ಬೆಂಗಳೂರು: ನಗರದ ಸುಧಾಮನಗರದ (Sudhama Nagar) ಸಿಕೆಸಿ ಗಾರ್ಡನ್ (CKC Garden) ನಲ್ಲಿರುವ ಉದ್ಯಮಿ ಕೆಜಿಎಫ್ ಬಾಬು (KGF Babu), ತಂಗಿ ಮನೆಗೆ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಸಂಪಂಗಿರಾಮನಗರ ಠಾಣೆ ಪೊಲೀಸರು (Sampangi Rama Nagar ) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಕೆಜಿಎಫ್ ಬಾಬು (KGF Babu) ಸಹೋದರ ನೂರ್ ಮೊಹಮ್ಮದ್, ಸಹೋದರಿ ಶಬ್ನಾಜ್ ಸುಲ್ತಾನ್ ವಾಸವಿದ್ದರು. ಘಟನೆ ಸಂಬಂಧ ಕೆಜಿಎಫ್ ಬಾಬು ತಂಗಿ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೆಜಿಎಫ್ ಬಾಬು, ನಾನು ಚುನಾವಣೆಯಲ್ಲಿ ನಿಲ್ತೀನಿ ಅಂತ ಆರ್ ಯುವರಾಜ್ ತೊಂದರೆ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ. ನಮ್ಮ ಸಹೋದರಿಗೆ ಯುವರಾಜ್ ಬಂದು ಧಮ್ಕಿ ಹಾಕಿದ್ದಾರೆ. ನಿಮ್ಮ ಅಣ್ಣನಿಗೆ ಹೇಳಿ, ನಮ್ಮ ತಂದೆ ಹಿಸ್ಟರಿ ಗೊತ್ತಿಲ್ವಾ? ನಾನು ಕಾರ್ಪೊರೇಟರ್ ಆಗಿ ನಿಮಗೆ ತೊಂದರೆ ಏನು ಕೊಟ್ಟಿಲ್ಲ ಅಂತ ಹೇಳಿ ಹೋಗಿದ್ದರು. ನಿನ್ನೆ ರಾತ್ರಿ ಬಂದು ಬೆಂಕಿ ಹಾಕಿ ಹೋಗಿದ್ದಾರೆ. ನಾನು ಚುನಾವಣೆಯಲ್ಲಿ ನಿಲ್ಲುತ್ತೇನೆ ಅಂತ ಆರ್ ಯುವರಾಜ್, ಆರ್ ವಿ ದೇವರಾಜ್ ತೊಂದರೆ ಕೊಡ್ತಿದ್ದಾರೆ. ಮನೆಗಳನ್ನ ಕಟ್ಟಿಸಿ ಕೊಡಲಾಗುತ್ತಿದೆ, ಇದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Hubballi: ಅಪ್ರಾಪ್ತೆ ಜೊತೆ 3 ಮಕ್ಕಳ ತಂದೆ ಮದುವೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ!
ಪೊಲೀಸರಿಗೆ ಕೆಜಿಎಫ್ ಬಾಬು ತಂಗಿ ದೂರು
ಇನ್ನು, ಕೆಜಿಎಫ್ ಬಾಬು ಮನೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮಾಹಿತಿ ನೀಡಿದ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರು, ಎಸ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ರಾತ್ರಿ 2:30 ರಿಂದ 2:50 ಸುಮಾರಿಗೆ ಬೆಂಕಿ ಹಾಕಿದ್ದಾರೆ.
ಯಾರು ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೆಜಿಎಫ್ ಬಾಬು ತಂಗಿ ದೂರು ನೀಡಿದ್ದಾರೆ. ಮನೆಗೆ ಬೆಂಕಿ ಹಾಕಿರುವ ಹಿನ್ನಲೆ ಮನೆಯಲ್ಲಿ ಡ್ಯಾಮೇಜ್ ಆಗಿದೆ. ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ವಿವರಿಸಿದ್ದಾರೆ.
ಇತ್ತ ಕೆಜಿಎಫ್ ಬಾಬು ಆರೋಪಗಳ ಬಗ್ಗೆ ಮಾಜಿ ಕಾರ್ಪೊರೇಟರ್ ಯುವರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಆಗಮಿಸಿ ಕೆಜಿಎಫ್ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದುವರೆಗೂ ನಮ್ಮ ತಂದೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರ ಬಗ್ಗೆ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತೆಗೆದುಕೊಂಡ ಬಳಿಕ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್!
ನನ್ನ ತೇಜೋವಧೆ ಮಾಡಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆ.ಎಸ್.ಗಾರ್ಡನ್ ಮನೆಗೆ ಬೆಂಕಿ ಇಟ್ಟಿರುವ ಘಟನೆ ಸಂಬಂಧಿಸಿದಂತೆ ಹೇಳಿಕೆ ನೀಡಿ ಪ್ರಚಾರಕ್ಕಾಗಿ ಈ ರೀತಿಯಾಗಿ ಆರೋಪಗಳು ಮಾಡಿದ್ದಾರೆ. ಟವರ್ ಡಂಪ್ ಮಾಹಿತಿ ಪಡೆದುಕೊಂಡು ತನಿಖೆ ನಡೆಸಲಿ, 1,740 ಕೋಟಿ ರೂಪಾಯಿ ಒಡೆಯನಾಗಿರುವ ಕೆಜಿಎಫ್ ಬಾಬು ಗೌರವಕ್ಕೆ ಇದು ತಕ್ಕುದಲ್ಲ. ಕ್ಷೇತ್ರದ ಜನರಿಗೆ ಸೇವೆ ಮಾಡುತ್ತಿದ್ದಾರೆ, ನೂರಾರು ಭರವಸೆ ಕೊಡುತ್ತಿದ್ದಾರೆ. ಅವರು ಸೇವೆ ಮಾಡಿದರೆ ಮಾಡಲಿ. ಆದರೆ ಕೆಜಿಎಫ್ ಬಾಬು ಅವರನ್ನ ಅಕ್ಕ-ಪಕ್ಕದಲ್ಲಿರುವವರು ಬಾಲಿಕಾ-ಬಕ್ರಾ ಮಾಡುತ್ತಿದ್ದಾರೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ