ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ (Sringeri MLA) ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (Congress MLA TD Rajegowda) ವಿರುದ್ಧ ಚಿಕ್ಕಮಗಳೂರು ಲೋಕಾಯುಕ್ತದಲ್ಲಿ (Lokayutka) ಮತ್ತೆ ದೂರು ದಾಖಲಾಗಿದೆ. ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪ ತಾಲೂಕಿನ ವಿಜಯಾನಂದ್ ಎಂಬವರು ರಾಜೇಗೌಡ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ದೂರು (Complaint) ನೀಡಿದರು. ಆದರೆ ದೂರು ನೀಡಿದ ಒಂದೇ ವಾರದಲ್ಲಿ ದೂರನ್ನು ಹಿಂಪಡೆದಿದ್ದರು. ಆದರೆ ಇಂದು ಮತ್ತೆ ಚಿಕ್ಕಮಗಳೂರು (Chikkamagaluru) ಲೋಕಾಯುಕ್ತದಲ್ಲಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಎಂಬವರು ಶಾಸಕ ರಾಜೇಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಅಕ್ರಮ ಆಸ್ತಿ ಸಂಪಾದಿಸಿದ್ದು, ಸರಕಾರಕ್ಕೆ ಭಾರೀ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ಪ್ರಕರಣದ ತನಿಖೆಗೆ ಒತ್ತಾಯಿಸಿ ಕೊಪ್ಪ ಮೂಲದ ದಿನೇಶ್ ಹೊಸೂರು ಎಂಬವರು ಬುಧವಾರ ನಗರದ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ನಗರದ ಲೋಕಾಯುಕ್ತ ಕಚೇರಿಗೆ ಬುಧವಾರ ವಿವಿಧ ದಾಖಲೆ ಪತ್ರಗಳೊಂದಿಗೆ ಆಗಮಿಸಿದ ಅವರು, ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ಖರೀದಿ ಮತ್ತು ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದರು.
ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ದಿನೇಶ್ ಹೊಸೂರು, ಶೃಂಗೇರಿ ಶಾಸಕ ರಾಜೇಗೌಡರ ಅವರು ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಟಿ.ಡಿ.ರಾಜೇಗೌಡ ಬಳಿಯಲ್ಲಿರುವ ಆಸ್ತಿ ಎಷ್ಟು?
ಟಿ.ಡಿ.ರಾಜೇಗೌಡ ಅವರು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಅಂದು ಅವರ ವರ್ಷದ ಆದಾಯ ಆದಾಯ 34 ಲಕ್ಷ ರೂ. ಆಗಿತ್ತು. 2021-22ರ ವರ್ಷದ ಆದಾಯ 40 ಲಕ್ಷ ರೂ. ಆಗಿದ್ದು, ಇದನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ದಾಖಲಿಸಿದ್ದಾರೆ.
123 ಕೋಟಿ ರೂಪಾಯಿ ಸಾಲ
ಕೃಷಿ ಮತ್ತು ವೈಯಕ್ತಿಕ ಆದಾಯ ಅಲ್ಲದೇ ಶಾಸಕ ರಾಜೇಗೌಡ ಅವರು 123 ಕೋಟಿ ರೂ. ಬ್ಯಾಂಕ್ ಸಾಲ ಮಾಡಿದ್ದು, ಶಬಾನ್ ರಂಜಾನ್ ಟ್ರಸ್ಟ್ ಗೆ ಸೇರಿದ್ದ 266 ಎಕರೆ 38 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. ಜಮೀನು ಖರೀದಿ ಸಂಬಂಧ ಲೋಕಾಯುಕ್ತ ಅಥವಾ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Bengaluru: ಬಿಜೆಪಿ ಮುಖಂಡನ ಪುತ್ರನಿಂದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ; 15 ಮಂದಿ ವಿರುದ್ಧ ದೂರು
123 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಅವರು ಅನೇಕ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದು, ಅವರ ಪತ್ನಿ ಡಿ.ಕೆ.ಪುಷ್ಪಾ, ಮಗ ಟಿ.ಆರ್.ರಾಜದೇವ್, ಮಗಳು ಅರ್ಪಿತಾ ಯುವರಾಜ್ ಶೇ.33ರಂತೆ ಷೇರು ತಗೆದುಕೊಂಡು 123 ಕೋಟಿ ಆಸ್ತಿಯ ಸಾಲಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರ ತಾಲೂಕು ನೋಂದಣಾಧಿಕಾರಿ ಕಚೇರಿಯಲ್ಲಿ ಆಧಾರ ಖುಲಾಸೆ ಮಾಡಿಸಿದ್ದಾರೆ. 123 ಕೋಟಿ ರೂ. ಹಣ ಎಲ್ಲಿಂದ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ದೂರು ದಾಖಲಿಸಿದ್ದೇನೆ ಎಂದರು.
ದೂರು ಹಿಂಪಡೆದುಕೊಂಡಿದ್ಯಾಕೆ ವಿಜಯಾನಂದ್?
ಶಾಸಕ ಟಿ.ಡಿ.ರಾಜೇಗೌಡ ಅಕ್ರಮ ಆಸ್ತಿ ಸಂಪಾದನೆ ಹಾಗೂ ಸರಕಾರಕ್ಕೆ ತೆರಿಗೆ ವಂಚನೆ ಆರೋಪ ಸಂಬಂಧ ತನಿಖೆ ನಡೆಸುವಂತೆ ಕೊಪ್ಪ ಮೂಲದ ವಿಜಯಾನಂದ ಎಂಬವರು ಇತ್ತೀಚೆಗೆ ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: Karnataka Politics: ಸಚಿವ ವಿ ಸೋಮಣ್ಣ ಮನೆಗೆ ರೌಡಿಶೀಟರ್ ನಾಗ ಎಂಟ್ರಿ! ಗ್ಯಾಂಗ್ ಜೊತೆ ಬಂದ ಡಾನ್ ಯಾರು?
ವಿಜಯಾನಂದ ದೂರು ಸಲ್ಲಿಸಿ ಕೆಲವು ದಿನಗಳ ಬಳಿಕ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಆಮಿಷವೊಡ್ಡಿ ಪ್ರಚೋದಿಸಿದ್ದರಿಂದ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೆ, ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ದಾಖಲಿಸಿರುವ ದೂರನ್ನು ಹಿಂಪಡೆದಿದ್ದೇನೆಂದು ಹೇಳಿಕೆ ನೀಡಿದ್ದರು.
ಈ ಸಂಬಂಧ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಹರಿಯಬಿಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ