ನಟ ಧರ್ಮ ವಿರುದ್ಧ ಸುಲಿಗೆ, ಕೊಲೆ ಬೆದರಿಕೆಯ ಆರೋಪ: ದೂರು ದಾಖಲಾಗಿ 2 ತಿಂಗಳಾದರೂ ಬಂಧನವಿಲ್ಲ

news18
Updated:August 14, 2018, 11:02 AM IST
ನಟ ಧರ್ಮ ವಿರುದ್ಧ ಸುಲಿಗೆ, ಕೊಲೆ ಬೆದರಿಕೆಯ ಆರೋಪ: ದೂರು ದಾಖಲಾಗಿ 2 ತಿಂಗಳಾದರೂ ಬಂಧನವಿಲ್ಲ
news18
Updated: August 14, 2018, 11:02 AM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 14): ಶೂಟಿಂಗ್​ ಹೆಸರಿನಲ್ಲಿ ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಕನ್ನಡ ನಟ ಧರ್ಮ ಅವರ ವಿರುದ್ಧ ದೂರು ದಾಖಲಾಗಿ 2 ತಿಂಗಳಾದರೂ ಪೊಲೀಸರು ಇನ್ನೂ ಬಂಧಿಸಿಲ್ಲ.

ಸ್ಯಾಂಡಲ್​ವುಡ್​ನ ಪ್ರಮುಖ ನಟರ ಒತ್ತಾಯಕ್ಕೆ ಮಣಿದು ಪೊಲೀಸರು ಧರ್ಮ ಅವರನ್ನು ಇನ್ನೂ ಬಂಧಿಸಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. 2 ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಆರ್​.ಆರ್​. ನಗರದ ಹೋಟೇಲ್‌ಗೆ ಕರೆದು ಜ್ಯೂಸ್ ನೀಡಿದ್ದ ನಟ ಧರ್ಮ, ಮಹಿಳೆಯ ಪ್ರಜ್ಞೆ ತಪ್ಪಿಸಿ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿದ್ದರು. ನಂತರ ಅದೇ ವಿಡಿಯೋ‌ ತೋರಿಸಿ ಮಹಿಳೆಯಿಂದ 14 ಲಕ್ಷ ಹಣ ಪಡೆದಿದ್ದರು. ಈ‌ ಬಗ್ಗೆ ಎರಡು‌ ತಿಂಗಳ‌ ಹಿಂದೆಯೇ ಬೇಗೂರು ‌‌ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು.

14 ಲಕ್ಷ ಹಣ ಕೊಟ್ಟ ಮೇಲೂ ಮತ್ತಷ್ಟು ಹಣಕ್ಕೆ ಧರ್ಮ ಬೇಡಿಕೆ ಇಟ್ಟಾಗ ಆ ಮಹಿಳೆ ಹಣ ಕೊಡಲು‌ ನಿರಾಕರಿಸಿದ್ದರು. ಬಳಿಕ, ಮನೆಯ ಬಳಿ‌ ಬಂದು ಪ್ರಾಣ ಬೆದರಿಕೆ ಹಾಕಿದ್ದ ಧರ್ಮನ ವಿರುದ್ಧ ದೂರು‌ ನೀಡಿ ಎರಡು ತಿಂಗಳು ಆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಸಾಮಾನ್ಯ ವ್ಯಕ್ತಿಯಾಗಿದ್ದರೆ ಬಂಧಿಸಿ ಜೈಲಿಗೆ ತಳ್ಳುತ್ತಿದ್ದ ಪೊಲೀಸರು ಸೆಲೆಬ್ರಿಟಿಗಳಿಗೆ ಮಾತ್ರ ರಿಯಾಯಿತಿ ನೀಡುತ್ತಿದ್ದಾರೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಈ ಕುರಿತು ವಿಚಾರಿಸಿದರೆ ಒಂದಿಲ್ಲೊಂದು ಸಬೂಬು ಹೇಳುವ ಪೊಲೀಸರು ಆರೋಪಿ ಧರ್ಮ ಅವರನ್ನು ಹುಡುಕಿದರೂ ಕೈಗೆ ಸಿಗುತ್ತಿಲ್ಲ ಎಂಬ ಕಾರಣ ನೀಡುತ್ತಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ