ಹೊಸಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ವಿರುದ್ಧ ದೂರು ದಾಖಲು

ನವೆಂಬರ್ 22ರಂದು ತಮ್ಮ ಮನೆಯ ಗೃಹ ಪ್ರವೇಶ ಸಮಾರಂಭವನ್ನು ಆಯೋಜನೆ ಮಾಡಿದ್ದಾರೆ. ಚುನಾವಣೆಗೆ ಕೆಲವೇ ದಿನ ಇರುವಾಗ ಅಂದರೆ, ಡಿಸೆಂಬರ್ 1ರಂದು ತಮ್ಮ ಮಗ ಸಿದ್ದಾರ್ಥ್​ ಸಿಂಗ್​ ಮದುವೆ ಮಾಡಲು ತಯಾರಿ ನಡೆಸಿದ್ದಾರೆ.

Latha CG | news18-kannada
Updated:November 20, 2019, 10:02 PM IST
ಹೊಸಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ವಿರುದ್ಧ ದೂರು ದಾಖಲು
ಆನಂದ್ ಸಿಂಗ್
  • Share this:
ಬೆಂಗಳೂರು(ನ.20): ಹೊಸಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಬಿ.ಎಸ್​​.ಗೌಡ ದೂರು ದಾಖಲಿಸಿದ್ದಾರೆ.

ಡಿಸೆಂಬರ್​ 5ರಂದು ರಾಜ್ಯದಲ್ಲಿ ಉಪಚುನಾವಣೆ ಇದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.  ಆದರೆ ಹೊಸಪೇಟೆಯ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಖಾಸಗಿ ಸಮಾರಂಭಗಳನ್ನು ಆಯೋಜನೆ ಮಾಡಿದ್ದಾರೆ. ಇದರಿಂದ ಮತದಾರರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.‘ಫೆ. 27, ನನ್ನ ಕೊನೆಯ ದಿನ’ – ವಿಶ್ವದ ಅತಿ ಭಯಾನಕ ಜಲಪಾತಕ್ಕೆ ಜಿಗಿಯುವ ಮುನ್ನ ಚಿತ್ರದುರ್ಗದ ಸ್ಪೈಡರ್​ಮ್ಯಾನ್ ಜ್ಯೋತಿರಾಜ್ ಭಾವುಕ ಮಾತುಗಳು

ನವೆಂಬರ್ 22ರಂದು ತಮ್ಮ ಮನೆಯ ಗೃಹ ಪ್ರವೇಶ ಸಮಾರಂಭವನ್ನು ಆಯೋಜನೆ ಮಾಡಿದ್ದಾರೆ. ಚುನಾವಣೆಗೆ ಕೆಲವೇ ದಿನ ಇರುವಾಗ ಅಂದರೆ, ಡಿಸೆಂಬರ್ 1ರಂದು ತಮ್ಮ ಮಗ ಸಿದ್ದಾರ್ಥ್​ ಸಿಂಗ್​ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಈ ನೆಪದಲ್ಲಿ ಮತದಾರರನ್ನು ಆಕರ್ಷಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಸಮಾರಂಭಗಳನ್ನು ರದ್ದು ಮಾಡುವಂತೆ ಬಿ.ಎಸ್​​.ಗೌಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲೇ ಆನಂದ್​ ಸಿಂಗ್​​ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಸೆಳೆಯುವ ಹುನ್ನಾರ ನಡೆಸಿದ್ದಾರೆ. ಮೇಲ್ನೋಟಕ್ಕೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

ಅಣ್ಣನ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಶಿಫಾರಸ್ಸು ಮಾಡಿದ ಶ್ರೀಲಂಕಾ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸ
First published: November 20, 2019, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading