• Home
  • »
  • News
  • »
  • state
  • »
  • Communal Clash: ರಾಮನಗರ, ಕೋಲಾರದಲ್ಲಿ ದಲಿತರು, ಸವರ್ಣಿಯರ ನಡುವೆ ಗಲಾಟೆ; ಪ್ರಕರಣ ದಾಖಲು

Communal Clash: ರಾಮನಗರ, ಕೋಲಾರದಲ್ಲಿ ದಲಿತರು, ಸವರ್ಣಿಯರ ನಡುವೆ ಗಲಾಟೆ; ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸರ (Police) ಎದುರೇ ಈ ಗಲಾಟೆ ನಡೆದಿದೆ. ಕೊನೆಗೆ 8 ಮಂದಿ ಸವರ್ಣೀಯರ ವಿರುದ್ಧ ಜಾತಿ ನಿಂದನೆ, ದೌರ್ಜನ್ಯ ಮಾಡಿದ್ರು ಅಂತ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • Share this:

ದಲಿತರ ಬೀದಿಗೆ (Dalit Area) ದೇವರ ಉತ್ಸವ (Devara Utsava) ಹೋಗದಿದ್ದಕ್ಕೆ ಮಾರಾಮಾರಿ ನಡೆದಿದೆ. ಪೊಲೀಸರ ಎದುರೇ ದಲಿತರು- ಸವರ್ಣಿಯರು  ಕೈಕೈ ಮಿಲಾಯಿಸಿದ್ದಾರೆ. ಈ ಘಟನೆ ಕೋಲಾರ ತಾಲೂಕಿನ ದಾನವಹಳ್ಳಿ‌ (Danavahalli, Kolar) ಗ್ರಾಮದಲ್ಲಿ ನಡೆದಿದೆ. ದಸರಾ ಹಬ್ಬದ ಪ್ರಯುಕ್ತ ಗಂಗಮ್ಮ, ಕಾಟೇರಮ್ಮ ದೇವರ ಮೆರವಣಿಗೆ ಆಯೋಜಿಸಿದ್ರು. ದೇವರ ಮೆರವಣಿಗೆ ವೇಳೆ ದಲಿತರ ಬೀದಿಗೆ ದೇವರ ಉತ್ಸವ ಹೋಗಬಾರದು ಅಂತ ಸವರ್ಣಿಯರಲ್ಲಿ ಕೆಲವರು ಗಲಾಟೆ ಮಾಡಿದ್ರಂತೆ. ಇದನ್ನ ದಲಿತರು ಪ್ರಶ್ನೆ ಮಾಡಿದ್ದಾರೆ. ಎರಡೂ ಗುಂಪಿನ ಮಧ್ಯೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ. ಕಲ್ಲು, ದೊಣ್ಣೆ, ಇಟ್ಟಿಗೆಗಳಿಂದ ಹಲ್ಲೆನೂ ಮಾಡ್ಕೊಂಡ್ರು. ಪೊಲೀಸರ (Police) ಎದುರೇ ಈ ಗಲಾಟೆ ನಡೆದಿದೆ. ಕೊನೆಗೆ 8 ಮಂದಿ ಸವರ್ಣೀಯರ ವಿರುದ್ಧ ಜಾತಿ ನಿಂದನೆ, ದೌರ್ಜನ್ಯ ಮಾಡಿದ್ರು ಅಂತ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಇನ್ನು ಸಮಸ್ಯೆ ಬಗೆಹರಿಸೋಕೆ ವೇಮಗಲ್​ ಠಾಣೆ ಪೊಲೀಸರು ಬಂದಿದ್ರು. ಪೊಲೀಸರ ಎದುರೇ ಗಂಗಮ್ಮನ ಉತ್ಸವ ಮಾಡುವಂತೆ ಅರ್ಚಕ ಚಿಕ್ಕಪ್ಪಯ್ಯ ಪಟ್ಟು ಹಿಡಿದ. ದೇವರು ಮೈಮೇಲೆ ಬಂದಿದೆ ಅಂತ ಕೂಗಾಡಿದ. ಪೊಲೀಸರು ಸೈಲೆಂಟಾಗೇ ಎಲ್ಲಾ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸಿದರು.


ರಾಮನಗರದಲ್ಲಿಯೂ ಗಲಾಟೆ


ದೇವಾಲಯದ ಪ್ರವೇಶದ ವಿಚಾರದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೇಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಮುಳ್ಳಕಟ್ಟಮ್ಮ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ಇರಲಿಲ್ಲ. ಇದೇ ವಿಚಾರಕ್ಕೆ ಹಿಂದಿನಿಂದಲೂ ಗ್ರಾಮದಲ್ಲಿ ಸಂಘರ್ಷವಾಗ್ತಿತ್ತು. ವಿಜಯದಶಮಿಯ ಅಂಗವಾಗಿ ದೇವರ ಉತ್ಸವ ನಡೆಯುತ್ತಿತ್ತು.


ತಮಟೆ ವಿಚಾರಕ್ಕೆ ಶುರುವಾದ ಗಲಾಟೆ


ಮಧ್ಯಾಹ್ನದ ನಂತರ ಅರೆ ತಮಟೆಯವರು ಎಸ್ಕೇಪ್ ಆಗಿದ್ದಾರೆ. ಈ ವೇಳೆ ಗ್ರಾಮದಲ್ಲಿ ತಮಟೆ ಬಡಿಯದಂತೆ ದಲಿತರು ಗಲಾಟೆ ಮಾಡಿ ಕಳುಹಿಸಿದ್ದಾರೆ ಅಂತ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಯಾಗಿದೆ.  ಹರೀಶ್, ಸಂಜು, ಹನುಮಂತರಾಜು ಎಂಬುವರಿಗೆ ಗಾಯವಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.


ದೇವರ ವಿಗ್ರಹ ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ


60 ಸಾವಿರ ರೂಪಾಯಿ ದಂಡ ಹಾಕಿದ್ದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಸೇರಿದಂತೆ ಎಂಟು ಜನರ ವಿರುದ್ಧ ಕೋಲಾರ ಜಿಲ್ಲೆಯ ಮಾಲೂರು (Maluru, Kolar) ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ (Masti Police Station) ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Love Jihad: ದಲಿತ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಲವ್ ಜಿಹಾದ್‌ಗಾಗಿ ನಡೆದಿತ್ತಾ ವಾಮಾಚಾರ?


ಉಳ್ಳೇರಹಳ್ಳಿ (Ullerahalli) ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಶೋಭಾ ದಂಪತಿಯ 15 ವರ್ಷದ ಮಗ ಮೆರವಣಿಗೆ ವೇಳೆ ದೇವರ ವಿಗ್ರಹ ಮತ್ತು ಪರಿಕರಗಳನ್ನು ಮುಟ್ಟಿದ್ದಾನೆ. ದಲಿತ ಕುಟುಂಬದ ಹುಡುಗ ದೇವರ ವಿಗ್ರಹ ಮುಟ್ಟಿದ್ದರಿಂದ ಅಪವಿತ್ರವಾಗಿದೆ ಎಂದು ದಲಿತ ಕುಟುಂಬಕ್ಕೆ ದಂಡ ವಿಧಿಸಲಾಗಿತ್ತು.


ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ


ನಿಮ್ಮ ಮಗ ವಿಗ್ರಹ ಮತ್ತು ಸಾಮಾನು ಮುಟ್ಟಿದ್ದರಿಂದ ದೇವಸ್ಥಾನಕ್ಕೆ ಸುಣ್ಣ ಬಣ್ಣಗೊಳಿಸಬೇಕು. ಆದ್ದರಿಂದ ಇದಕ್ಕೆ ತಗುಲುವ 60 ಸಾವಿರ ರೂ. ನಿಮ್ಮ ಕುಟುಂಬ ನೀಡಬೇಕೆಂದು ಹೇಳಿದ್ದಾರೆ. ಶೋಭಾ ಮತ್ತು ರಮೇಶ್ ದಿನಗೂಲಿ ನೌಕರರಾಗಿದ್ದು ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ.


ಇದನ್ನೂ ಓದಿ:  Untouchability: ದೇವಸ್ಥಾನದೊಳಗೆ ಹೋಗಿದ್ದಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿದ ಗ್ರಾಮಸ್ಥರು, ಎಲ್ಲಾ ದಲಿತರೂ ಈಗ ದೇವಾಲಯದೊಳಗೆ


ಪ್ರಕರಣ ದಾಖಲು


ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ನಾರಾಯಣಸ್ವಾಮಿ, ವೆಂಕಟೇಶಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಸ್ತಿ ಠಾಣೆಯ ಪೊಲೀಸ್ ನಿರೀಕ್ಷಕ ವಸಂತ್ ಹೇಳಿದ್ದಾರೆ.

Published by:Mahmadrafik K
First published: