧಾರ ರಹಿತ. ಐದು ವರ್ಷದ ನಂತರ ಸಿಎಂ ಆಗುತ್ತೇನೆಂದು ನಾನು ಹೇಳಿದ್ದೆ. ಸಮ್ಮಿಶ್ರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಹೀಗಾಗಿ ಐದು ವರ್ಷವೂ ಈ ಸರ್ಕಾರ ಆಡಳಿತ ನಡೆಸಲಿದೆ. ಅಲ್ಲದೇ ಕಾಂಗ್ರೆಸ್​ನಲ್ಲಿ ಸಿಎಂ ಆಗುವವರು ಸಾಕಷ್ಟು ಮಂದಿ ಇದ್ದಾರೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚುನಾವಣಾ ನಂತರ ಹೊಂದಾಣಿಕೆ 

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಕಡೆ ಜೆಡಿಎಸ್ ಜೊತೆ ಕಾಂಗ್ರೆಸ್ ಕೈಜೋಡಿಸಲು ನಿರ್ಧರಿಸಿದೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಈ ನಿರ್ಧಾರ ಕೈಗೊಂಡಿದ್ದೇವೆ.

ಇದು ಕೂಡ ಸಮನ್ವಯ ಸಮಿತಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ. ಅತಂತ್ರ ಸ್ಥಿತಿ ನಿರ್ಮಾಣವಾದ ಕಡೆ ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಮನವರಿಕೆ ಮಾಡಲಿದ್ದು, ಒಟ್ಟಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಮಾಡಿಕೊಡಲಿದ್ದೇವೆ ಎಂದರು.

 

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...