Bengaluru University: ಬೆಂಗಳೂರು ವಿವಿಯಲ್ಲಿ ದೂರಿನ ಸಮರ; ಕುಲಪತಿ, ವಿತ್ತಾಧಿಕಾರಿ ವಿರುದ್ಧ ವಿದ್ಯಾರ್ಥಿಗಳ ದೂರು

ಬೆಂಗಳೂರು ವಿವಿ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗ್ತಿದ್ದು, ಬೆಂಗಳೂರು ವಿವಿಯಲ್ಲಿ ದೂರಿನ ಸಮರ ಮುಂದುವರಿದಿದೆ. ಬೆಂಗಳೂರು ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ದೂರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳು ದೂರು ನೀಡಿದ್ದಾರೆ

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು ವಿಶ್ವವಿದ್ಯಾಲಯ

  • Share this:
ಬೆಂಗಳೂರು (ಮೇ 28): ಬೆಂಗಳೂರು ವಿವಿ (Bengaluru University) ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರು ವಿವಿ ತನ್ನ ವಿದ್ಯಾರ್ಥಿಗಳ (Sudent) ವಿರುದ್ಧವೇ ದೂರು ನೀಡಿದೆ. 3 ಕಡೆ ದೂರು ದಾಖಲಿಸಿದೆ. ರಾತ್ರೋ ರಾತ್ರಿ 28 ಕೋಟಿ ಅನುಮೋದನೆ ಇಲ್ಲದೆ ಅಪ್ರೂವಲ್ ಆರೋಪ ಹಿನ್ನೆಲೆ ನಿನ್ನೆ ವಿವಿ ವಿತ್ತಾಧಿಕಾರಿ ಕಚೇರಿಗೆ ನುಗ್ಗಿ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರು. ಹೀಗಾಗಿ ಬೆಂಗಳೂರು ವಿವಿ ವಿದ್ಯಾರ್ಥಿಗಳ ವಿರುದ್ಧ ವಿತ್ತಾಧಿಕಾರಿ ದೂರು ನೀಡಿದ್ದಾರೆ. ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ (Research Students) ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ವಿತ್ತಾಧಿಕಾರಿ ಜಯಲಕ್ಷ್ಮಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ಸಂಶೋಧನ ವಿದ್ಯಾರ್ಥಿಗಳು  ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಂಶೋಧನ ವಿದ್ಯಾರ್ಥಿಗಳ ವಿರುದ್ಧ ನೀಡಿದ ದೂರಿನಲ್ಲಿ ಏನಿದೆ‌?

-ಅಧಿಕಾರದಲ್ಲಿರುವ ಮಹಿಳೆಯನ್ನು ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆಂದು ದೂರು.

- 50 ಮಂದಿ ಏಕಾಏಕಿ ಕಚೇರಿಗೆ ನುಗ್ಗಿ ಏಕವಚನದಲ್ಲಿ ಮಾತಾಡಿದ್ದಾರೆ

- ನೀನು ಕೆಲಸ ಮಾಡಲು ಅನರ್ಹಳು, ನೀನು ಕುರ್ಚಿಯಿಂದ ಎದ್ದೇಳು

- ಏರು ಧ್ವನಿಯಲ್ಲಿ ಮಾತನಾಡಿ ಕುಲಪತಿಗಳನ್ನೂ ಏಕ ವಚನದಲ್ಲಿ ನಿಂದಿಸಿದ್ದಾರೆ

- ಈ ರೀತಿಯ ಘಟನೆ 3ನೇ ಭಾರಿ ನಡೆದಿದೆ

- ಮಹಿಳಾ ಅಧಿಕಾರಿಯನ್ನ ನಿಂದಿಸಿದ ಹಿನ್ನೆಲೆ

- ಐಪಿಸಿ ಹಾಗೂ ಇತರೆ ಕಾನೂನುಗಳ ಅನ್ವಯ ಕ್ರಮ ಕೈಗೊಳ್ಳುವಂತೆ ಮನವಿ

- ಈ ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ವಿವಿ ವಿತ್ತಾಧಿಕಾರಿ

ಬೆಂಗಳೂರು ವಿವಿಯಲ್ಲಿ ದೂರಿನ ಸಮರ

ಬೆಂಗಳೂರು ವಿವಿ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗ್ತಿದ್ದು, ಬೆಂಗಳೂರು ವಿವಿಯಲ್ಲಿ ದೂರಿನ ಸಮರ ಮುಂದುವರಿದಿದೆ. ಬೆಂಗಳೂರು ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ಇಬ್ಬರ ವಿರುದ್ಧವೂ ವಿದ್ಯಾರ್ಥಿ ಒಕ್ಕೂಟ ದೂರು ನೀಡಿದ್ದಾರೆ. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದಿಂದ ದೂರು ನೀಡಲಾಗಿದೆ.

Ashwath Narayan: ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು

ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ದೂರು

ವಿವಿ ವಿದ್ಯಾರ್ಥಿಗಳಿಂದ  ಸಾಮೂಹಿಕ ದೂರು ದಾಖಲಾಗಿದೆ. ವಿದ್ಯಾರ್ಥಿಗಳ ಒಕ್ಕೂಟ ಕಂಪ್ಲೆಂಟ್ ಕ್ಯಾಂಪೇನ್ ಗೆ ಚಾಲನೆ ನೀಡಿದೆ. ಸೋಮವಾರದ ಹೊತ್ತಿಗೆ ಪ್ರತ್ಯೇಕ ದೂರು ಸಲ್ಲಿಸಲು ತೀರ್ಮಾನ ಮಾಡಲಾಗಿದೆ. ಕುಲಪತಿ ವೇಣುಗೋಪಾಲ್ ಹಾಗೂ ವಿತ್ತಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅನ್ಯಾಯ, ಅಕ್ರಮದ ವಿರುದ್ಧ ಪ್ರಶ್ನೆ ಮಾಡೋದೆ ತಪ್ಪಾ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ

ವಿತ್ತಾಧಿಕಾರಿ ಕಾನೂನು ಬಾಹಿರವಾಗಿ ಅಕ್ರಮ ಹಣ ವರ್ಗಾವಣೆಗೆ ಮುಂದಾಗಿದ್ದು, ನಿನ್ನೆ FO ವಿರುದ್ಧ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ಮಾಡಿತ್ತು. ಬೆಂಗಳೂರು ವಿತ್ತಾಧಿಕಾರಿ ವಿದ್ಯಾರ್ಥಿಗಳ ವಿರುದ್ಧ ಆಯ್ತು, ಈಗ ವಿತ್ತಾಧಿಕಾರಿ ಹಾಗೂ ಕುಲಪತಿ ವಿರುದ್ಧ ವಿದ್ಯಾರ್ಥಿಗಳಿಂದ ದೂರು

ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!

ಶಾಲೆಗೆ ಹೋಗದೆ ಈಜಲು ಹೋದ ಬಾಲಕ ಸಾವು

ಮೈಸೂರು (ಮೇ 28): ಶಾಲೆಗೆ (School) ಹಾಜರಾಗದೇ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ಸಾವನ್ನಪ್ಪಿರೋ (Boy Death) ಘಟನೆ ಹುಣುಸೂರು ತಾಲೂಕಿನ ತಿಪ್ಪಲಾಪುರ ಬೆಳ್ತೂರು ಬಳಿ ಸಂಭವಿಸಿದೆ. ಚಿಲ್ಕುಂದ ಗ್ರಾಮದ ನಿವಾಸಿ ಹರ್ಷ (14) ಮೃತ ದುರ್ದೈವಿ. ಬಾಲಕ ಹರ್ಷ (Harsha), ಮಂಜುನಾಥ್​ ಮತ್ತು ಶೈಲಜಾ ದಂಪತಿ ಪುತ್ರ. ಬಾಲಕ ಸಂತ ಜೋಸೆಫ್​ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ ಐವರು ಬಾಲಕರು ಈಜುವುದಕ್ಕೆ ಕೆರೆಗೆ (Lake) ಹೋಗಿದ್ದರು.

ಈ ವೇಳೆ ಅವಘಡ ಸಂಭವಿಸಿದ್ದು, ಘಟನೆ ನಡೆಯುತ್ತಿದ್ದಂತೆ ಉಳಿದ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣ ನಂಜುನಗೂಡ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.
Published by:Pavana HS
First published: