Salary Problem: ಹಬ್ಬದ ಟೈಂನಲ್ಲೇ ಸಿಗದ ಸಂಬಳ.. ಯಾದಗಿರಿಯಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ

ಎರಡು ತಿಂಗಳ ವೇತನ ಪಾವತಿ ಮಾಡಿಲ್ಲ. ಅದೆ ರೀತಿ ಮೂರು ತಿಂಗಳ ಪ್ರೋತ್ಸಾಹ ಧನ ಪಾವತಿ ಮಾಡಿಲ್ಲ. ವೇತನ ನೀಡದಕ್ಕೆ ಕೈಯಲ್ಲಿ ಹಣವಿಲ್ಲದೇ ಬದುಕು ಸಾಗಿಸುವದು ಕಷ್ಟವಾಗಿದೆ. ನೌಕರರು ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಹಣವಿಲ್ಲದೇ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ.

ಆರೋಗ್ಯಾಧಿಕಾರಿಗಳಿಂದ ಪ್ರತಿಭಟನೆ

ಆರೋಗ್ಯಾಧಿಕಾರಿಗಳಿಂದ ಪ್ರತಿಭಟನೆ

  • Share this:
ಯಾದಗಿರಿ: ರಾಜ್ಯದಲ್ಲಿ ಈಗಾಗಲೇ ಕೋವಿಡ್(Covid) ಪ್ರಕರಣಗಳು ದಿನ ನಿತ್ಯವೂ ಸ್ಪೋಟವಾಗುತ್ತಿವೆ. ಕೋವಿಡ್ ಕಡಿವಾಣಕ್ಕೆ ಆರೋಗ್ಯ ಇಲಾಖೆ ನೌಕರರ ಸೇವೆ ಅತಿ ಮುಖ್ಯವಾಗಿದೆ. ಜೀವದ ಹಂಗು ತೊರೆದು ಆರೋಗ್ಯ ಇಲಾಖೆ(Health Department) ನೌಕರರು ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಕೊರೊನಾ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಈಗ ಮೂರನೇ ಅಲೆ(3rd Wave) ಆತಂಕವಿದೆ. ಮೂರನೇ ಅಲೆ ಕಡಿವಾಣ ಹಾಕಲು ನೌಕರರ ಸೇವೆ ಅತಿ ಮುಖ್ಯವಾಗಿದೆ. ಆದರೆ,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕಾರ್ಯ ಮಾಡಲು ಮುಂದಾಗಿದ್ದಾರೆ. ಆದರೆ, ರೋಗಿಗಳ ಜೀವ ಉಳಿಸುವ ಕಾರ್ಯ ಮಾಡುವ ನೌಕರರ ಜೀವನ ನಡೆಸುವದು ಕಷ್ಟಕರವಾಗಿದೆ. ಯಾದಗಿರಿ ಜಿಲ್ಲಾದ್ಯಂತ ಸರಕಾರಿ ಆಸ್ಪತ್ರೆ(Hospitals)ಯಲ್ಲಿ 145 ಸಮುದಾಯ ಆರೋಗ್ಯಧಿಕಾರಿಗಳು  ಕಮ್ಯೂನಿಟಿ ಹೆಲ್ತ್ ಆಫಿಸರ್ (ಸಿಎಚ್​ಒ) ಸೇವೆ ಮಾಡುತ್ತಿದ್ದಾರೆ. ಆದರೆ, ಸರಕಾರ ಸರಿಯಾಗಿ ವೇತನ ಹಾಗೂ ಪ್ರೋತ್ಸಾಹ ಧನ ಪಾವತಿ ಮಾಡುತ್ತಿಲ್ಲ. ಸರಕಾರದ ನಿಷ್ಕಾಳಜಿಗೆ ನೌಕರರು ನರಕಯಾತನೆ ಜೀವನ ನಡೆಸುವಂತಾಗಿದೆ.

2 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ!

ಎರಡು ತಿಂಗಳ ವೇತನ ಪಾವತಿ ಮಾಡಿಲ್ಲ. ಅದೆ ರೀತಿ ಮೂರು ತಿಂಗಳ ಪ್ರೋತ್ಸಾಹ ಧನ ಪಾವತಿ ಮಾಡಿಲ್ಲ. ವೇತನ ನೀಡದಕ್ಕೆ ಕೈಯಲ್ಲಿ ಹಣವಿಲ್ಲದೇ ಬದುಕು ಸಾಗಿಸುವದು ಕಷ್ಟವಾಗಿದೆ. ನೌಕರರು ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಹಣವಿಲ್ಲದೇ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ 145 ನೌಕರರು ಸೇವೆ ಮಾಡುತ್ತಿದ್ದು,  ಯಾದಗಿರಿ ಜಿಲ್ಲೆಯಲ್ಲಿ ಕೆಲಸ ಮಾಡುವ ನೌಕರರಿಗೆ ಎರಡು ತಿಂಗಳ ವೇತನ ಹಾಗೂ ಮೂರು ತಿಂಗಳ ಪ್ರೋತ್ಸಾಹ ಧನ ಪಾವತಿ ಮಾಡಿಲ್ಲ. ಇದರಿಂದ ಅಕ್ರೋಶಗೊಂಡ ನೌಕರರು ಯಾದಗಿರಿ ನಗರದ ಕನಕ ವೃತ್ತದ ಸಮೀಪವಿರುವ ಡಿಎಚ್ ಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಡಿಎಚ್​​ಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ರಾಜ್ಯದಲ್ಲಿ 90 ಸಾವಿರಕ್ಕೂ ಅಧಿಕ ಸಕ್ರಿಯ ಕೊರೊನಾ ಕೇಸ್: ಮತ್ತೆ Lockdown ಆಗುತ್ತಾ? ಸಚಿವ Sudhakar ಮಾಹಿತಿ

ವೇತನ ಪಾವತಿ ಮಾಡಲು ಒತ್ತಾಯ!

ವೇತನ ಪಾವತಿ ಮಾಡಬೇಕು ಹಾಗೂ ಬಾಕಿ ಇರುವ ಪ್ರೋತ್ಸಾಹ ಧನ ಪಾವತಿ ಮಾಡಬೇಕೆಂದು ಒತ್ತಾಯ ಮಾಡಿದರು. ಡಿಎಚ್​​ಒ ಅವರು ಪ್ರತಿಭಟನೆ ಸ್ಥಳಕ್ಕೆ ಬರಬೇಕೆಂದು ಪಟ್ಟು ಹೀಡಿದರು. ಈ ವೇಳೆ ಹೋರಾಟಗಾರರಿಗೆ ಮನವೊಲಿಸಲು  ಅಧಿಕಾರಿಗಳು ಹರಸಾಹಸ ಪಟ್ಟರು. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಭಟನೆ ನಿರತ ಸಿಎಚ್ ಒ ಶ್ವೇತಾ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಾವು ಜೀವದ ಹಂಗು ಮರೆತು ಕೆಲಸ ಮಾಡಿದ್ದೆವೆ. ನಮಗೆ ನಿಗದಿ ಪಡಿಸಿದ ಕೆಲಸಗಿಂತ ಹೆಚ್ಚಿನ ಕೆಲಸ ನೀಡುತ್ತಿದ್ದಾರೆ. ಒತ್ತಡದ ನಡುವೆ ಕಾರ್ಯ ಮಾಡುತ್ತಿದ್ದೆವೆ. ಆದರೆ, ಎರಡು ತಿಂಗಳ ವೇತನ ಹಾಗೂ ಬಾಕಿ ಇರುವ ಪ್ರೋತ್ಸಾಹ ಧನ ನೀಡಬೇಕು. ಹಣ ವಿಲ್ಲದಕ್ಕೇ ನಾವು ಸಾಲ ಮಾಡಿ ಜೀವನ ನಡೆಸುತ್ತಿದ್ದೆವೆಂದು ನೋವು ತೊಡಗಿಕೊಂಡರು.

ಇದನ್ನು ಓದಿ : ಸಿನಿಮಾ ಶೈಲಿಯಲ್ಲಿ ಕಳ್ಳನನ್ನ ಹಿಡಿದ ಪೊಲೀಸ್ ಅಧಿಕಾರಿಗೆ ಬಹುಮಾನ

ಹಣ ಕಡಿತದಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಅಧಿಕಾರಿಗೆ ನಮ್ಮ ನೋವು ತೋಡಿಕೊಳ್ಳಲು ಬಂದರೆ ನಮ್ಮ ಆಲಿಸುತ್ತಿಲ್ಲ. ನಮಗೆ ಕಿರುಕುಳ ಆಗುತ್ತಿದೆ. ಡಿಎಚ್‌ಒ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು. ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ ಸೇರಿದಂತೆ ವಿವಿಧ ಕಡೆಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Published by:Vasudeva M
First published: