ಕಳಪೆ ಔಷಧ ಖರೀದಿ ಹಗರಣ; ಮಾಜಿ ಸ್ಪೀಕರ್ ರಮೇಶ್ ‌ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

2018ರ ಜುಲೈ 6ರಂದು ಸರ್ಕಾರಕ್ಕೆ ಸಿಇಜಿ ವರದಿ ನೀಡಿದೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 14 ತಿಂಗಳು‌ ಕಳೆದರೂ ಪಿಎಸಿಗೆ ವರದಿ ಶಿಫಾರಸು ಆಗಲೇ ಇಲ್ಲ.  ಸ್ಪೀಕರ್ ಆಗಿದ್ದಾಗ‌ ತಮ್ಮ ಪ್ರಭಾವ ಬಳಸಿ ಅಧಿಕಾರ ದುರುಪಯೋಗ ಪಡಿಸಿಕೊಂಡ ರಮೇಶ್​ ಕುಮಾರ್ ಪ್ರಕರಣವನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಶಿವಾರೆಡ್ಡಿ ಸವಿವರವಾಗಿ ದೂರು ನೀಡಿದ್ದಾರೆ.

HR Ramesh | news18
Updated:August 13, 2019, 6:32 PM IST
ಕಳಪೆ ಔಷಧ ಖರೀದಿ ಹಗರಣ; ಮಾಜಿ ಸ್ಪೀಕರ್ ರಮೇಶ್ ‌ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ರಮೇಶ್ ಕುಮಾರ್
  • News18
  • Last Updated: August 13, 2019, 6:32 PM IST
  • Share this:
ಬೆಂಗಳೂರು: ಕಳಪೆ ಔಷಧ ಖರೀದಿ ಪ್ರಕರಣ ಸಂಬಂಧ ಮಾಜಿ ಸ್ಪೀಕರ್ ರಮೇಶ್ ‌ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ.

ರಮೇಶ್ ಕುಮಾರ್ ಆಪ್ತರಾಗಿದ್ದ ವಕೀಲ ಕೆ.ವಿ.ಶಿವಾರೆಡ್ಡಿ ಅವರೇ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಲೋಕಾಯುಕ್ತ ಬಲಗೊಳಿಸುವ ಮಾತು ಕೇಳಿಬರುತ್ತಿದ್ದಂತೆ ಮಾಜಿ ಸ್ಪೀಕರ್ ವಿರುದ್ಧ ದೂರು ದಾಖಲಿಸಲಾಗಿದೆ.

ದೂರು ನೀಡಿದ ಬಳಿಕ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿರುವ ಶಿವಾರೆಡ್ಡಿ, ಯು.ಟಿ.ಖಾದರ್ ಮತ್ತು ರಮೇಶ್​ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಔಷಧ ಖರೀದಿಯಲ್ಲಿ 535 ಕೋಟಿ ರೂ. ವಂಚನೆ ಎಸಗಿದ್ದಾರೆ. ಔಷಧ ಪರೀಕ್ಷೆ ಮಾಡದೆ, ಕಳಪೆ ಔಷಧ ಖರೀದಿಸಿ ಸಾರ್ವಜನಿಕರಿಗೆ ವಿತರಿಸಿದ್ದಾರೆ. ಸಿಇಜಿ ವರದಿಯಲ್ಲಿ ರಮೇಶ್ ಕುಮಾರ್ ಸಚಿವರಾಗಿದ್ದಾಗ ಈ ವಂಚನೆಯನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಸಿಇಜಿ ವರದಿ ಮೇಲೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

2018ರ ಜುಲೈ 6ರಂದು ಸರ್ಕಾರಕ್ಕೆ ಸಿಇಜಿ ವರದಿ ನೀಡಿದೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 14 ತಿಂಗಳು‌ ಕಳೆದರೂ ಪಿಎಸಿಗೆ ವರದಿ ಶಿಫಾರಸು ಆಗಲೇ ಇಲ್ಲ.  ಸ್ಪೀಕರ್ ಆಗಿದ್ದಾಗ‌ ತಮ್ಮ ಪ್ರಭಾವ ಬಳಸಿ ಅಧಿಕಾರ ದುರುಪಯೋಗ ಪಡಿಸಿಕೊಂಡ ರಮೇಶ್​ ಕುಮಾರ್ ಪ್ರಕರಣವನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಶಿವಾರೆಡ್ಡಿ ಸವಿವರವಾಗಿ ದೂರು ನೀಡಿದ್ದಾರೆ.

ಇದನ್ನು ಓದಿ: ಫೋನ್​ಗೆ ಕಳ್ಳಗಿವಿ; ಮೈತ್ರಿ ಸರ್ಕಾರದ ವೇಳೆ 300 ನಾಯಕರ ಫೋನ್​ ಟ್ಯಾಪ್​?

ಇತ್ತೀಚೆಗೆ ರಮೇಶ್​ಕುಮಾರ್ ಅವರೇ ನೀಡಿದ್ದ ಹೇಳಿಕೆಯಿಂದ ಪೇಚೆಗೆ ಸಿಲುಕಿಕೊಂಡಿದ್ದಾರೆ. ಸುಮಾರು 100 ಕೋಟಿ ರೂ.‌ಮೌಲ್ಯದ ಕಳಪೆ ಔಷಧವನ್ನು ತಾವೇ ಮುಂದೆ ನಿಂತು ಸುಟ್ಟು ಹಾಕಿಸಿರುವುದಾಗಿ ರಮೇಶ್​ ಕುಮಾರ್ ಹೇಳಿಕೆ ನೀಡಿದ್ದರು.  ಯಾರು ಈ ಕಳಪೆ ಔಷಧ ಸುಡಲು ಅನಮತಿ ನೀಡಿದರು, ಅಷ್ಟೊಂದು ಪ್ರಮಾಣದ ಔಷಧ ಖರೀದಿಸಿದ್ದು ಯಾಕೆ, ಜನರಿಗೆ ಯಾಕೆ ಆ ಔಷಧ ನೀಡಲಿಲ್ಲ, ಸಾರ್ವಜನಿಕರ ಹಣದಿಂದ ಖರೀದಿಸಿದ ಔಷಧವನ್ನು ಸುಡಲು ಕಾರಣ ಏನು ಎಂಬುದರ ಬಗ್ಗೆಯೆಲ್ಲಾ ತನಿಖೆ ನಡೆಸುವಂತೆ ಶಿವಾರೆಡ್ಡಿ ದೂರಿನಲ್ಲಿ ಕೇಳಿದ್ದಾರೆ.

ವಿಶೇಷ ವರದಿ: ರಮೇಶ್​ ಹಿರೇಜಂಬೂರ್
Loading...

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...