ರಮೇಶ್ ಜಾರಕಿಹೊಳಿಗೆ ಸಂಕಷ್ಟ ತಂದೊಡ್ಡಿದ್ದ ಸಿಡಿ ಪ್ರಕರಣ ಈಗ ಮಾಜಿ ಸಿಎಂ ಕುಮಾರಸ್ವಾಮಿಗೆ ಕಂಟಕವಾಗಿದೆ. ಸಿಡಿ ಬಿಡುಗಡೆಯಾದ ದಿನದಂದಲೂ ಮಾಜಿ ಸಿಎಂ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳು ಕುತೂಹಲ ಮೂಡಿಸಿವೆ. ಇದೇ ಹಿನ್ನಲೆ ಈಗ ಅವರ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಸಿಡಿ ಪ್ರಕರಣದಲ್ಲಿ ದಿನಕ್ಕೆ ಒಂದು ಸ್ಪೋಟಕ ಮಾಹಿತಿ ನೀಡುತ್ತಿರುವ ಕುಮಾರಸ್ವಾಮಿ ವಿರುದ್ಧ ಕೂಡ ಸಂಬಂಧ ಪಟ್ಟ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ವಕೀಲ ಮಂಜುನಾಥ್ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ನಡೆದಿರುವ ಹಣಕಾಸು ವ್ಯವಹಾರದ ಬಗ್ಗೆ ಕುಮಾರಸ್ವಾಮಿ ಬಹಿರಂಗವಾಗಿ ತಿಳಿಸಿದ್ದಾರೆ. ಈ ಹಿನ್ನಲೆ ಈ ಕುರಿತು ಭ್ರಷ್ಟಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಡಿ ವಿಚಾರ ಕುರಿತು ನಿನ್ನೆಯಷ್ಟೇ ಮಾತನಾಡಿದ್ದ ಎಚ್ಡಿಕೆ, ಈ ಪ್ರಕರಣ 5 ಕೋಟಿ ವ್ಯವಹಾರವೆಂದು ಮೊದಲ ದಿನವೇ ನಾನು ಹೇಳಿದ್ದೆ. ಈಗ ಒಂದೊಂದಾಗಿ ಎಲ್ಲವೂ ಹೊರಗೆ ಬರುತ್ತಿವೆ ಎಂದರು. ಅಲ್ಲದೇ ಪ್ರಕರಣದ ಮಹಾನಾಯಕ ಯಾರು ಎಂಬುದು ಈವರೆಗೆ ನನಗೂ ಗೊತ್ತಾಗಿಲ್ಲ. ಎಸ್ಐಟಿ ಅಧಿಕಾರಿಗಳೇ ವಾಸ್ತವ ಸಂಗತಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನಡೆದಿರುವ ವ್ಯವಹಾರ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಹಣ ಯಾವ ರೀತಿ ನೀಡಿದ್ದರು. ವ ಮೂಲದಿಂದ ಹಣ ರವಾನೆಯಾಗಿದೆ ಇದರ ಮೂಲ ಪತ್ತೆ ಹಚ್ಚಬೇಕೆಂದು ದೂರು ನೀಡಿದ್ದಾರೆ. ಜೊತೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸಚಿವರು ಹಣದ ವ್ಯವಹಾರ ನಡೆಸಿರುವ ವಿಚಾರ ಗೊತ್ತಿದ್ದೂ ಸದನದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಅಲ್ಲದೇ ಸಂಬಂಧ ಪಟ್ಟ ತನಿಖಳಾ ಸಂಸ್ಥೆಗಳಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಮಾಜಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಕೇಳಿಬಂದಿರುವ ನಾಪತ್ತೆಯಾದ ಪತ್ರಕರ್ತ ನಿನ್ನೆಯಷ್ಟೇ ವಿಡಿಯೋ ಮೂಲಕ ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ನನಗೆ ಯುವತಿ ಪರಿಚಯವಷ್ಟೇ ಎಂದು ತಿಳಿಸಿದ್ದ. ಈ ವಿಡಿಯೋದಿಂದ ಎಸ್ಐಟಿಗೆ ಇದ್ದ ಕೆಲವು ಅನುಮಾನಗಳು ಪರಿಹಾರಗೊಂಡಿದೆ. ಈ ವಿಡಿಯೋದಲ್ಲಿ ಮೂರು ಅಂಶಗಳನ್ನ ಗಮನಿಸಿದ ಎಸ್ಐಟಿಗೆ ಪತ್ರಕರ್ತನಿಗೆ ನೋಟಿಸ್ ಸಿಕ್ಕಿರುವುದು ಖಚಿತವಾಗಿದೆ. ವಿಡಿಯೋದಲ್ಲಿ ಪತ್ರಕರ್ತ
ನೋಟಿಸ್ ಸಿಕ್ಕರೂ ನಾನು ಹಾಜರಾಗಲ್ಲ ಎಂದಿದ್ದಾನೆ ಇದರಿಂದಾಗಿ ಅಲ್ಲಿಗೆ ನೋಟಿಸ್ ತಲುಪಿದೆ ಅನ್ನೋದು ದೃಢಮಾಡಿಕೊಳ್ಳಲಾಗಿದೆ. ಮತ್ತೆ ವಿಡಿಯೋದಲ್ಲಿ ಯುವತಿ ಪರಿಚಯದ ಬಗ್ಗೆ ಹೇಳಿರುವ ಆತ, ಪತ್ರಕರ್ತನಾಗಿ ಯುವತಿಯನ್ನ ಭೇಟಿಯಾಗಿದ್ದೆ ಎಂದಿರುವ ಹಿನ್ನಲೆ ಯುವತಿ ಜೊತೆ ಪತ್ರಕರ್ತನಿಗೆ ಸಂಪರ್ಕ ಇರುವುದು ಎಸ್ಐಟಿ ಖಚಿತ ಪಡಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ