Sancahri Vijay Passes Away: ಸಂಚಾರಿ ವಿಜಯ್​ ಅಗಲಿಕೆಗೆ ಸಂತಾಪ ಸೂಚಿಸಿದ ಸ್ಯಾಂಡಲ್​ವುಡ್​ ಮಂದಿ-ರಾಜಕೀಯ ನಾಯಕರು

ಹೋಟೆಲ್​ನಲ್ಲಿ ಕೆಲಸ ಮಾಡುತ್ತಲೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು, ಅಭಿನಯದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ಸಂಚಾರಿ ವಿಜಯ್ ಅವರ ನಿಧನಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

ನಟ ಸಂಚಾರಿ ವಿಜಯ್​

ನಟ ಸಂಚಾರಿ ವಿಜಯ್​

  • Share this:
ರಂಗಭೂಮಿ ಹಿನ್ನೆಲೆಯಿಂದ ಬಂದ ಅಪ್ಪಟ ದೇಸಿ ಪ್ರತಿಭೆ ಸಂಚಾರಿ ವಿಜಯ್ ಇಂದು ಕೊನೆಯುಸಿರೆಳೆದಿದ್ದಾರೆ. ನಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮೂಲದವರಾದ ಸಂಚಾರಿ ವಿಜಯ್​ ತಮ್ಮ ಶ್ರಮದಿಂದಲೇ ಬೆಳೆದವರು. ಅಭಿನಯದ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. ಸಂಚಾರಿ ನಾಟಕ ತಂಡದಲ್ಲಿ ತೊಡಗಿಕೊಂಡಿದ್ದ ಅವರು ಸಂಚಾರಿ ವಿಜಯ್​ ಎಂದೇ ಖ್ಯಾತರಾಗಿದ್ದರು. ಇನ್ನು ಲಾಕ್​ಡೌನ್​ನಲ್ಲೂ ಉಸಿರು ಎಂಬ ತಂಡ ಕಟ್ಟಿಕೊಂಡು ಕೊರೋನಾ ಸೋಂಕಿತರು ಹಾಗೂ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆರವಾಗುತ್ತಿದ್ದರು. ಬಹಳ ಕಷ್ಟಪಟ್ಟು ಸಿನಿರಂಗದಲ್ಲಿ ತಮ್ಮದೇ ಆದ ಜಾಗ ಮಾಡಿಕೊಂಡಿದ್ದರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಸಂಚಾರಿ ವಿಜಯ್​ ಅವರಿಗೆ ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಿರ್ವಹಿಸಿರುವ ತೃತೀಯ ಲಿಂಗಿ ಪಾತ್ರದಲ್ಲಿನ ಅಭಿನಯಕ್ಕೆ  ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. 

ಹೋಟೆಲ್​ನಲ್ಲಿ ಕೆಲಸ ಮಾಡುತ್ತಲೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು, ಅಭಿನಯದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ಸಂಚಾರಿ ವಿಜಯ್ ಅವರ ನಿಧನಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ  ಹಾಗೂ ಡಿಸಿಎಂ ಅಶ್ವತ್ಥನಾರಾಯಣ ಅವರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಮಾಡಿದ ಕಿಚ್ಚ ಸುದೀಪ್​

ಇನ್ನು ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ಕಿಚ್ಚ ಸುದೀಪ್​ ಅವರು, ಸಂಚಾರಿ ವಿಜಯ್​ ಅವರ ಅಗಲಿಕೆ ತುಂಬಾ ನೋವು ತಂದಿದೆ. ಲಾಕ್​ಡೌನ್​ಗಿಂತ ಮುಂಚೆ ಹಲವಾರು ಸಲ ಅವರನ್ನು ಭೇಟಿ ಮಾಡಿದ್ದೇನೆ. ರಿಲೀಸ್​ ಆಗಬೇಕಿದ್ದ ಅವರ ಸಿನಿಮಾ ಬಗ್ಗೆ ಕಾತರರಾಗಿದ್ದರು. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಬರೆದುಕೊಂಡಿದ್ದಾರೆ.

Very very disheartening to accept that Sanchari Vijay breathed his last.ನಟ ವಸಿಷ್ಠ ಸಿಂಹ ಸಹ ನಟ ಸಂಚಾರಿ ವಿಜಯ್​ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ವಿಜಯ್​ ಅವರ ಫೋಟೋ ಹಂಚಿಕೊಂಡಿದ್ದು, ನೋವಿನಿಂದ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
View this post on Instagram


A post shared by Vasishta N Simha (@imsimhaa)


ಸಂಚಾರಿ ವಿಜಯ್​ ಹೃದಯ ಇನ್ನೂಮಿಡಿಯುತ್ತಿದೆ: ನೀನಾಸಂ ಸತೀಶ್​

ವಿಜಯ್ ಅವರ ಸ್ನೇಹಿತರಾದ ನೀನಾಸಂ ಸತೀ ಶ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ವಿಜಯ್ ಇನ್ನಿಲ್ಲ ಎಂದು ಹೇಳಬಾರದು. ಅವನ ಹೃದಯ ಇನ್ನೂ‌ ಮಿಡಿಯುತ್ತಿದೆ. ಅವನು ಸಾಕಷ್ಟು ಕಷ್ಟ ಪಟ್ಟು ಬಂದಿದ್ದ. ಅರ್ಧಕ್ಕೆ ಬಿಟ್ಟು ಹೋಗಿದ್ದು ತಪ್ಪಲ್ವಾ..?ಶನಿವಾರದವರೆಗೂ ನನ್ನ ಜೊತೆಯೇ ಇದ್ದ. ಎಲ್ಲರ ಜೊತೆ ಬೆರೆಯುತ್ತಿದ್ದ. ಎಲ್ಲ ವಾಟ್ಸ್​ಆ್ಯಪ್​ ಗ್ರೂಪ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂಗ ಸಕ್ರಿಯನಾಗಿದ್ದ. ನನಗೆ ಅವನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: RIP Sanchari Vijay: ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್: ಕಂಬನಿ ಮಿಡಿದ ಕಿಚ್ಚ ಸುದೀಪ್​..!

2011ರಲ್ಲಿ ತೆರೆಕಂಡ ರಂಗಪ್ಪ ಹೋಗ್ಬಿಟ್ನಾ ಚಿತ್ರದ ಮೂಲಕ ಸಂಚಾರಿ ವಿಜಯ್​ ಸಿನಿರಂಗಕ್ಕೆ ಕಾಲಿಟ್ಟರು. ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್, ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ತಮಿಳು ಸಿನಿಮಾಗಳಲ್ಲೂ ಸಂಚಾರಿ ವಿಜಯ್ ನಟಿಸಿದ್ದಾರೆ. ಮೊದಲ ಅಲೆಯಿಂದಾಗಿ ಆಗಿದ್ದ ಲಾಕ್​ಡೌನ್​ ತೆರೆವುಗೊಂಡ ನಂತರ ರಿಲೀಸ್ ಆಗಿದ್ದ ಸಿನಿಮಾ ಆಕ್ಟ್ 1978 ಚಿತ್ರದಲ್ಲೂ ನಟಿಸಿದ್ದಾರೆ.

ಗೆಳೆಯ ನವೀನ್ ಜೊತೆ ಸಂಚಾರಿ ವಿಜಯ್ ಅವರು ಶನಿವಾರ ರಾತ್ರಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಜೆಪಿ ನಗರ 7ನೇ ಹಂತದಲ್ಲಿ ಅಪಘಾತ ಸಂಭವಿಸಿದ್ದು, ಗೆಳೆಯ ನವೀನ್​ಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದ್ದು, ಮಳೆ ಜೋರಾಗಿದ್ದ ಕಾರಣ ವೇಗವಾಗಿ ಬೈಕ್​ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನವೀನ್​ ಅವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸಹ ಚಿಂತಾಜನಕವಾಗಿದೆ.
Published by:Anitha E
First published: