ರೇಸ್ ಕೋರ್ಸ್ ಕಚೇರಿ ಮೇಲೆ ಸಿಸಿಬಿ ದಾಳಿ : 96 ಲಕ್ಷ ನಗದು ಹಣ ವಶ, 40 ಕ್ಕೂ ಹೆಚ್ಚು ಜನರ ಬಂಧನ

ದಂಧೆಯಲ್ಲಿ ಪಾಲ್ಗೊಂಡಿದ್ದ 40 ಜನರನ್ನ ವಶಕ್ಕೆ ಪಡೆಯಲಾಗಿದೆ. ಬುಕ್ಕಿಗಳು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ. ಸೆಕ್ಷನ್ 420 ಅಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

news18-kannada
Updated:December 6, 2019, 9:27 PM IST
ರೇಸ್ ಕೋರ್ಸ್ ಕಚೇರಿ ಮೇಲೆ ಸಿಸಿಬಿ ದಾಳಿ : 96 ಲಕ್ಷ ನಗದು ಹಣ ವಶ, 40 ಕ್ಕೂ ಹೆಚ್ಚು ಜನರ ಬಂಧನ
ಕುದುರೆ ರೇಸ್
  • Share this:
ಬೆಂಗಳೂರು(ಡಿ.06): ರೇಸ್ ಕೋರ್ಸ್ ಕಚೇರಿಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 40ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 96 ಲಕ್ಷ ನಗದು ಹಣವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ ಎಂದು  ನಗರ ಪೊಲೀಸ್ ಆಯಕ್ತ ಭಾಸ್ಕರ್​ ರಾವ್​​​ ಸ್ಪಷ್ಟಪಡಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಬೆಟ್ಟಿಂಗ್‌ನಂತೆಯೇ ಕುದುರೆ ರೇಸ್‌ನಲ್ಲೂ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂತು. ಓರ್ವ ವ್ಯಕ್ತಿ, ಕುದುರೆ ರೇಸ್‌ನಲ್ಲಿ ದಂಧೆ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ದರು. ಅಪರಾಧ ವಿಭಾಗದ ಜಂಟಿ ಆಯುಕ್ತರು ಸಂದೀಪ್ ಪಾಟೀಲ್‌ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದರು.

ದಂಧೆಯಲ್ಲಿ ಪಾಲ್ಗೊಂಡಿದ್ದ 40 ಜನರನ್ನ ವಶಕ್ಕೆ ಪಡೆಯಲಾಗಿದೆ. ಬುಕ್ಕಿಗಳು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ. ಸೆಕ್ಷನ್ 420 ಅಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.

ಸರ್ಕಾರಕ್ಕೆ ಎಷ್ಟು ಕೋಟಿ ವಂಚನೆಯಾಗಿದೆ ?

ಸರ್ಕಾರಕ್ಕೆ ಎಷ್ಟು ಕೋಟಿ ವಂಚನೆ ಯಾಗಿದೆ? ದಾಖಲೆಗಳ ಬಗ್ಗೆ ಪರಿಶೀಲನೆ ಮಾಡ್ತಿದ್ದೇವೆ. ಈ ಅಕ್ರಮದ ಬಗ್ಗೆ ಜಿಎಸ್‌ಟಿ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 20 ಕೌಂಟರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಬೆಟ್ಟಿಂಗ್ ನಲ್ಲಿ ಕುದುರೆಗಳ ಮಾಲೀಕರು, ಜಾಲಿಗಳು, ಬುಕ್ಕಿಗಳು, ಅಧಿಕಾರಿವರ್ಗ, ಸಿಬ್ಬಂದಿ ಎಲ್ಲರ ಪಾತ್ರವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಶೇ. 28 ರಷ್ಟು ಜಿಎಸ್‌ಟಿ ತೆರಿಗೆ ವಂಚಿಸಿ ದಂಧೆಕೋರರು ಬೆಟ್ಟಿಂಗ್ ನಡೆಸುತ್ತಿದ್ದರು. ಇವರ ದಂಧೆಯಿಂದ ಬಂದ ಹಣ ಯಾರಿಗೆ ತಲುಪುತ್ತಿತ್ತು? ದಂಧೆಯ ಕಿಂಗ್ ಪಿನ್ ಯಾರು? ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಪ್ರತಿದಿನ  5 ರಿಂದ 6 ಕೋಟಿ ಅವ್ಯವಹಾರ ನಡೆಯುತ್ತಿದೆ. ದಾಳಿ ನಡೆಸಿ 96 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು. 

ಉಚಿತ ಸವಾರಿ ಯೋಜನೆಯನ್ನು ಪ್ರಾರಂಭಹೈದರಾಬಾದ್ ಪಶು ವೈದ್ಯ ಆತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಉಚಿತ ಸವಾರಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ರಾತ್ರಿ 10 ರಿಂದ ಬೆಳಗಿನ ಜಾವ 6 ಗಂಟೆಯ ನಡುವೆ ಏಕಾಂಗಿಯಾಗಿ ಮತ್ತು ಮನೆಗೆ ಹೋಗಲು ವಾಹನವನ್ನು ಹುಡುಕಲು ಸಾಧ್ಯವಾಗದ ಮಹಿಳೆಯರಿಗೆ ಡ್ರಾಪ್ ಬಗ್ಗೆ ಮಹಿಳೆಯರು ಪೊಲೀಸ್ ಸಹಾಯವಾಣಿ ಸಂಖ್ಯೆಗಳಿಗೆ (1091 ಮತ್ತು 7837018555) ಕರೆ ಮಾಡಿ ವಾಹನಕ್ಕಾಗಿ ವಿನಂತಿಸಬಹುದು.

ಇದನ್ನೂ ಓದಿ : Onion: ಬಿರಿಯಾನಿ ಜೊತೆ ಈರುಳ್ಳಿ ಬದಲು ಕ್ಯಾಬೇಜ್ - ವೇಟರ್ ಜೊತೆ ಗ್ರಾಹಕರ ಮಾರಾಮಾರಿ

ಪೊಲೀಸ್ ಸಹಾಯವಾಣಿ 24x7 ಕೆಲಸ ಮಾಡುತ್ತಾರೆ. ಕಂಟ್ರೋಲ್ ರೂಮ್ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ ಎಸ್‌ಎಚ್‌ಒ ವಾಹನವು ಬಂದು ಮಹಿಳೆಯರನ್ನು ಸುರಕ್ಷಿತವಾಗಿ ತಮ್ಮ ಮನೆಗೆ ತಲುಪಿಸುತ್ತಾರೆ ಮಹಿಳೆಯರಿಗೆ ಉಚಿತವಾಗಿ ಡ್ರಾಪ್ ಕೊಡಲು ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎಂದು ಪೊಲೀಸ್​ ಆಯುಕ್ತರು ತಿಳಿಸಿದರು.
First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ