BMRCL: ಮೆಟ್ರೋ ನಿಲ್ದಾಣದಲ್ಲೇ ಸಿಗುತ್ತೆ ಪ್ರವಾಸಿ ತಾಣಗಳ ಕಂಪ್ಲೀಟ್ ಮಾಹಿತಿ; ಅದು ಹೇಗೆ ಗೊತ್ತಾ?

ಮೆಟ್ರೋ ಪ್ರಯಾಣಿಕರಿಗೆ ಆಯಾ ನಿಲ್ದಾಣದ ಸುತ್ತಲಿರುವ ಆಕರ್ಷಣೀಯ ಮತ್ತು ಪ್ರಮುಖ ಸ್ಥಳಗಳ ಮಾಹಿತಿಯ ಜೊತೆಗೆ ಅಲ್ಲಿಗೆ ಹೋಗುವ ಹೊಸ ದಾರಿಯ ಮಾಹಿತಿ ನೀಡುವುದು. ಈ ಬೃಹತ್​ ನಕ್ಷೆಯ ಪ್ರಮುಖ ಉದ್ದೇಶವಾಗಿದೆ.

ಮೆಟ್ರೋ ನಿಲ್ದಾಣ

ಮೆಟ್ರೋ ನಿಲ್ದಾಣ

  • Share this:
ಬೆಂಗಳೂರು (ಜೂ 13): ನಮ್ಮ ಮೆಟ್ರೋದಲ್ಲಿ (Metro) ಪ್ರಯಾಣಿಸುವವರಿಗೆ ಅದರಲ್ಲೂ ವಿಶೇಷವಾಗಿ ಪ್ರವಾಸಿಗರಿಗೆ ಅನುಕೂಲವಾಗುವ ಹಾಗೇ, ಮೆಟ್ರೋ ನಿಲ್ದಾಣಗಳ (Metro Stations) ಸಮೀಪವಿರುವ ಪ್ರಮುಖ ತಾಣಗಳು  ಸೇರಿದಂತೆ ಆಸ್ಪತ್ರೆ, (Hospital) ದೇವಾಲಯ, ಸರಕಾರಿ ಕಟ್ಟಡ, ಪೊಲೀಸ್ ಠಾಣೆ (Police Station) ಹಾಗೂ ಹೋಟೆಲ್, ಬ್ಯಾಂಕ್ ಮುಂತಾದವುಗಳ ಮಾಹಿತಿ ಸಿಗಲಿದೆ. ಕ್ಯೂಆರ್​ಕೋಡ್ (QR Code)​ ಸಹಿತ ಮಾಹಿತಿ ನೀಡುವ  ನಕ್ಷೆಗಳನ್ನು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಲು ಬೆಂಗಳೂರು ಮೆಟ್ರೋ ನಗರ ಮುಂದಾಗಿದೆ.

ಮೆಟ್ರೋ ದ್ವಾರದಲ್ಲಿ ಸಿಗಲಿದೆ ಫುಲ್​ ಮಾಹಿತಿ

ಮೆಟ್ರೋ ಪ್ರಯಾಣಿಕರಿಗೆ ಆಯಾ ನಿಲ್ದಾಣದ ಸುತ್ತಲಿರುವ ಆಕರ್ಷಣೀಯ ಮತ್ತು ಪ್ರಮುಖ ಸ್ಥಳಗಳ ಮಾಹಿತಿಯ ಜೊತೆಗೆ ಅಲ್ಲಿಗೆ ಹೋಗುವ ಹೊಸ ದಾರಿಯ ಮಾಹಿತಿ ನೀಡುವುದು. ಈ ಬೃಹತ್​ ನಕ್ಷೆಯ ಪ್ರಮುಖ ಉದ್ದೇಶವಾಗಿದೆ. ನಕ್ಷೆಯ ಜೊತೆಗೆ ಇರುವ ಕ್ಯೂ ಆರ್​ಕೋಡನ್ನು ಮೊಬೈಲ್​ ಮೂಲಕ ಸ್ಕ್ಯಾನ್​ ಮಾಡಿದ್ರೆ ನಿರ್ದಿಷ್ಟ ಜಾಗದ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಕೆಲವು ನಿಲ್ದಾಣಗಳಲ್ಲಿ ಮಾತ್ರ ನಕ್ಷೆ ಅಳವಡಿಕೆ

ಈ ಬಗ್ಗೆ ಮಾಹಿತಿ ನೀಡಿದ ಮೆಟ್ರೋ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್​ ಚೌವ್ಹಾಣ್​ ಸದ್ಯ ಕೆಲವು ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸೋದಾಗಿ ಹೇಳಿದ್ದಾರೆ. ನಿಲ್ದಾಣಗಳ ಎಲ್ಲಾ ದ್ವಾರಗಳ ಬಳಿ ಪ್ರಮುಖ ಸ್ಥಳಗಳ ಮಾಹಿತಿ ನೀಡುವ ನಕ್ಷೆಯನ್ನು ಹಾಕುತ್ತೇವೆ. ಇದರಲ್ಲಿ ಕೆಲ ವಿಶೇಷ  ಸ್ಥಳಗಳ ಬಗ್ಗೆ ವಿವರಣೆ ಕೂಡ ಇರಲಿದೆ ಎಂದು ಯಶವಂತ್​ ಚೌವ್ಹಾಣ್ ಹೇಳಿದ್ದಾರೆ.

 ಮೆಟ್ರೋ ಅಪ್ಲಿಕೇಷನ್​ಗೆ ಅಪ್​ಲೋಡ್

ಆದರೆ ಇಂತಹ ನಕಾಶೆಯನ್ನು ಫ್ಲಾಟ್​ಫಾರಂ ಮತ್ತು ಮೆಟ್ರೋ ನಿಲ್ದಾಣದ ಒಳಗಿರುವ ವಿಶಾಲ ಜಾಗಗಳಲ್ಲಿಯೂ ಅಳವಡಿಸಬೇಕು. ಪ್ರತಿ ಮೆಟ್ರೋ ನಿಲ್ದಾಣದ ಸುತ್ತಲಿನ ಜಾಗಗಳ ಮಾಹಿತಿ ಇರುವ ನಕಾಶೆಯನ್ನು ಮೆಟ್ರೋ ಅಪ್ಲಿಕೇಷನ್​ಗೆ ಅಪ್​ಲೋಡ್​ ಮಾಡಿದರೆ ಒಳ್ಳೆಯದು ಎಂಬ ಸಲಹೆಯನ್ನು ಮೆಟ್ರೋ ಪ್ರಯಾಣಿಕರಿಗೆ ನೀಡುತ್ತಾರೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

ಎಲ್ಲಾ ನಿಲ್ದಾಣಗಳಲ್ಲಿ ಇರಲಿ ಮಿನಿ ಮ್ಯಾಪ್​

ಮೆಟ್ರೋ ಇಳಿಯುತ್ತಿದ್ದಂತೆ ದ್ವಾರದಲ್ಲಿ ಪ್ರಮುಖ ಸ್ಥಳಗಳ ಮಾಹಿತಿ ಸಿಕ್ಕರೆ ಅನುಕೂಲವಾಗುತ್ತದೆ. ಅಕ್ಕ-ಪಕ್ಕದಲ್ಲಿ ಪ್ರಯಾಣಿಕರಿಗೆ ಬೇಕಾಗುವ ಸ್ಥಳಗಳಿದ್ರೆ ಅದರ ಮಿನಿ ಮ್ಯಾಪ್​​ಗಳನ್ನು ಕೂಡ ಅಳವಡಿಸಿದ್ರೆ ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಖಾಸಗಿ ಕಂಪನಿ ಉದ್ಯೋಗಿ ತಿಳಿಸಿದ್ದಾರೆ.

ಬೈಯಪ್ಪನ ಹಳ್ಳಿಯಿಂದ ವೈಟ್​ಫೀಲ್ಡ್​ಗೆ ಶೀಘ್ರವೇ ಮೆಟ್ರೋ ಸಂಚಾರ

ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ  ವಿಸ್ತರಣೆ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ.  ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್​ಫೀಲ್ಡ್​​ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ.  2  ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್  ನಡುವಿನ ಕಾಮಗಾರಿಯನ್ನು BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್​ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.

ಮತ್ತಷ್ಟು ಚುರುಕುಗೊಂಡ BMRCL ಕಾಮಗಾರಿ
 2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಅಡಚಣೆಯಿಂದ ವಿಳಂಬ ಆಗಿತ್ತು. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ  ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ. ಮೆಟ್ರೋ ಕಾಮಗಾರಿ ನಡೆಸಲು ಭೂಸ್ವಾಧೀನ ಮತ್ತು ಮರ ಕಟಾವು ಪ್ರಕ್ರಿಯೆಗೆ  ಕೊರೊನಾ ಅಡ್ಡಿ ಪಡಿಸಿತ್ತು.
Published by:Pavana HS
First published: