• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸುರೇಶ್ ಅಂಗಡಿ ನಿಧನಕ್ಕೆ ವಿಧಾನ ಪರಿಷತ್​​ನಲ್ಲಿ ಸಂತಾಪ ಸೂಚನೆ; ಪಕ್ಷಾತೀತವಾಗಿ ಕೇಂದ್ರ ಸಚಿವರ ಸ್ಮರಣೆ

ಸುರೇಶ್ ಅಂಗಡಿ ನಿಧನಕ್ಕೆ ವಿಧಾನ ಪರಿಷತ್​​ನಲ್ಲಿ ಸಂತಾಪ ಸೂಚನೆ; ಪಕ್ಷಾತೀತವಾಗಿ ಕೇಂದ್ರ ಸಚಿವರ ಸ್ಮರಣೆ

ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ.

ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ.

ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಿದೆ. ಅವರ ಹಠಾತ್ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಸಜ್ಜನ ರಾಜಕಾರಣಿ, ಸ್ನೇಹ ಜೀವಿಯಾಗಿದ್ದರು ಎಂದು ಸ್ಮರಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು(ಸೆ.24): ಕೊರೋನಾದಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನ ಪರಿಷತ್ ನಲ್ಲಿ ಸಂತಾಪ ಸೂಚಿಸಲಾಯಿತು. ಪಕ್ಷಾತೀತವಾಗಿ ಸುರೇಶ್ ಅಂಗಡಿಯವರನ್ನು ಸ್ಮರಿಸಲಾಯಿತು. ನಾಲ್ಕನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚಿಸಿದ ಮೇಲೆ ಮಾತನಾಡಿದ ಸಚಿವ ಸಿ.ಟಿ ರವಿ, ಸುರೇಶ್​ ಅಂಗಡಿಯವರು ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ದೊಡ್ಡ ವ್ಯಕ್ತಿತ್ವ ಹೊಂದಿದ್ದ ರಾಜಕಾರಣಿಯಾಗಿದ್ದರು. ಚಿಕ್ಕಮಗಳೂರು-ಹಾಸನ ರೈಲು ಮಾರ್ಗ ವಿಚಾರ ಚರ್ಚೆಗೆ ಚಿಕ್ಕಮಗಳೂರಿಗೆ ಬಂದರೆ ಉತ್ತಮ ಎನ್ನುವ ಮಟ್ಟಿಗೆ ಅಭಿವೃದ್ಧಿಪಡಿಸಿದ್ದೆ, ಬರುವುದಾಗಿಯೂ ಅಂಗಡಿಯವರು ಹೇಳಿದ್ದರು. ಆದರೆ ಬಾರದೆ ಹೋದರು, ಪಕ್ಷಕ್ಕೆ ದೊಡ್ಡ ಮಟ್ಟದ್ದ ನಷ್ಟ ಉಂಟಾಗಿದೆ ಎಂದರು.


ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಿದೆ. ಅವರ ಹಠಾತ್ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಸಜ್ಜನ ರಾಜಕಾರಣಿ, ಸ್ನೇಹ ಜೀವಿಯಾಗಿದ್ದರು ಎಂದು ಸ್ಮರಿಸಿದರು.


ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂಭಾವಿತ ರಾಜಕಾರಣಿ, ಮಂತ್ರಿಯಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದರು. ಕರೆ ಮಾಡಿ ಪಾಸಿಟಿವ್ ಬಂದ ಮಾಹಿತಿ ನೀಡಿದ್ದರು. ರಾಜಕಾರಣಿ ಹೇಗೆ ಇರಬೇಕು ಎನ್ನುವುದನ್ನು ಅವರ ನೋಡಿ ಕಲಿಯಬೇಕು. ರಾಜಕೀಯ ಕಲುಷಿತ ವಾತಾವರಣದಲ್ಲಿ ನಾವಿದ್ದರೂ ಪಕ್ಷಾತೀತವಾಗಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿದ್ದರು. ತೆರೆಮರೆಯಲ್ಲೇ ಕೆಲಸ ಮಾಡಿಕೊಂಡಿದ್ದರು, ಏಮ್ಸ್ ನಂತಹ ಆಸ್ಪತ್ರೆ ಯಲ್ಲೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ, ಸಾವು ಎಷ್ಟೊಂದು ಘೋರ, ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ, ಆದರ್ಶ ಕುಟುಂಬ ಅವರದ್ದಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.


MSP Crisis - ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಬದ್ಧ; ಆದರೆ ಕಾನೂನಾಗಿ ಸೇರಿಸುವುದಿಲ್ಲ: ಕೇಂದ್ರ ಕೃಷಿ ಸಚಿವ


ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ,‌ ಸರಳ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ ಆಗಿದ್ದರು. ನಾನು ಎಂಪಿ ಆದಾಗ ಅವರು ಮನೆ ಅಲಾಟ್ ಮೆಂಟ್ ಸಮಿತಿಯಲ್ಲಿದ್ದರು. ನನಗೆ ಕೋರಿಕೆ ಮೇರೆಗೆ ಬಂಗಲೆ ಕೊಟ್ಟರು. ಶಾರ್ಟ್ ಸರ್ಕ್ಯೂಟ್ ನಿಂದ ಬಂಗಲೆ‌ ಸುಟ್ಟಾಗ ಸ್ಥಳಕ್ಕೆ ಬಂದಿದ್ದರು. ಪರಿಶೀಲನೆ ಮಾಡುವಾಗ ಹಾನಿ ಮಾಡಿಕೊಂಡಿದ್ದರೂ ಆರು ತಿಂಗಳು ಅವರ ಮನೆಯಲ್ಲೇ ಇರಲು ಅವಕಾಶ ಕೊಟ್ಟಿದ್ದರು, ರಾಜ್ಯಕ್ಕೆ ರೈಲ್ವೆಯಲ್ಲೂ ರಾಜ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಸಜ್ಜನ‌ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರ ಕೊಡುಗೆ ಸ್ಮರಿಸಿದರು.


ಬಿಜೆಪಿ ಸದಸ್ಯ ಅರುಣ್ ಶಹಾಪುರ್ ಮಾತನಾಡಿ, ಬೆಳಗಾವಿಯಲ್ಲಿ ಅಟಲ್ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಸುರೇಶ್ ಅಂಗಡಿ, ನಾನು ಇಂದು ಇಲ್ಲಿ ಬಂದಿದ್ದೇನೆ ಎಂದರೆ ಅದಕ್ಕೆ ಅವರು ಕಾರಣ. ಅವರ ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾ ಭಾವುಕರಾದರು. ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ, ಅಂಗಡಿ ಅವರಿಗೆ ಪಕ್ಷ ಇರಲಿಲ್ಲ, ಶೇ.40 ರಷ್ಟು ಮುಸ್ಲಿಂ ಮತ ಪಡೆದ ರಾಜಕಾರಣಿ, ಅವರ ಶಿಕ್ಷಣ ಸಂಸ್ಥೆಯ ಕ್ಯಾಂಟೀನ್ ನಡೆಸುತ್ತಿದ್ದುದು ಮುಸಲ್ಮಾನರು, ನಗುನಗುತ್ತಾ ರಾಜಕಾರಣ ಮಾಡುತ್ತಿದ್ದರು,‌ರಾಜ್ಯ ದೊಡ್ಡ ಶಕ್ತಿಯನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.


‌ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಹುಟ್ಟಿದಾಗ ಉಸಿರು ಇರುತ್ತೆ ಹೆಸರು ಇರಲ್ಲ, ಆದರೆ ಸತ್ತಾಗ ಹೆಸರು ಇರಲಿದೆ ಉಸಿರು ಇರಲ್ಲ ಎನ್ನುವ ಮಾತು ಅಂಗಡಿ ವಿಚಾರದಲ್ಲಿ ಸತ್ಯವಾಗಿದೆ. ಸರಳ ಸಜ್ಜನಿಕೆಯ ಅಂಗಡಿಯೇ ಆಗಿದ್ದರು. ಮಹಿಳೆಯರನ್ನು ತುಂಬಾ ಗೌರವಿಸುತ್ತಿದ್ದರು. ಗುಣಮುಖರಾಗಲಿದ್ದಾರೆ ಎನ್ನುವ ನಂಬಿಕೆ ಹುಸಿಯಾಯಿತು. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದರು.


ನಂತರ ಸುರೇಶ್ ಅಂಗಡಿ ನಿಧನಕ್ಕೆ ಒಂದು ನಿಮಿಷ ಮೌನಚಾರಿಸುವ ಮೂಲಕ ವಿಧಾನ ಪರಿಷತ್ ಸಂತಾಪ ಸೂಚಿಸಲಾಯಿತು. ಬಳಿಕ ಅರ್ಧ ಗಂಟೆ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.

top videos
    First published: