ಸಾಲ ಮನ್ನಾ ಕುರಿತು ಗುಟ್ಟು ಬಿಟ್ಟುಕೊಟ್ಟ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ

news18
Updated:July 3, 2018, 9:26 PM IST
ಸಾಲ ಮನ್ನಾ ಕುರಿತು ಗುಟ್ಟು ಬಿಟ್ಟುಕೊಟ್ಟ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ
news18
Updated: July 3, 2018, 9:26 PM IST
ನ್ಯೂಸ್ 18ಕನ್ನಡ 

ಚಿಕ್ಕೋಡಿ ( ಜುಲೈ 03) :  ಬಜೆಟ್ ಅಧಿವೇಶನದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲಾ ಎನ್ನುವ ಗುಟ್ಟನ್ನ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಬಿಟ್ಟು ಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಮಾತನಾಡಿರುವ ಸತೀಶ್ ಜಾರಕಿಹೊಳಿ,  ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡುತ್ತೆ ಎಂದು ರೈತರು ಕಾದು ಕುಳಿತರೆ ಕಾಂಗ್ರೆಸ್ ನಾಯಕರೆ ಈಗ ಸಂಪೂರ್ಣ ಸಾಲ ಮನ್ನಾ ಆಗಲ್ಲ ಎನ್ನುತ್ತಿದ್ದಾರೆ. ಈ ಹೇಳಿಕೆಯಿಂದ ಮತ್ತೋಮ್ಮೆ ಸಾಲಮನ್ನಾ ಕುರಿತ ಚರ್ಚೆ ಆರಂಭವಾಗಿದೆ.

ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳ ಸಮನ್ವಯ ಬಜೆಟ್​ನ್ನ ಸಿಎಂ ಕುಮಾರಸ್ವಾಮಿ ಮಂಡನೆ ಮಾಡಲಿದ್ದಾರೆ. ರಾಜ್ಯದಲ್ಲಿ 5 ವರ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಒಳ್ಳೆಯ ಆಡಳಿತ ನೀಡುತ್ತೆ ಎಂದಿದ್ದಾರೆ.

ಇನ್ನು ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಶಾಸಕರು ಸಂಪರ್ಕದಲ್ಲಿರುವ ಕುರಿತು ನನಗೆ ಮಾಹಿತಿ ಇಲ್ಲ  ಎಂದಿದ್ದಾರೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...