ವಂಚನೆ ಆರೋಪ: ನಟ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲು

news18
Updated:August 1, 2018, 1:01 PM IST
ವಂಚನೆ ಆರೋಪ: ನಟ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲು
news18
Updated: August 1, 2018, 1:01 PM IST
ಹರೀಶ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಆ.1): ನಟ ಕಿಚ್ಚ ಸುದೀಪ್​ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ ಮಾಲೀಕ ಮುಖ್ಯಮಂತ್ರಿಗಳು ಹಾಗೂ ಫಿಲ್ಮ್​ ಚೇಂಬರ್​ ವಿರುದ್ಧ ದೂರು ದಾಖಲಿಸಿದ್ದಾರೆ.

ಕಿಚ್ಚ ಕ್ರಿಯೇಷನ್ಸ್​ ಅಡಿ ನಿರ್ಮಾಣಗೊಂಡಿದ್ದ ವಾರಸ್ದಾರ ಧಾರಾವಾಹಿಯ ಚಿತ್ರೀಕರಣವನ್ನು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್​ನ ದೊಡ್ಮನೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರೀಕರಣ ಮಾಡಿದ ತಂಡ ಬಾಡಿಗೆ ಹಣವನ್ನು ಪಾವತಿ ಮಾಡಿಲ್ಲ ಎಂದು ಆರೋಪಿಸಿ ಎಸ್ಟೇಟ್​ ಮಾಲೀಕ ದೀಪಕ್​ ಮಯೂರ್​  ದೂರು ದಾಖಲಿಸಿದ್ದಾರೆ.ಚಿತ್ರೀಕರಣದ ವೇಳೆ ಎಸ್ಟೇಟ್​ನ ಗಿಡ, ಮರಗಳನ್ನು  ನಾಶ ಮಾಡಲಾಗಿದೆ. ಈ ಬಗ್ಗೆ ಚಿತ್ರ ತಂಡ ಯಾವುದೇ ಪರಿಹಾರಕ್ಕೂ ಮುಂದಾಗಿಲ್ಲ. ಅಲ್ಲದೇ ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಪಾವತಿ ಮಾಡಿಲ್ಲ ಎಂದು ಮಾಲೀಕ ಆರೋಪ  ಮಾಡಿದ್ದಾರೆ.ಸುದೀಪ್​ ಹಣ ನೀಡುತ್ತಾರೆ ಎಂಬ ಭರವಸೆಯಲ್ಲಿದ್ದ ಮಾಲೀಕರು ಈಗ ಹಣಬಾರದ ಹಿನ್ನಲೆ ಕಂಗಾಲಾಗಿದ್ದು, ಈ ಸಂಬಂಧ ನೇರವಾಗಿ ಫಿಲ್ಮ್​ ಚೇಂಬರ್​ ಹಾಗೂ ಮುಖ್ಯಮಂತ್ರಿಗಳಿಗೆ ದೂರು ದಾಖಲಿಸಿದ್ದು, ಈ ಮೂಲಕವಾದರೂ ತಮ್ಮ ಬಾಡಿಗೆ ಹಣ ಪಾವತಿಯಾಗಬಹುದು ಎಂಬ ಭರವಸೆಯಲ್ಲಿ ಅವರಿದ್ದಾರೆ.
Loading...ಕಿಚ್ಚ ಸುದೀಪ್​ ತಮ್ಮ ಬ್ಯಾನರ್​ನಲ್ಲಿ ಮೊದಲಬಾರಿಗೆ ಧಾರವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದರು. ವಾರಸ್ಥಾರ ಎಂಬ ಈ ಧಾರವಾಹಿಯಲ್ಲಿ ನಟಿ ಪ್ರಜ್ಞಾ ಶೆಟ್ಟಿ  ಹಾಗೂ ಡ್ರಾಮ ಜ್ಯೂನಿಯರ್​ ಚಿತ್ರಾಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಈ ಹಿಂದೆ ಕೂಡ ದೂರು ದಾಖಲಿಸಿದ್ದ ದೀಪಕ್​: 

ತಾಲೂಕಿನ ಬೈಗೂರು ಗ್ರಾಮದಲ್ಲಿರುವ 600 ವರ್ಷಗಳಷ್ಟು ಹಳೆಯದಾದ ಮನೆಯಲ್ಲಿ ಹಲವು ಚಿತ್ರಗಳ ಚಿತ್ರೀಕರಣ ನಡೆಸಲಾಗಿತ್ತು. ನಿರ್ಮಾಪಕ ಮಹೇಶ್​ ಹೆಸರಿನಲ್ಲಿ ಈ ಮನೆಯನ್ನು ಬಾಡಿಗೆ ಪಡೆದ ಚಿತ್ರತಂಡ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಈ ಸಂಬಂದ ಮನೆ ಮಾಲೀಕರು ಅಗ್ರೀಮೆಂಟ್​ಗೆ ಕೇಳಿದರು ಅವರು ಸಾಬೂಬು ಹೇಳುತ್ತಿದ್ದರು.

ದಿನಕ್ಕೆ 6 ಸಾವಿರ ಬಾಡಿಗೆ ಕೊಡುವುದಾಗಿ ಹೇಳಿ ಒಂದು ಲಕ್ಷ ರೂ. ನೀಡಿದ್ದರು. ನಟರು ಉಳಿದುಕೊಳ್ಳಲು ಕೊಠಡಿ ಮಾಡುವುದಾಗಿ ಹೇಳಿ ಕಾಫಿ ಗಿಡಗಳನ್ನು ಕಡಿದಿದ್ದರು. ಸುಮಾರು 2ಲಕ್ಷದವರೆಗೆ ಚಿತ್ರತಂಡ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಮಾಲೀಕ ದೀಪಕ್​ ಮಯೂರ್​ 2017ರಲ್ಲಿ ಚಿಕ್ಕಮಗಳೂರು ಎಸ್ಪಿಗೆ ದೂರು ದಾಖಲಿಸಿದ್ದರು. ಅಲ್ಲದೇ ಈ ಸಂಬಂಧ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ತಿಳಿಸಿದ್ದರು. ಈಗ ಯಾವುದೇ ಪರಿಹಾರ ಲಭ್ಯವಾಗದ ಹಿನ್ನಲೆ ಸಿಎಂಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಧಾರಾವಾಹಿ ನಿರ್ಮಾಪಕರ ಸ್ಪಷ್ಟನೆ:

ಈ ಪ್ರಕರಣದ ಕುರಿತು ನ್ಯೂಸ್​18ಗೆ ಪ್ರತಿಕ್ರಿಯಿಸಿರುವ ಕಾರ್ಯಕಾರಿ ನಿರ್ಮಾಪಕ ಮಹೇಶ್, ಸುದೀಪ್​ ಎಷ್ಟು ಜನರಿಗೆ ನೆರವಾಗಿದ್ದಾರೆಂದು ಕರ್ನಾಟಕದ ಜನರಿಗೆ ಗೊತ್ತಿದೆ. ಹಾಗಿರುವಾಗ ಇಂಥವರಿಗೆ ದುಡ್ಡು ಕೊಡದೇ ಇರುತ್ತಾರಾ? ಕೋರ್ಟ್​, ಎಸ್ಪಿ ಕಚೇರಿಗೆ ದಾಖಲೆ ನೀಡಿದ್ದೇವೆ. ಎಲ್ಲೂ ಇವರ ಬೇಳೆ ಬೇಯದೆ ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ. ನಮ್ಮ 7 ಲಕ್ಷ ಮೌಲ್ಯದ ಆಸ್ತಿಗಳು ಈಗಲೂ ಆ ಎಸ್ಟೇಟ್​ನಲ್ಲಿವೆ ಎಂದು ಹೇಳಿಕೆ ನೀಡಿದ್ದಾರೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...