• Home
  • »
  • News
  • »
  • state
  • »
  • V Somanna: ಗುಂಡ್ಲುಪೇಟೆಯಲ್ಲಿ ಸಚಿವ ಸೋಮಣ್ಣ ವಿರುದ್ಧ ದೂರು ದಾಖಲು; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ

V Somanna: ಗುಂಡ್ಲುಪೇಟೆಯಲ್ಲಿ ಸಚಿವ ಸೋಮಣ್ಣ ವಿರುದ್ಧ ದೂರು ದಾಖಲು; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ

ಸಚಿವ ವಿ ಸೋಮಣ್ಣ

ಸಚಿವ ವಿ ಸೋಮಣ್ಣ

ತಪ್ಪು ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದರೆ ಕೇವಲ ಕೆಳಸ್ತರದ ಅಧಿಕಾರಿಗಳು ನೌಕರರ ಮಾತ್ರವಲ್ಲ ಮಂತ್ರಿಗಳನ್ನು KRS ಪಕ್ಷ ಬಿಡುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

  • News18 Kannada
  • Last Updated :
  • Chamarajanagar, India
  • Share this:

ಮಹಿಳೆಗೆ  ಕಪಾಳಮೋಕ್ಷ ಮಾಡಿದ್ದ ಸಚಿವ ವಿ.ಸೋಮಣ್ಣ (Minister V Somanna) ವಿರುದ್ಧ ಗುಂಡ್ಲುಪೇಟೆ (Gundlupet, Chamarajanagara) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ (Karnataka Rashtra Samiti) ದೂರು ದಾಖಲು ಮಾಡಿದ್ದು, ಸಚಿವರ ರಾಜೀನಾಮೆಗೆ ಆಗ್ರಹ ಮಾಡಿದೆ. ವಿ.ಸೋಮಣ್ಣ ಅವರನ್ನು ಶಾಸಕ (MLA) ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದೆ. ಸ್ಪೀಕರ್ (Speaker) ಮತ್ತು ರಾಜ್ಯಪಾಲರು (Governor) ಮಧ್ಯೆ ಪ್ರವೇಶ ಮಾಡಬೇಕೆಂದು ಒತ್ತಾಯಿಸಲಾಗಿದೆ. ಬಹಿರಂಗವಾಗಿ ಒಬ್ಬ ಬಡ ಅಮಾಯಕ ಅಸಹಾಯಕ ಮಹಿಳೆ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಮಾನ ಮರ್ಯಾದೆ ಇದ್ದರೆ ನೈತಿಕತೆ ಇದ್ದರೆ ಮುಖ್ಯಮಂತ್ರಿಗಳು ರೌಡಿ ವರ್ತನೆ ಮಾಡಿದ ಸೋಮಣ್ಣ ನಿಂದ ರಾಜೀನಾಮೆ ಪಡೆದು ಜೈಲಿಗೆ ಕಳುಹಿಸಬೇಕು ಎಂದು ಸಮಿತಿ ಆಗ್ರಹಿಸಿದೆ.


ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ


ವಿಧಾನಸಭಾ ಸ್ಪೀಕರ್ ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡಿ ರಾಜ್ಯದ ಜನತೆಗೆ ನ್ಯಾಯ ದೊರಕಿಸಬೇಕು. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅಜಾಮೀನಿಯ ಪ್ರಕರಣ ಆಗಿದ್ದರಿಂದ ಕೂಡಲೇ ಬಂಧಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು.


KRS ಪಕ್ಷದ ಎಚ್ಚರಿಕೆ


ವಿಧಾನ ಸಭೆ ಸ್ಪೀಕರ್ ಅವರು ವಿ ಸೋಮಣ್ಣವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ತಪ್ಪು ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದರೆ ಕೇವಲ ಕೆಳಸ್ತರದ ಅಧಿಕಾರಿಗಳು ನೌಕರರ ಮಾತ್ರವಲ್ಲ ಮಂತ್ರಿಗಳನ್ನು KRS ಪಕ್ಷ ಬಿಡುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.


ದಯವಿಟ್ಟು ಪ್ರಾಮಾಣಿಕ ಹೋರಾಟ ಮಾಡುವ ಪ್ರಜ್ಞಾವಂತ ಹೋರಾಟಗಾರರನ್ನು ಹೊಂದಿರುವ KRS ಪಕ್ಷವನ್ನು ಬೆಂಬಲಿಸಿ ಸದಸ್ಯತ್ವ ಪಡೆದುಕೊಳ್ಳಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ಅಧ್ಯಕ್ಷ ರವಿಕುಮಾರ್ ಎಂ. ಮನವಿ ಮಾಡಿಕೊಂಡಿದ್ದಾರೆ.


ಶನಿವಾರ ವೇದಿಕೆ ಮೇಲೆ ನಡೆದಿದ್ದೇನು?


ಶನಿವಾರ ಸಂಜೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ (Gundlupet, Chamarajangara) ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು (Woman) ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಮೇಲೆ ಬಂದಿದ್ದರು. ಮಹಿಳೆ ಸಚಿವರ ಕಾಲಿಗೆ ನಮಸ್ಕಾರ ಮಾಡಲು ಹೋದಾಗ ವಿ ಸೋಮಣ್ಣ (Minister V Somanna) ಕಪಾಳಮೋಕ್ಷ ಮಾಡಿದ್ದಾರೆ.


ಸಚಿವರಾಗೋಕೆ ಸೋಮಣ್ಣ ಅನ್​ಫಿಟ್: ಸಿದ್ದರಾಮಯ್ಯ


ಸೋಮಣ್ಣ ಸಚಿವನಾಗೋಕೆ ನಾಲಾಯಕ್, ಒಬ್ಬ ಮಂತ್ರಿ ಹೆಣ್ಣು ಮಗಳ ಮೇಲೆ ಅಥವಾ ಹಿಂದುಳಿದವರ ಮೇಲೆ ಕೈ ಮಾಡೋಕಾ ಅಧಿಕಾರ ಕೊಟ್ಟಿರೋದಾ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.


ಇದನ್ನೂ ಓದಿ:  V Somanna: ಬೇಟಿ ಬಚಾವೋ ಘೋಷಣೆ ಗೌರವಿಸೋದಾದ್ರೆ ಸೋಮಣ್ಣರನ್ನು ವಜಾಗೊಳಿಸಿ: ಕಾಂಗ್ರೆಸ್

 ಸೋಮಣ್ಣ ಅಂತವರಲ್ಲೇ ಮಂತ್ರಿ ಮಂಡಳದಲ್ಲಿ ಇರಬಾರದು. ತಾಳ್ಮೆ ಸಹನೆ ಇಲ್ಲ ಅಂದ್ರೆ, ಸಮಸ್ಯೆ ಪರಿಹರಿಸೋಕೆ ಆಗಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಸಚಿವನಾಗೋಕೆ ಸೋಮಣ್ಣ ಅನ್ ಫಿಟ್ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ:  Asaduddin Owaisi: ಬೇಕಾದ್ರೆ RSSನವರು ಹೆಚ್ಚು ಮಕ್ಕಳನ್ನು ಹುಟ್ಟಿಸಲಿ, ನಾವು ಹುಟ್ಟಿಸಲ್ಲ; ಓವೈಸಿ
 ಮಹಿಳೆ ಹೇಳಿದ್ದೇನು?


ಹಂಗಳ ಗ್ರಾಮಕ್ಕೆ ನಿನ್ನೆ ಸಚಿವರು ಬಂದಿದ್ದರು. ವೇದಿಕೆ ಮೇಲೆ ಹೋಗಿ ಎಲ್ಲರೂ ನಿವೇಶನ ಕೇಳ್ತಿದ್ದರು. ನಾನು ತುಂಬಾ ಬಡವಿ ಸರ್. ನಾನು ಎಲ್ಲರಂತೆ ವೇದಿಕೆ ಮೇಲೆ ಹೋಗಿ ನನಗೂ ಸೈಟ್ ಕೊಡಿ ಅಂತ ಕೇಳಲು ಹೋದೆ. ಈ ವೇಳೆ ನಾನು ಕಾಲಿಗೆ ಬಿದ್ದಾಗ ಕ್ಷೆಮ ಕೇಳಿ ನನ್ನನ್ನು ಮೇಲೆತ್ತಿ ಸಮಾಧಾನ ಮಾಡಿದರು.

ಯಾರೋ ಹೊಡೆದ್ರು ಅಂತ ತಪ್ಪು ತಿಳಿದುಕೊಂಡಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡಿಸಿ ಒಳ್ಳೆದು ಮಾಡಿದ್ದಾರೆ. ನಾನು ಕೊಟ್ಟಿರುವ ನಾಲ್ಕು ಸಾವಿರ ರೂಪಾಯಿಯನ್ನು ಸಹ ಮರಳಿ ಕೊಡಿಸಿದರು. ನನ್ನ ಮಕ್ಕಳಿಗೆ ದಾರಿ ಮಾಡಿ ಕೊಟ್ಟಿರುವ ಸಚಿವರಿಗೆ ಒಳ್ಳೆಯದಾಗಲಿ.

Published by:Mahmadrafik K
First published: