ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ದೂರು ದಾಖಲು

news18
Updated:September 7, 2018, 4:53 PM IST
ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ದೂರು ದಾಖಲು
news18
Updated: September 7, 2018, 4:53 PM IST
- ಕಿರಣ ಕೆ.ಎನ್.ನ್ಯೂಸ್ 18 ಕನ್ನಡ 

ಬೆಂಗಳೂರು ( ಸೆ.07) :   ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ದ ಹೈಕೋರ್ಟ್ ವಕೀಲ ಅಮೃತೇಶ್​ ಎನ್ನುವವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಸೆ.05ರಂದು ಹತ್ಯೆ ನಡೆದು ಒಂದು ವರ್ಷ ತುಂಬಿದ ಸಂದರ್ಭ ವಿವಾದಿತ ಬೋರ್ಡ್ ಧರಿಸಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ನಾನು ಕೂಡ ನಗರ ನಕ್ಸಲ್ ಎಂದು ಬೋರ್ಡ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈಗಾಗಲೇ ನಕ್ಸಲ್ ಸಂಘಟನೆ ನಿಷೇಧಿತ ಸಂಘಟನೆ ಹಾಗಾಗಿ ಇವರು ಬಹಿರಂಗವಾಗಿ ನಾನು ನಕ್ಸಲ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ..
ಈ ರೀತಿ ಸಾರ್ವಜನಿಕರ ಸಮಾರಂಭದಲ್ಲಿ ನಕ್ಸಲ್ ಎಂದು ಹೇಳಿಕೊಂಡು ಓಡಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿರುವ ವಕೀಲ ಅಮೃತೇಶ್ ಸಾಹಿತಿ ಗಿರೀಶ್ ಕಾರ್ನಾಡ್ ರನ್ನು ಬಂಧಿಸುವಂತೆ ದೂರು ನೀಡಿದ್ದಾರೆ.

ಅಲ್ಲದೇ ಈ ಹಿಂದೆ ಮಹಾರಾಷ್ಟ್ರ ಸಿಪಿಐ ಮಾವೋಯಿಸ್ಟ್ ಬೆಂಬಲಿಗ ಸಂಘಟನೆಯಾಗಿರೋ ಕಬೀರ್ ಕಾಲಾ ಮಂಚ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಿಷೇಧಿತ ಸಂಘಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಶ್ಯಕತೆ ಕಾರ್ನಾಡ್​ ಅವರಿಗೆ ಏನು ಇತ್ತು? ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸರನ್ನು ಆಗ್ರಹಿಸಿದ್ದಾರೆ.ಸದ್ಯ ದೂರ ಸ್ವೀಕರಿಸಿದ ಪೊಲೀಸರು ಘಟನೆ ನಡೆದಿರುವುದು ಟೌನ್ ಹಾಲ್ ನಲ್ಲಿ ಹಾಗಾಗಿ ಅದು ಹಲಸೂರು ಗೇಟ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ಅಮೃತೇಶ್ ದೂರನ್ನು ವರ್ಗಾಹಿಸಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ