• Home
  • »
  • News
  • »
  • state
  • »
  • PM Kisan Scheme ಹಣ 16 ಸಾವಿರ ರೂಗೆ ಹೆಚ್ಚಿಸಲು ಕೃಷಿ ಬೆಲೆ ಆಯೋಗ ಶಿಫಾರಸು; ಇಲ್ಲಿದೆ ಅದರ ಸಲಹೆಗಳ ಪಟ್ಟಿ

PM Kisan Scheme ಹಣ 16 ಸಾವಿರ ರೂಗೆ ಹೆಚ್ಚಿಸಲು ಕೃಷಿ ಬೆಲೆ ಆಯೋಗ ಶಿಫಾರಸು; ಇಲ್ಲಿದೆ ಅದರ ಸಲಹೆಗಳ ಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

CACP recommendations- ಪಿಎಂ ಕಿಸಾನ್ ಯೋಜನೆ ಹಣ ಹೆಚ್ಚಿಸಬೇಕು, ರೈತರ ಜಮೀನಿನಲ್ಲಿ ಕೃಷಿ ಹೊಂಡ ಮತ್ತು ಕೆರೆಗಳ ನಿರ್ಮಾಣಕ್ಕೆ ಪ್ರೋತ್ಸಾಹ ಹೆಚ್ಚಿಸಬೇಕು ಇವೇ ಮುಂತಾದ ಸಲಹೆಗಳನ್ನ ಕೃಷಿ ಬೆಲೆ ಆಯೋಗ ರಾಜ್ಯ ಸರ್ಕಾರಕ್ಕೆ ನೀಡಿದೆ.

  • Share this:

ಬೆಂಗಳೂರು, ನ. 23: ಪಿಎಂ ಕಿಸಾನ್ ಯೋಜನೆ (PM Kisan Samman Yojana) ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು 10 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಹಾಗೆಯೇ, ಆ ಹಣಕ್ಕೆ ರಾಜ್ಯ ಸರ್ಕಾರ ಸೇರಿಸಿಕೊಡುತ್ತಿರುವ ಹಣವನ್ನು 4 ಸಾವಿರದಿಂದ 6 ಸಾವಿರ ರೂಗೆ ಹೆಚ್ಚಿಸಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ (CACP- Commission for Agriculture Costs and Prices) ಸಲಹೆ ನೀಡಿದೆ.


ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂ ಸಹಾಯಧನ ನೀಡುತ್ತಿದೆ. ಅದು ವರ್ಷಕ್ಕೆ ಮೂರು ಕಂತುಗಳಲ್ಲಿ, ಅಂದರೆ ಪ್ರತೀ ಕಂತಿಗೆ 2 ಸಾವಿರ ರೂಗಳಂತೆ ನೀಡಲಾಗುತ್ತಿದೆ. ಇದರ ಜೊತೆಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯ ಸರ್ಕಾರ ಈ ಯೋಜನೆಯ ಹಣಕ್ಕೆ ಇನ್ನೂ 4 ಸಾವಿರ ಹಣವನ್ನ ಸೇರಿಸಲು ನಿರ್ಧರಿಸಿತ್ತು. ಅದರಂತೆ ಸದ್ಯ ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ಒಟ್ಟು 10 ಸಾವಿರ ಹಣ ಸಿಗುತ್ತಿದೆ. ಈಗ ಕೃಷಿ ಬೆಲೆ ಆಯೋಗದ ಸಲಹೆಯನ್ನ ಪರಿಗಣಿಸಿ ಅಳವಡಿಸಿದರೆ ಈ ಯೋಜನೆಯಿಂದ ರೈತರಿಗೆ ವರ್ಷಕ್ಕೆ 16 ಸಾವಿರ ರೂ ಸಹಾಯ ಧನ ಸಿಗುವ ಅವಕಾಶ ಇದೆ.


ಕೃಷಿ ಬೆಲೆ ಆಯೋಗ 2020-21ರ ವರದಿಯಲ್ಲಿ ಈ ಅಂಶ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಪ್ರಮುಖ ಶಿಫಾರಸುಗಳ ಜೊತೆಗೆ ಈ ವರದಿಯಲ್ಲಿ ಕೃಷಿ ಕಾರ್ಯಪದ್ಧತಿ, ಉತ್ಪಾದನಾ ವೆಚ್ಚದ ಲೆಕ್ಕಾಚಾರ, ಕೃಷಿ ಪರಿಕರಗಳ ಬಳಕೆ, ಕೃಷಿ ಯಾಂತ್ರೀಕರಣ, ಇಂಧನ ಬೆಲೆ ಏರಿಳಿತದ ಪರಿಣಾಮ, ಕೃಷಿ ಮಾರುಕಟ್ಟೆ ವಸ್ತುಸ್ಥಿತಿ, ಬೆಲೆ ಪ್ರಸರಣ, ಆತ್ಮನಿರ್ಭರ ಭಾರತ-ಸ್ವಾವಲಂಬಿ ಕರ್ನಾಟಕ, ರೈತ ಸ್ನೇಹಿ ಬೆಳೆ ವಿಮೆ ಯೋಜನೆ ಇತ್ಯಾದಿಯನ್ನ ವಿಶ್ಲೇಷಿಸಲಾಗಿದೆ.


ರೈತರ ಜಮೀನಿನಲ್ಲಿ ಕೃಷಿ ಹೊಂಡ, ಕೆರೆ ನಿರ್ಮಾಣಕ್ಕೆ ಉತ್ತೇಜನ ನೀಡಬೇಕೆನ್ನುವುದು ಕೃಷಿ ಬೆಲೆ ಆಯೋಗದ ಪ್ರಮುಖ ಶಿಫಾರಸುಗಳಲ್ಲಿ ಒಂದೆನೆನಿಸಿದೆ. ಆಯೋಗ ಮಾಡಿರುವ ಪ್ರಮುಖ ಶಿಫಾರಸುಗಳು ಈ ಕೆಳಕಾಣಿಸಿದಂತಿವೆ.


ಇದನ್ನೂ ಓದಿ: LPG Cylinder ಗ್ರಾಹಕರ ಅಕೌಂಟ್​​ಗೆ Subsidy ಹಣ ವರ್ಗಾವಣೆ; ನಿಮಗೂ ಬಂದಿದೆಯಾ ಈ ರೀತಿ Check ಮಾಡಿ


ಶಿಫಾರಸ್ಸಿನಲ್ಲಿರುವ ಮುಖ್ಯ ಅಂಶಗಳು:


* ಕನಿಷ್ಠ ಬೆಂಬಲ ಬೆಲೆಯನ್ನ ಶಾಸನ ಬದ್ಧ ಬೆಂಬಲ ಬೆಲೆ ಎಂದು ಘೋಷಣೆಗೆ ಮನವಿ.


* ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೈಗಾರಿಕಾ ಉತ್ಪನ್ನ ಬೆಳೆಗಳಿಗೆ ಕಡಿಮೆ ಇರದಂತೆ ನೋಡಿಕೊಳ್ಳಬೇಕು


* ಜಿಲ್ಲೆಗಳ ಕ್ಲಸ್ಟರ್ ಬೆಲೆ ಪರಿಗಣಿಸಿ.


* ತುಂಗಭದ್ರಾ ಅಚ್ಚುಕಟ್ಟು ಬಳಿ ಸೋನಾಮಸೂರಿ, ಕರಾವಳಿ ಕರ್ನಾಟಕದಲ್ಲಿ ಕುಸುಬಲಕ್ಕಿ, ಮಂಗಳೂರಿನಲ್ಲಿ ಗೋಡಂಬಿ, ಬಿಜಾಪುರದಲ್ಲಿ ದ್ರಾಕ್ಷಿ, ಮಳೆನಾಡು ಪ್ರದೇಶದಲ್ಲಿ ಕರಿ ಮೆಣಸು ಕ್ಲಸ್ಟರ್ ಮಾಡಲು ಪರಿಗಣಿಸಬೇಕು


* ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ರೈತನ ಆದಾಯ ಹೆಚ್ಚಿಸಿಕೊಳ್ಳಬೇಕು


* ಬೆಳೆ ವಿಮೆ ಕಡ್ಡಾಯ ಮಾಡುವುದು..


* ವಿಮೆ ಮೊತ್ತವನ್ನ ರೈತ ಸಮ್ಮಾನ್ ಯೋಜನೆಯಿಂದ ಭರಿಸಿಕೊಳ್ಳಬೇಕು


* ತಮ್ಮ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳಲು ಉತ್ತೇಜನ ನೀಡುವುದು. ಸರ್ಕಾರ ಪ್ರೋತ್ಸಾಹ ಧನ ನೀಡುವುದು. ನಾಲ್ಕು ಎಕರೆ ಜಮೀನು ಇದ್ರೆ 10 ಗುಂಟೆ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳುವುದು


* ಸುತ್ತಮುತ್ತಲಿನ ರೈತರು ಸೇರಿ ಮಾಡಿಕೊಂಡ್ರೆ ಐದು ಸಾವಿರ ಎಕರೆಗೆ ಒಂದು ಟಿಎಂಸಿ ನೀರು ಸಂಗ್ರಹಿಸಬಹುದು.


* ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸರ್ಕಾರ ಕೊಡ್ತಿರುವ ಪ್ರೋತ್ಸಾಹ ಧನ ಸಾಲುತ್ತಿಲ್ಲ. ಪರಿಹಾರ ಹೆಚ್ಚಳ ಮಾಡಬೇಕು. 6 ಸಾವಿರದಿಂದ 10 ಸಾವಿರ ಹೆಚ್ಚಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು


* ರಾಜ್ಯ ಸರ್ಕಾರ ಕೊಡುತ್ತಿರುವ ನಾಲ್ಕು ಸಾವಿರ ರೂಪಾಯಿಯನ್ನ ಆರು ಸಾವಿರಕ್ಕೆ ಹೆಚ್ಚಿಸಬೇಕು. ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲು ಕ್ರಮ ವಹಿಸಬೇಕು.


* ರಪ್ತು ಉತ್ತೇಜಿಸಲು ಅಂತರರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಿಕೊಡುವುದು


* ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕಾಡಿನಲ್ಲಿ ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲು ಗಿಡ ಬೆಳೆಸಬೇಕು


* ಕಾಡು ಪ್ರಾಣಿಗಳಿಂದ ರೈತನ ಬೆಳೆ ರಕ್ಷಣೆ ಮಾಡಬೇಕು


* ರೈತರ ಬೀಜ ಬಿತ್ತನೆ ಬಗ್ಗೆ ಮಾಹಿತಿ ಕೊಡಬೇಕು ಹಾಗು ಹೆಚ್ಚು ಇಳುವರಿ ಕೊಡುವ ರೋಗನಿರೋಧಕ ಶಕ್ತಿ ಇರುವ ಬೀಜ ಪೂರೈಕೆ ಮಾಡಬೇಕು


* ಯಾಂತ್ರೀಕೃತ ಬೇಸಾಯಕ್ಕೆ ರೈತರಿಗೆ ಪ್ರೋತ್ಸಾಹ ಕೊಡಬೇಕು.


* ರೈತರಿಗೆ ಕಡಿಮೆ ಬೆಲೆಯಲ್ಲಿ ಯಂತ್ರೋಪಕರಣಗಳು ಸಿಗುವಂತೆ ಆಗಬೇಕು


* ಹೊಲಕ್ಕೊಂದು ಕೆರೆ ಆಂದೋಲನ ರೂಪಿಸುವುದು, ಇಲ್ಲವೆ ಕೃಷಿ ಹೊಂಡ ನಿರ್ಮಾಣ ಮಾಡಲು ಪ್ರೋತ್ಸಾಹಿಸುವುದು.


* ಮಣ್ಣಿನ ಫಲವತ್ತತೆ ಹೆಚ್ಚಿಸಲು ಭೂಮಿಯ ಒಳಗೆ ಹಸಿರು ಎಲೆ ಹಾಕುವುದು ಕಡ್ಡಾಯ ಮಾಡುವುದು. ಇದನ್ನ ಆಂದೋಲನದ ರೀತಿಯಲ್ಲಿ ಕಾರ್ಯಗತ ಮಾಡುವುದು.


* ಕೆರೆ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದು


* ಎಸ್ಸಿ, ಎಸ್ಟಿಗೆ ಶೇಕಡಾ 50 ರಷ್ಟು ಮತ್ತು ಸಾಮಾನ್ಯ ವರ್ಗದವರಿಗೆ ಶೇಕಡಾ 25 ರಷ್ಟು ಸಬ್ಸಿಡಿ ನೀಡುವುದು


* ಕೃಷಿ ಆಧುನಿಕರಣ ಮತ್ತು ಇಳುವರಿ ಹೆಚ್ಚಳ ಮತ್ತು ರೈತರ ಆದಾಯ ದುಪ್ಪಟ್ಟು ಆಗಲು ಕ್ರಮ ವಹಿಸಬೇಕು.


ಇವು ಕೃಷಿ ಬೆಲೆ ಆಯೋಗ ರಾಜ್ಯ ಸರ್ಕಾರಕ್ಕೆ ಮಾಡಿರವ ಕೆಲ ಪ್ರಮುಖ ಶಿಫಾರಸುಗಳಾಗಿವೆ.


ವರದಿ: ಕೃಷ್ಣ ಜಿ.ವಿ.

Published by:Vijayasarthy SN
First published: