ಎಂ.ಬಿ.ಪಾಟೀಲ್ ವಿರುದ್ಧ 25 ಕೋಟಿ ಕಿಕ್ ಬ್ಯಾಕ್ ಆರೋಪ: ಎಸಿಬಿಗೆ ದೂರು

Venugopala K
Updated:March 24, 2018, 9:07 PM IST
ಎಂ.ಬಿ.ಪಾಟೀಲ್ ವಿರುದ್ಧ 25 ಕೋಟಿ ಕಿಕ್ ಬ್ಯಾಕ್ ಆರೋಪ: ಎಸಿಬಿಗೆ ದೂರು
Venugopala K
Updated: March 24, 2018, 9:07 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.24) ವಿಶ್ವೇಶ್ವರಯ್ಯ ಜಲ‌ ನಿಗಮ ಕಾಮಗಾರಿಯಲ್ಲಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಭಾರೀ ಗೋಲ್​ಮಾಲ್​ ಆರೋಪ ಕೇಳಿ ಬಂದಿದೆ. ಎರಡು ದಿನಗಳ ಹಿಂದಷ್ಟೇ ಎಂ.ಬಿ. ಪಾಟೀಲ್ ವಿರುದ್ಧ ಬಿಎಸ್​ವೈ 25 ಕೋಟಿ ಕಿಕ್ ​ಬ್ಯಾಕ್ ಆರೋಪ ಮಾಡಿದ್ದರು. ಇದೀಗ, ಬಿಜೆಪಿ ವಕ್ತಾರ ಎನ್​.ಆರ್​ ರಮೇಶ್​ ದಾಖಲೆ ಸಮೇತ ಎಸಿಬಿಗೆ ದೂರು ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಸಚಿವ ಎಂ ಬಿ ಪಾಟೀಲ್ ವಿರುದ್ಧ ಯಡಿಯೂರಪ್ಪ ಒಂದು ಬಾಂಬ್ ಸಿಡಿಸಿದ್ದರು. ವಿಶ್ವೇಶ್ವರಯ್ಯ ಜಲ‌ನಿಗಮ ಕಾಮಗಾರಿಯಲ್ಲಿ 25 ಕೋಟಿ ಕಿಕ್​ಬ್ಯಾಕ್​ ಪಡೆದಿದ್ದಾರೆ ಎಂದು ನೇರ ಆರೋಪ ಮಾಡಿದ್ದರು. ಆದರೆ ಆ ಟೆಂಡರ್​ ರದ್ದಾಗಿದೆ ಎಂದು ಎಂ .ಬಿ ಪಾಟೀಲ್ ಆರೋಪದಿಂದ ಜಾರಿಕೊಂಡಿದ್ದರು. . ಆದರೆ, ಸರ್ಕಾರ, ಆರ್​ಟಿಐ ಅರ್ಜಿಗೆ ಬೆದರಿ ಟೆಂಡರ್​ ರದ್ದು ಮಾಡಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ.

ಡಿಸೆಂಬರ್ 25ಕ್ಕೆ ಟೆಂಡರ್​ ಸಲ್ಲಿಕೆಗೆ ಕೊನೆ ದಿನವಾಗಿದ್ದರೂ, ಜನವರಿ 1 ರಂದು NPCT ಕಂಪೆನಿಗೆ ವರ್ಕ್​​ ಆರ್ಡರ್ ಇಶ್ಶೂ ಆಗಿದೆ. ಫೆಬ್ರವರಿ 22ನೇ ತಾರೀಕು ಆರ್​ಟಿಐಗೆ ಅರ್ಜಿ ಸಲ್ಲಿಕೆ ಆಗಿದ್ದು, ಮಾಹಿತಿ ನೀಡದ ಹಿನ್ನೆಲೆಯಲ್ಲಿ 28ರಂದು ಜಲಮಂಡಳಿ ಎಂಡಿಗೆ ದೂರು ನೀಡಲಾಗಿತ್ತು. ಇದಾದ ಬಳಿಕ, ಮಾರ್ಚ್​ 19ಕ್ಕೆ ಕಾಮಗಾರಿ ಟೆಂಡರ್ ರದ್ದಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ತಪ್ಪಾಗಿದೆ: ಎಂ. ಬಿ. ಪಾಟೀಲ್: ಕಾಮಗಾರಿ ಬಗ್ಗೆ ಆರ್​ಟಿಐ ಅರ್ಜಿ ಸಲ್ಲಿಸುತ್ತಿದ್ದಂತೆ ಸರ್ಕಾರ ಭಯ ಬಿದ್ದು ಟೆಂಡರ್​ ರದ್ದು ಮಾಡಿದೆ ಎಂಬುದು ಬಿಜೆಪಿ ಆರೋಪ. ಆದರೆ ಕಾಮಗಾರಿಯ ಟೆಂಡರ್​ ಪಡೆದ NTPC ಕಂಪೆನಿ ನಕಲಿ ದಾಖಲೆ ಕೊಟ್ಟು ವರ್ಕ್​ ಆರ್ಡರ್​ ಪಡೆದಿತ್ತು. ಇದು ಗೊತ್ತಾದ ತಕ್ಷಣ ಟೆಂಡರ್​ ರದ್ದು ಮಾಡಲಾಗಿದೆ ಎಂದು ಎಂ. ಬಿ ಪಾಟೀಲ್​ ಹೇಳುತ್ತಿದ್ದಾರೆ.

ಇದೇವೇಳೆ, ಕಾಮಗಾರಿ ಗೋಲ್​ಮಾಲ್​ ಬಗ್ಗೆ ಆರೋಪ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ಮಾಡಿದ್ದಾರೆ. ಬಿಎಸ್​ವೈ ಆರೋಪ ಸುಳ್ಳಾದರೆ ಅವರು ನೇಣು ಹಾಕಿಕೊಳ್ಳಲಿ ಎಂದಿದ್ದಾರೆ.ಎಂ.ಬಿ.ಪಾಟೀಲ್‌ಗೆ

ಎಂ.ಬಿ. ಪಾಟೀಲ್​ಗೆ ಎದುರಾಗುವ ಪ್ರಶ್ನೆಗಳು
Loading...

1. ಯಾರು ಬೇಕಾದ್ರೂ ಫೇಕ್​ ದಾಖಲೆ ಕೊಟ್ಟು ಆರ್ಡರ್ ಮಾಡಿ ಬಿಡಬಹುದಾ.?
2. 1ನೇ ತಾರೀಕಿನಿಂದ ಸುಮಾರು ಎರಡೂವರೆ ತಿಂಗಳು ಪರಿಶೀಲನೆಗೆ ಟೈಮ್​ ಹಿಡೀತಾ?
3. KTPC ಕಾಯ್ದೆಯಡಿ ವೆಬ್​ಸೈಟ್​ನಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಯಾಕೆ ಪ್ರಕಟ ಮಾಡಲಿಲ್ಲ..?
4. ಮಣಿಪುರದಲ್ಲಿ ಸಿಮಿಲರ್ ಕಾಮಗಾರಿ ಮಾಡಿದ್ದೇನೆ ಅಂತ ದಾಖಲೆ ಕೊಟ್ಟಿರುತ್ತೆ.
5. ಮಣಿಪುರ ಸರ್ಕಾರಕ್ಕೆ ಕರೆ ಮಾಡಿ ತಿಳ್ಕೋಳ್ಳೋಕೆ ತಿಂಗಳು ಗಟ್ಲೆ ಬೇಕಾಯ್ತಾ..?
6. ಬಿಎಸ್​ವೈ ಪತ್ರಿಕಾಗೋಷ್ಠಿ ಮಾಡ್ತಾರೆ ಅನ್ನೋ ಸುಳಿವಿನ ಹಿನ್ನಲೆಯಲ್ಲಿ ಟೆಂಡರ್ ರದ್ದು ಮಾಡಿದ್ದು ನಿಜವಲ್ಲವಾ?

ಅಧಿಕಾರಿಗಳ ತಪ್ಪಿನಿಂದ ಹೀಗಾಗಿದೆ ಎಂದು ಹೇಳುತ್ತಿರುವ ಸಚವ ಎಂ ಬಿ ಪಾಟೀಲ್​ ಮುಂದೆ ಈ ಹಲವು ಪ್ರಶ್ನೆಗಳು ಇವೆ. ಹಾರಿಕೆ ಉತ್ತರ ಕೊಟ್ಟು ಸಚಿವರು ಜಾರಿಕೊಂಡರಾ ಎನ್ನುವ ಅನುಮಾನ ಕೂಡ ಮೂಡಿದೆ.
First published:March 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ