• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MP Renukacharya: ರೇಣುಕಾಚಾರ್ಯ ಸೋದರ ಮಗನ ಶ್ರದ್ಧಾಂಜಲಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಸಂಕಷ್ಟ

MP Renukacharya: ರೇಣುಕಾಚಾರ್ಯ ಸೋದರ ಮಗನ ಶ್ರದ್ಧಾಂಜಲಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಸಂಕಷ್ಟ

ಶಾಸಕ ರೇಣುಕಾಚಾರ್ಯ ಕಣ್ಣೀರು

ಶಾಸಕ ರೇಣುಕಾಚಾರ್ಯ ಕಣ್ಣೀರು

ಈ ಹಿಂದೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಳಸಿಕೊಂಡ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

  • Share this:

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (MLA MP Renukacharya) ತಮ್ಮನ ಪುತ್ರ ಚಂದ್ರಶೇಖರ್ (Chandrashekhar Death) ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ದಾವಣಗೆರೆಯ ಜಿಲ್ಲಾಧಿಕಾರಿ ಶಿವನಂದ್ ಕಪಾಶಿ, ಹೊನ್ನಾಳಿ ತಹಸಿಲ್ದಾರ್ ರಶ್ಮಿ, ಹಾಗೂ EO ರಾಮ್ ಬೋವಿ ವಿರುದ್ಧ ಲೋಕಾಯುಕ್ತದಲ್ಲಿ (Karnataka Lokayukta) ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯದ ಸಮಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಹಿನ್ನೆಲೆ  ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಎಂಬವರು ದೂರು ದಾಖಲಿಸಿದ್ದಾರೆ. ಕರ್ತವ್ಯ ನಿರ್ಲಕ್ಷ ಆರೋಪದಡಿ ದೂರು ದಾಖಲಿಸಿದ್ದರು.


ಶಾಸಕ ತಮ್ಮನ ಪುತ್ರ ಚಂದ್ರಶೇಖರ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಕಳೆದ ಕೆಲ ತಿಂಗಳ ಹಿಂದೆ ಹೊನ್ನಾಳಿ ಪಟ್ಟಣದಲ್ಲಿ ಚಂದ್ರಶೇಖರ್ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸರ್ಕಾರಿ ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇದೇ ವಿಚಾರವಾಗಿ ಕರ್ತವ್ಯ ಲೋಪದಡಿ ದೂರು ದಾಖಲಿಸಲಾಗಿತ್ತು. ಈ ಹಿಂದೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಳಸಿಕೊಂಡ ವಿಚಾರ ವಿವಾದಕ್ಕೆ ಕಾರಣವಾಗಿತ್ತು.


Chandrashekhar death case update CID Team visits mla mp renukacharya residence and collect information mrq
ಚಂದ್ರಶೇಖರ್


‘ಮೋದಿ ಬಂದ್ರೆ ವೋಟ್, ರಾಗಾ ಬಂದ್ರೆ ಲಾಸ್’


ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುವ ವಿಚಾರ ರಾಜಕೀಯಕ್ಕೆ ಕಾರಣವಾಗಿದೆ. ಆದರೆ ಮೋದಿ ಬರ್ತಾರೆ ಅಂದ್ರೆ ಹೆದರಿಕೆ ಯಾಕೆ? ಮೋದಿ ಬಂದ್ರೆ ಬಿಜೆಪಿಗೆ ವೋಟ್ ಜಾಸ್ತಿ ಆಗುತ್ತೆ ಅಂತ ಕಾಂಗ್ರೆಸ್​ಗೆ ಭಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.


ಬೆಂಗಳೂರಲ್ಲಿ ಮಾತಾಡಿದ ಸಿ.ಟಿ.ರವಿ, ಜಲ ಜೀವನ ಮಿಷನ್ ಅಡಿಯಲ್ಲಿ ಬಡವರ ಮನೆಗೆ ನೀರು ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಂದು ಸೀಟ್ ಇಲ್ಲ, ಅಲ್ಲಿಯೂ ಮೋದಿ ಹೋಗಿದ್ದಾರೆ. ನಮ್ಮ ಪ್ರಧಾನಿ ಹಾಲಿಡೇ ಟ್ರೀಪ್ ಮಾಡುವವರಲ್ಲ. ಆದರೆ, ಕಾಂಗ್ರೆಸ್​ನವ್ರ ಲೀಡರ್ ಬಂದರೆ ಲಾಸ್ ಆಗುತ್ತೆ ಎಂದು ರಾಹುಲ್ ಗಾಂಧಿ ಹೆಸರು ಹೇಳದೇ ಸಿ.ಟಿ. ರವಿ ಕುಟುಕಿದ್ರು.


BDA ಬ್ರೋಕರ್​ಗಳಿಗೆ ಲೋಕಾ ಶಾಕ್


ಬಿಡಿಎ ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮೊನ್ನೆ ದಾಳಿ ಮಾಡಿದ್ರು. ಇದೀಗ ಮಂಜಪ್ಪ ಹಾಗೂ ಅನಿಲ್ ಕುಮಾರ್ ಎಂಬ ಇಬ್ಬರು ಬ್ರೋಕರ್​ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


ಇವರಿಬ್ಬರೂ, ಅಧಿಕಾರಿಗಳಿಗೆ ಹಣ ಕೊಟ್ಟು ಕೆಲಸ ಮಾಡಿಸುತ್ತಿದ್ರು. ಸದ್ಯ ಇಬ್ಬರು ಬ್ರೋಕರ್​ಗಳು ಅಧಿಕಾರಿಗಳ ಮಧ್ಯವರ್ತಿಗಳ ಕೆಲಸ ಮಾಡಿಸ್ತಿದ್ದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಬ್ರೋಕರ್​ಗಳು ಸತ್ಯ ಒಪ್ಪಿದ್ದು, ಅಧಿಕಾರಿಗಳಿಗೆ ನೋಟಿಸ್ ಕೊಡಲು ಲೋಕಾಯುಕ್ತ ತಯಾರಿ ಮಾಡಿಕೊಳ್ಳುತ್ತಿದೆ.




ನೇಣಿಗೆ ಶರಣಾದ ಶಿಕ್ಷಕ


ವಿಜಯಪುರದ ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ ಸಿಂದಗಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಹಲವು ಅಂಶ ಉಲ್ಲೇಖಿಸಿದ್ದಾರೆ. ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್.ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್‌ಪಿ ಜಿ.ಎನ್ ಪಾಟೀಲ್ ಟಾರ್ಚರ್​ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಉಲ್ಲೇಖ ಮಾಡಲಾಗಿದೆ.


ಇದನ್ನೂ ಓದಿ:  Congress Praja Dhwani Yatra: ಕಾಂಗ್ರೆಸ್ ಭಿನ್ನಮತಕ್ಕೆ ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ


ಇಬ್ಬರನ್ನು ಕೊಂದ ಹುಲಿ


ಮಡಿಕೇರಿ ಸಮೀಪದ ಪೊನ್ನಂಪೇಟೆಯಲ್ಲಿ ಬಾಲಕನೊಬ್ಬನನ್ನು ಹುಲಿ ಕೊಂದು ಹಾಕಿದ ಮರುದಿನವೇ, ಬೆಳ್ಳಂಬೆಳಗ್ಗೆ ಮತ್ತೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಗೆ ರಾಜು ಎಂಬವರು ಮೃತಪಟ್ಟಿದ್ದಾರೆ.


ಮೈಸೂರು ಜಿಲ್ಲೆಯ ರಾಜು ಬಾಡಗ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ನಿನ್ನೆ ಬಾಲಕನನ್ನು ಕೊಂದಿದ್ದ ತೋಟದಲ್ಲಿಯೇ ವೃದ್ಧನನ್ನೂ ಹುಲಿ ಕೊಂದು ಹಾಕಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು