ಬೆಂಗಳೂರು: ಪ್ರತಿದಿನ ಶಾಲೆಗೆ (School) ಮಗಳನ್ನು ತಂದೆಯೇ (Father) ಡ್ರಾಪ್ ಮಾಡಿ ಹೋಗುತ್ತಿದ್ದರು. ಆದರೆ ಇವತ್ತು ಮೀಟಿಂಗ್ ಇದ್ದಿದ್ದರಿಂದ ಮಗಳನ್ನು (Daughter) ಡ್ರಾಪ್ ಮಾಡಲು ತಾಯಿ ಬಂದಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಯಮನಾಗಿ ಬಂದಿತ್ತು ಕಾಂಕ್ರಿಟ್ ಲಾರಿ (Concrete Lorry). ಬೆಂಗಳೂರಿನ (Bengaluru) ಸುತ್ತಮುತ್ತ ಅಪಘಾತಗಳು ಸಾಮಾನ್ಯ. ಆದರೆ ಈ ಅಪಘಾತ ಮಾತ್ರ ಎಂತಹ ಎಂಟೆದೆ ಇದ್ದವರನ್ನೂ ಕ್ಷಣ ಕಾಲ ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತೆ. ಎದುರಿನಿಂದ ಬರ್ತಿಲ್ಲ ಕಾಂಕ್ರಿಟ್ ಲಾರಿ, ಅಚಾನಕ್ ಆಗಿ ಕಾರಿನ ಮೇಲೆ ಮಗುಚಿಬಿದ್ದಿದೆ. ಕಾರಿನಲ್ಲಿದ್ದ ತಾಯಿ-ಮಗಳು ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲದೆ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ (Bannerghatta) ಸಮೀಪದ ಕಗ್ಗಲೀಪುರ ಕ್ರಾಸ್ (Kaggalipura Cross) ಬಳಿ ಘಟನೆ ನಡೆದಿದೆ.
ಮೀಟಿಂಗ್ಗೆ ಹೋದವರಿಗೆ ಆಕ್ಸಿಡೆಂಟ್ ಮೆಸೇಜ್!
ಕಗ್ಗಲೀಪುರ ಸಮೀಪದ ತರಳು ನಿವಾಸಿ ಸುನೀಲ್ ಕುಮಾರ್ ಪ್ರತಿ ದಿನ ಮಗಳು ಸಮತಾ ಕುಮಾರ್ಳನ್ನು ಡ್ರಾಪ್ ಮಾಡಿ ಆಫೀಸ್ಗೆ ಹೋಗುತ್ತಿದ್ದರಂತೆ. ಆದರೆ ಇವತ್ತು ಮೀಟಿಂಗ್ ಇದೆ ಅನ್ನೋ ಕಾರಣಕ್ಕೆ ಬೇಗ ಹೋಗಿದ್ದರಂತೆ.
ಇದನ್ನೂ ಓದಿ: Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇನು?
ಪರಿಣಾಮ ಅಮ್ಮ ಗಾಯಿತ್ರಿ ಕುಮಾರ್, ಸಮತಾಳನ್ನು ಕರೆದುಕೊಂಡು ಕಾರಿನಲ್ಲಿ ಹೊರಟಿದ್ದರು. ಆದರೆ ದಾರಿ ಮಧ್ಯ ಕಾಂಕ್ರಿಟ್ ಲಾರಿ ಕಾರಿನ ಮೇಲೆ ಬಿದ್ದಿದೆ. ಕೂಡಲೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಸಂದೇಶ ಹೋಗಿತ್ತು. ಕೂಡಲೇ ಸ್ಥಳಕ್ಕೆ ಬಂದಾಗ ದಾರುಣ ಘಟನೆ ಕಂಡು ಕಣ್ಣೀರು ಸುರಿಸಿದ್ದಾರೆ.
ಮನೆಯಲ್ಲಿ 10 ತಿಂಗಳ ದತ್ತು ಪುತ್ರ ಅನಾಥ!
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಮೆಸೇಜ್ ಬರ್ತಿದ್ದ ಹಾಗೆ ಸ್ಥಳಕ್ಕೆ ಬಂದ ಸುನಿಲ್ ಕುಮಾರ್ ಮಗಳನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಮಗಳು ಕಾರಿನ ಒಳಗೆ ಕಾಣಿಸಿದ್ದರು ಉಳಿಸಿಕೊಳ್ಳಲಾಗದ ಭಾವ ಅಪ್ಪನ ಮುಖದಲ್ಲಿ ತುಂಬಿತ್ತು. ಅತ್ತ ಮನೆಯಲ್ಲಿ ದತ್ತು ಪಡೆದಿದ್ದ 10 ತಿಂಗಳ ಗಂಡು ಮಗು ತಾಯಿ ಮನೆಯಿಂದ ಹೋಗುವಾಗ ಅಳುತ್ತಿತ್ತಂತೆ. ಆದರೆ ಇದೀಗ ತಾಯಿ ಹಾಗು ಅಕ್ಕನನ್ನು ಕಳೆದುಕೊಂಡು ಅನಾಥವಾಗಿದೆ.
ಕಾಂಕ್ರಿಟ್ ಲಾರಿ ಇಳಿಜಾರಿನಲ್ಲಿ ಬಂದು ನಿಯಂತ್ರಣ ತಪ್ಪಿ ಬರುವಾಗಲೇ ಗಾಯತ್ರಿ ಕುಮಾರ್ ಕಾರನ್ನು ಸೈಡಿಗೆ ಹಾಕಿಕೊಂಡು ನಿಂತಿದ್ದಾರೆ. ಆದರೆ ಲಾರಿ ಚಾಲಕ ಯಾಕೆ ಕಾರಿನ ಮೇಲೆ ಮಗುಚಿ ಬೀಳುವಂತೆ ಮಾಡಿದ್ದಾನೆ ಅನ್ನೋದು ಗೊತ್ತಾಗಬೇಕಿದೆ. ಕಾರಿನಲ್ಲಿ 360 ಡಿಗ್ರಿ ಕ್ಯಾಮರಾ ಇದ್ದು ಪ್ರತಿಯೊಂದು ಚಲನಚಲನಗಳು ರೆಕಾರ್ಡ್ ಆಗಿದೆ ಎನ್ನಲಾಗಿದೆ. ಅಪಘಾತ ನಡೆದಿದ್ದಕ್ಕೆ ಕಾರಣ ಏನು..? ಯಾರದ್ದು ತಪ್ಪು ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: Crime News: ಪತ್ನಿ, ಮೂವರು ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ನೇಣಿಗೇರಿದ ಪತಿ! ಕಂದಮ್ಮಗಳ ಸಾವು, ಪತ್ನಿ ಸ್ಥಿತಿ ಗಂಭೀರ
ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪರಾರಿ ಆಗಿರುವ ಲಾರಿ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.
ಪಾರ್ಟಿ ಮುಗಿಸಿ ಬರುವಾಗ ಭೀಕರ ಅಪಘಾತ, ಯುವಕ ಸಾವು
ಭೀಕರ ಕಾರು ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿದೆ. ರೋಹಿತ್ ಕುಮಾರ್ (26) ಮೃತ ದುರ್ದೈವಿಯಾಗಿದ್ದು, ಗಾಯಾಳುಗಳಾದ ಪ್ರದೀಪ್, ಅವಿನಾಶ್ ಸ್ಥಿತಿ ಗಂಭೀರವಾಗಿದೆ.
ತಾವರೆಕೆರೆಯಿಂದ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ಯುವಕರು ಅತೀ ವೇಗವಾಗಿ ಚಲನೆ ಮಾಡಿಕೊಂಡು ಬಂದ ಕಾರಣ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ