Siddaramaiah: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತಕ್ಕೆ ಖಂಡನೆ, ಸಿದ್ದು ಡಿಕೆಶಿ ಎಚ್​ಡಿಕೆ ಆಕ್ರೋಶ

ಕೊಡಗು ಜಿಲ್ಲೆಗೆ ನೆರೆಹಾನಿ ವೀಕ್ಷಣೆಗೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಡಿಕೆಶಿ, ಕುಮಾರಸ್ವಾಮಿ ಕೂಡ ಕಿಡಿಕಾರಿದ್ದಾರೆ

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ನೆರೆಪೀಡಿತ ಪ್ರದೇಶಗಳ ಪರಿಶೀಲನೆಗೆ ಕೊಡಗು (Kodagu) ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿಗೆ (Car) ಮೊಟ್ಟೆ (Egg) ಎಸೆದಿದ್ದರು. ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಕ್ಕೆ ಕಾಂಗ್ರೆಸ್​ (Congress) ತೀವ್ರ ಆಕ್ರೋಶ ಹೊರಹಾಕಿದೆ. ಸಿದ್ದರಾಮಯ್ಯ ಟ್ವೀಟ್ (Tweet) ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಇನ್ನು ರಾಜ್ಯದ ಹಲವೆಡೆ ಪ್ರತಿಭಟನೆಗಳು ಕೂಡ ನಡೆದಿದೆ.

ಕೊಡಗು ಜಿಲ್ಲೆಗೆ ನೆರೆಹಾನಿ ವೀಕ್ಷಣೆಗೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಡಿಕೆಶಿ, ಕುಮಾರಸ್ವಾಮಿ ಕೂಡ ಕಿಡಿಕಾರಿದ್ದಾರೆ.‘ಬೊಮ್ಮಾಯಿಯವರೇ ಮೊಟ್ಟೆ ಎಸೆಯುವ ಗೂಂಡಾಗಿರಿ ಬೇಡ’

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು ಎಂದಿದ್ದಾರೆ.

ಯು.ಪಿ ಮಾದರಿ ಎಂದರೆ ಇದೇನಾ?

ಯು.ಪಿ ಮಾದರಿ ಎಂದರೆ ಇದೇನಾ ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು. ಎಲ್ಲಾ ಜಾತಿ, ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಬಿಜೆಪಿಯವರು  ಮತ ಧ್ರುವೀಕರಣಕ್ಕಾಗಿ ಸಮಾಜ ಒಡೆಯುವವರು ಅಂತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ, ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ

ಸಿದ್ದರಾಮಯ್ಯಗೆ ಮಾತ್ರವಲ್ಲ, ರಾಜ್ಯಕ್ಕೆ ಅವಮಾನ- ಡಿಕೆಶಿ

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತಕ್ಕೆ ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಿದ್ಧರಾಮಯ್ಯ ತಮ್ಮ ವಿಚಾರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಶಾಂತಿ ಮೂಡಿಸುವ ಕೆಲಸ ಸರಿ ಅಲ್ಲ‌. ಇದು ಸಿದ್ದರಾಮಯ್ಯಗೆ ಅವಮಾನ ಅಲ್ಲ, ರಾಜ್ಯಕ್ಕೆ ಆದ ಅವಮಾನ. ಅವಮಾನದ ಜವಬ್ದಾರಿಯನ್ನು ಸಿಎಂ ಹೊತ್ತುಕೊಳ್ಳಬೇಕು ಎಂದಿದ್ದಾರೆ.

ಸಮಸ್ಯೆ ಕೇಳಲು ಬಂದವರ ಮೇಲೆ ಮೊಟ್ಟೆ ಎಸೆತ ಸರಿಯಲ್ಲ- ಎಚ್​​ಡಿಕೆ

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದಕ್ಕೆ ನಾನು ಖುಷಿ ಪಡಲ್ಲ. ಇಂಥ ಘಟನೆಗಳು ನಡೆಯಬಾರದು ಅಂತಾ ಎಚ್​ಡಿಕೆ ಹೇಳಿದ್ದಾರೆ. ಜನರ ಸಮಸ್ಯೆ ಕೇಳಲು ಬಂದವರ ಮೇಲೆ ಮೊಟ್ಟೆ ಎಸೆತ ಸರಿಯಲ್ಲ. ಮೊಟ್ಟೆ ಎಸೆದ ಸಂಘಟನೆಯವರು ಮಡಿಕೇರಿಗೆ ಗೌರವ ತಂದಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಇಂಥಹ ಸಂಸ್ಕೃತಿ ಸರಿ ಅಲ್ಲ- ಪ್ರತಾಪ್ ಸಿಂಹ

ಸಿದ್ದರಾಮಯ್ಯಗೆ ಮೊಟ್ಟೆ ಹೊಡೆಯಬಾರದಿತ್ತು. ಇಂಥಹ ಸಂಸ್ಕೃತಿ ಸರಿ ಅಲ್ಲ ಅಂತಾ ಪ್ರತಾಪ್ ಸಿಂಹ ಹೇಳಿದ್ದಾರೆ. ಟಿಪ್ಪು ಜಯಂತಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಮೇಲೆ ಕೋಪ ಇದೆ. ಟಿಪ್ಪು ಮೇಲಿನ ಕೋಪಕ್ಕೆ ಕೊಡಗಿನ ಜನ ಟಿಪ್ಪು ಹೆಸರನ್ನು ನಾಯಿಗೆ ಇಡ್ತಾರೆ. ಕುಟ್ಟಪ್ಪ ಸತ್ತಾಗ, ಕಾಲು ಜಾರಿ ಬಿದ್ದಿದ್ದು ಎಂದು ಹೇಳಿದ್ರು. ಹೀಗಾಗಿ ಸಿದ್ದರಾಮಯ್ಯ ಮೇಲೆ ಕೊಡಗಿನ ಜನಕ್ಕೆ ಸಿದ್ದರಾಮಯ್ಯ ಮೇಲೆ ಆಕ್ರೋಶ ಇದೆ ಅಂದ್ರು.

ಇದನ್ನೂ ಓದಿ: ರಾಜಕಾರಣಕ್ಕೆ ಮರಳಿದ ಬಿಎಸ್​ವೈ, ಸಿದ್ದುಗೆ ಟೆನ್ಶನ್, ಬೊಮ್ಮಾಯಿ ಕತೆ ಏನು? ಒಗಟಾದ ಕರ್ನಾಟಕ ರಾಜಕೀಯ!

ಇನ್ನು ಘಟನೆ ಖಂಡಿಸಿ ಮೈಸೂರು, ದಾವಣಗೆರೆಯಲ್ಲಿ ಪ್ರತಿಭಟನೆಗಳು ನಡೆದಿದೆ. ಟೈರ್​ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು.
Published by:Thara Kemmara
First published: