ನೀರಿಲ್ಲ, ವಿದ್ಯುತ್ ಇಲ್ಲ, ಶೌಚಾಲಯ ವ್ಯವಸ್ಥೆಯೇ ಇಲ್ಲ: ಹೀನಾಯ ಸ್ಥಿತಿಯಲ್ಲಿ ಆಶ್ರಯ ಕಾಲೋನಿ ಬಡವರ ಬದುಕು

ನ್ಯೂಸ್ 18 ಕನ್ನಡ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯ ಶಾಸಕ ಅನಿಲ್ ಬೆನಕೆ ಇಂದು ಹೆಸ್ಕಾಂ, ಸ್ಲಂ ಬೋರ್ಡ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಒಂದು ವಾರದಲ್ಲಿ ಕುಡಯುವ ನೀರು, ವಿದ್ಯುತ್ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.

ಆಶ್ರಯ ನಗರ ಕಾಲೋನಿ

ಆಶ್ರಯ ನಗರ ಕಾಲೋನಿ

  • Share this:
ಬೆಳಗಾವಿ(ಜ.27): ಎಂಟು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಶೌಚಕ್ಕಾಗಿ ಬಯಲಿಗೆ ಹೋಗುತ್ತಾರೆ. ಇಲ್ಲಿನ ಮಕ್ಕಳು ಮೇಣದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಜನರಂತೂ ​ಐದು ರೂ. ನೀಡಿ ಬ್ಯಾಟರಿ ಮೂಲಕ ತಮ್ಮ ಮೊಬೈಲ್​​ ಚಾರ್ಜ್​​ ಮಾಡಿಸಬೇಕಾದ ಪರಿಸ್ಥಿತಿ. ಹೀಗೊಂದು ಘಟನೆ ಕಂಡು ಬಂದದ್ದು ಬೆಳಗಾವಿಯ ಕಣಬರ್ಗಿ ಸಮೀಪದ ಮಾರ್ಕಂಡಯ್ಯ ನಗರದಲ್ಲಿ. 

ಹೌದು, ಮಾರ್ಕಂಡಯ್ಯ ನಗರದ ಜೋಪಡಿಯಲ್ಲಿದ್ದ ಜನರಿಗೆ ರಾಜ್ಯ ಸರ್ಕಾರ ವಸತಿ ಯೋಜನೆ ಕಲ್ಪಿಸಿದೆ. ಕಳೆದ 5 ತಿಂಗಳ ಹಿಂದೆಯೇ ಕಟ್ಟಿದ ಮನೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. 370ಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೇನು ಮನೆ ಸಿಕ್ಕಿದೆ. ಒಳ್ಳೆಯ ರೀತಿಯಲ್ಲೇ ಬದುಕಬಹುದು ಎಂದು ಭಾವಿಸಿದ್ದ ಬಡ ಜನರಿಗೆ ಮತ್ತೆ ಸಂಕಷ್ಟ ತಪ್ಪಿದಂತಿಲ್ಲ.

ಬಡವರಿಗೆ ನೀಡಿರುವ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ಸೌಲಭ್ಯ ಒದಗಿಸಿಲ್ಲ. ಶೌಚಾಲಯ ವ್ಯವಸ್ಥೇ ಇಲ್ಲದೆ ಜನ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಜತೆಗೆ ವಸತಿ ಕಟ್ಟಡಗಳು ಸಂಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಕೂಡಿವೆ. ಇಂತಹ ಬೇಕಾದಷ್ಟು ಸಮಸ್ಯೆಗಳಿದ್ದರೂ ಯಾರೊಬ್ಬರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ಬಡಾವಣೆಯಲ್ಲಿ ಹಾಕಿ ಹೋಗಿದ್ದಾರೆ. ಅದು ಹೇಗೆ ವಿದ್ಯುತ್ ಸಂಪಕ್ಕ ಕೊಡತ್ತಾರೋ ಗೊತ್ತಿಲ್ಲ. ಬಡಾವಣೆಯ ಮನೆಗಳ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿವೆ. ಮನೆಯ ನಿವಾಸಿಗಳು ತಮ್ಮ ಮನೆಗಳನ್ನು ಸುಧಾರಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ದೆಹಲಿಯಲ್ಲೇ ಡಿಕೆಶಿ ಠಿಕಾಣಿ: ಇಂದು ಸೋನಿಯಾ ಗಾಂಧಿ ಭೇಟಿ ಸಾಧ್ಯತೆ

ಇನ್ನೂ ನೀರಿನ ಟ್ಯಾಂಕ್ ಸಹ ಗುತ್ತಿಗೆದಾರ ನಿರ್ಮಾಣ ಮಾಡಿಲ್ಲ. ಬಡಾವಣೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಜನ ಬಯಲು ಬಹಿರ್ದೆಸೆ ಉಪಯೋಗ ಮಾಡುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ವಿದ್ಯಾಭಾಸ್ಯಕ್ಕೂ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಸ್ಥಳೀಯರು ಸ್ಲಂ ಬೋರ್ಡ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಪ್ರಯೋಜವಾಗಿಲ್ಲ.

ಬಡಾವಣೆ ನಿವಾಸಿಗಳು ಮೊಬೈಲ್, ಬ್ಯಾಟರಿ ಚಾರ್ಚ್ ಮಾಡಲು ಖಾಸಗಿ ಅವರ ಮನೆಯನ್ನೇ ಅವಲಂಬಿತರಾಗಿದ್ದಾರೆ. ಒಂದು ಮೊಬೈಲ್ ಗೆ 5 ರೂಪಾಯಿ ಚಾರ್ಚ್ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಡವರು ಬದುಕು ನಡೆಸುತ್ತಿದ್ದಾರೆ. ಆದರೇ ಕಳೆದ 5 ತಿಂಗಳಿಂದ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬಡಾವಣೆ ನಿವಾಸಿಗಳು ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳು ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

ಇನ್ನು, ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯ ಶಾಸಕ ಅನಿಲ್ ಬೆನಕೆ ಇಂದು ಹೆಸ್ಕಾಂ, ಸ್ಲಂ ಬೋರ್ಡ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಒಂದು ವಾರದಲ್ಲಿ ಕುಡಯುವ ನೀರು, ವಿದ್ಯುತ್ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.
First published: