ಒಂದಿಷ್ಟು ಏರಿಯಾಗಳಲ್ಲಿ ವ್ಯಾಪಾರ (Road side Business) ನಡೆಸಬೇಕಾದ್ರೆ ಅಲ್ಲಿಯ ರೌಡಿಗಳಿಗೆ (Rowdy), ಪೊಲೀಸರಿಗೆ (Police)ಹಫ್ತಾ (ದುಡ್ಡು) ಕೊಡುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಇಂತಹ ಘಟನೆಗಳು ನಿಜವಾಗಿ ನಡೆದಿರುವ ಬಗ್ಗೆ ಆಗಾಗ ವರದಿಗಳು ಆಗುತ್ತಿರುತ್ತವೆ. ಅಂಹವುದೇ ಒಂದು ಘಟನೆ ನಡೆದಿದ್ದು, ಈ ಸಂಬಂಧ ಕೊಡಿಗೇಹಳ್ಳಿ (Kodigehalli Police Stattion) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೇಕ್ ಸಲಾಂ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಶೇಕ್ ಸಲಾಂ ಎಂಬವರು ಬ್ಯಾಟರಾಯನಪುರ (Byatarayanapur) ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ತಳ್ಳೋ ಗಾಡಿಯಲ್ಲಿ ಬಜ್ಜಿ ಬೋಂಡಾ ವ್ಯಾಪಾರ (Bajji And Bonda Selling) ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಶೇಕ್ ಸಲಾಂ ಬಳಿ ಬಂದ ಅಪರಿಚಿತ ಮಹಿಳೆಯೋರ್ವಳು, ತಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಪುಕ್ಕಟ್ಟೆಯಾಗಿ ಬಜ್ಜಿ, ಬೋಂಡಾ ಪಡೆದುಕೊಂಡಿದ್ದಾಳೆ. ಮಹಿಳೆ ಮೇಲೆ ಅನುಮಾನ ಬಂದ ಹಿನ್ನೆಲೆ ಶೇಕ್ ಸಲಾಂ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ವ್ಯಾಪಾರ ಮಾಡುತ್ತಿರುವಾಗ ನನ್ನ ಬಳಿ ಬಂದ ಮಹಿಳೆಯೊಬ್ಬಳು ನಾನು ಕೊಡಿಗೇಹಳ್ಳಿ ಠಾಣೆಯಲ್ಲಿ ಪೊಲೀಸ್ ಇದ್ದೀನಿ. ಇಲ್ಲಿ ಅಂಗಡಿ ಹಾಕಿಕೊಳ್ಳಲು ನಾನು ಬಂದಾಗಲೆಲ್ಲಾ, ಕೇಳಿದಷ್ಟು ಬಜ್ಜಿ, ಬೋಂಡಾ ನೀಡಬೇಕು ಎಂದು ತಿಳಿಸಿದರು. ನಾನು ಅವರು ಪೊಲೀಸ್ ಇರಬಹುದು ಎಂದು ತಿಳಿದು ನನ್ನ ವ್ಯಾಪಾರಕ್ಕೆ ಎಲ್ಲಿ ತೊಂದರೆ ಆಗುತ್ತೆ ಎಂದು ಹೆದರಿ ಬಂದಾಗಲೆಲ್ಲಾ ಬಜ್ಜಿ ಬೋಂಡಾ ನೀಡಿದ್ದಾನೆ.
ಬಂದಾಗೆಲ್ಲಾ ಬಜ್ಜಿ ಬೋಂಡಾ ತಿಂದು ಸುಮಾರು 40 ರಿಂದ 50 ರೂಪಾಯಿಗಳಷ್ಟು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಈ ರೀತಿ ನಡೆಯುತ್ತಿದೆ. ಒಂದು ತಿಂಗಳಲ್ಲಿ ಸುಮಾರು 8 ರಿಂದ 10 ಬಾರಿ ಆ ಮಹಿಳೆ ನನ್ನ ಅಂಗಡಿ ಬಂದು ಬಜ್ಜಿ, ಬೋಂಡಾ ತಿಂದು ಪಾರ್ಸೆಲ್ ತೆಗೆದುಕೊಂಡು ಹೋಗಿರುತ್ತಾರೆ.
112 ಸಂಖ್ಯೆಗೆ ಕರೆ ಮಾಡಿದಾಗ ಮಹಿಳೆ ಎಸ್ಕೇಪ್
ಜನವರಿ 5ರಂದು ಸಂಜೆ 5.30ರ ವೇಳೆಗೆ ಬಂದ ಮಹಿಳೆ ಎಗ್ ಬೋಂಡಾ ತಿಂದು, ವಿಧ-ವಿಧವಾದ ಬಜ್ಜಿಗಳನ್ನು ಪಾರ್ಸೆಲ್ ಮಾಡಲು ಹೇಳಿದರು. ಅದಕ್ಕೆ ನಾನು 100 ರೂಪಾಯಿ ಆಗುತ್ತೆ ಎಂದಾಗ ನಾಳೆಯೇ ನಿನ್ನ ಅಂಗಡಿಯನ್ನು ಎತ್ತಂಗಡಿ ಮಾಡಿಸುವೆ ಎಂದು ಬೆದರಿಕೆ ಹಾಕಿದರು. ನಾನು ಕೂಡಲೇ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದೆ. ನಾನು ಫೋನ್ ಮಾಡುತ್ತಿದ್ದಂತೆ ಮಹಿಳೆ ಕೆಎ 04, ಹೆಚ್ಡಿ 1708 ಸಂಖ್ಯೆಯ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಮಹಿಳೆ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ
ಫೋನ್ ಮಾಡಿದ ಕೆಲ ಸಮಯದ ನಂತರ ನಾನು ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ಬಂದು ಮಾಹಿತಿ ಪಡೆದುಕೊಂಡರು. ನಂತರ ಠಾಣೆಗೆ ಬಂದು ದೂರು ಸಲ್ಲಿಸುವಂತೆ ತಿಳಿಸಿದರು. ಅದರಂತೆ ದೂರು ದಾಖಲಿಸಿದ್ದೇನೆ ಎಂದು ಶೇಕ್ ಸಲಾಂ ಹೇಳಿದ್ದಾರೆ.
ಪೊಲೀಸ್ ಎಂದು ಸುಳ್ಳು ಹೇಳಿ ದೌರ್ಜನ್ಯ ಎಸಗಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶೇಕ್ ಸಲಾಂ ಆಗ್ರಹಿಸಿದ್ದಾರೆ.
ಎತ್ತಿನಗಾಡಿ ಓಟ, ಓರ್ವ ಬಲಿ!
ಎತ್ತಿನಗಾಡಿ ಓಟದ ಸ್ಪರ್ಧೆಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಮಂಡ್ಯ ತಾಲೂಕಿನ ಚಿಕ್ಕ ಮಂಡ್ಯದಲ್ಲಿ ನಡೆದಿದೆ.
ಇದನ್ನೂ ಓದಿ: Bengaluru: ರಾಜಧಾನಿಯಲ್ಲಿ ಅಮಾನವೀಯ ಘಟನೆ; ಮಲಗಿದ್ದ ನಾಯಿ ಮೇಲೆ ಕಾರ್ ಹತ್ತಿಸಿದ ದುಷ್ಟ!
ಚಿಕ್ಕಮಂಡ್ಯದಲ್ಲಿ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯುತ್ತಿದೆ. ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದವರ ಮೇಲೆ ಎತ್ತಿನಗಾಡಿ ಹರಿದಿದೆ.
ಘಟನೆಯಲ್ಲಿ 42 ವರ್ಷದ ನಾಗರಾಜು ಎಂಬವರು ಮೃತಪಟ್ಟಿದ್ದಾರೆ. ಹುಲಿವಾನ ಗ್ರಾಮದ ಯುವಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುವಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ