• Home
 • »
 • News
 • »
 • state
 • »
 • Hubballi: ಕೋವಿಡ್ ಪರಿಕರಗಳ ಬಿಲ್ ಪಾವತಿಗೆ ಪರ್ಸೆಂಟೇಜ್ ಕಿರುಕುಳ; ಗುತ್ತಿಗೆದಾರನಿಂದ ದಯಾಮರಣಕ್ಕೆ ಮನವಿ

Hubballi: ಕೋವಿಡ್ ಪರಿಕರಗಳ ಬಿಲ್ ಪಾವತಿಗೆ ಪರ್ಸೆಂಟೇಜ್ ಕಿರುಕುಳ; ಗುತ್ತಿಗೆದಾರನಿಂದ ದಯಾಮರಣಕ್ಕೆ ಮನವಿ

ಗುತ್ತಗೆದಾರ ಎ ಬಸವರಾಜ್

ಗುತ್ತಗೆದಾರ ಎ ಬಸವರಾಜ್

ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಕಡೂರು, ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೊವಿಡ್ ಪರಿಕರ ಸರಬರಾಜು ಮಾಡಿದ್ದರು.

 • News18 Kannada
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ರಾಜ್ಯ ಸರ್ಕಾರದ ಮೇಲೆ 40 ಪರ್ಸಂಟೇಜ್ ಆರೋಪ ಕೇಳಿ ಬರುತ್ತಿರುವ ವೇಳೆಯಲ್ಲಿಯೇ ಗುತ್ತಿಗೆದಾರರೊಬ್ಬರು ದಯಾಮರಣಕ್ಕಾಗಿ (Euthanasia In Letter) ಮನವಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಪಂಚಾಯ್ತಿಗಳಿಗೆ ಸರಬರಾಜು ಮಾಡಿದ್ದ ಕೋವಿಡ್ ಪರಿಕರಗಳ (COVID Equipment Bill) ಬಿಲ್ ಪಾವತಿಗಾಗಿ ಪರ್ಸಂಟೇಜ್ (Percentage Allegation) ಕಿರುಕುಳದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಗುತ್ತಿಗೆದಾರ ಎ.ಬಸವರಾಜ್ (Contractor A Basavaraj) ಎಂಬವರು ರಾಷ್ಟ್ರಪತಿ (President), ರಾಜ್ಯಪಾಲರಿಗೆ (Governor) ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬಿಲ್ ಪಾವತಿಗಾಗಿ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣಕ್ಕಾಗಿ ಮನವಿ ಸಲ್ಲಿಸಿರೋದಾಗಿ ಬಸವರಾಜ್ ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.


ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಕಡೂರು, ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೊವಿಡ್ ಪರಿಕರ ಸರಬರಾಜು ಮಾಡಿದ್ದರು.


ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕುಗಳ ಒಟ್ಟು 69 ಪಂಚಾಯ್ತಿಗೆ ಪರಿಕರಗಳ ಸರಬರಾಜು ಮಾಡಿದ್ದರು ಎನ್ನಲಾಗಿದೆ.


ಬಿಲ್ ಪಾವತಿ ಮಾಡದ ಅಧಿಕಾರಿಗಳು


ಮೂಡಗೆರಿ ತಾಲೂಕಿಗೆ 27 ಲಕ್ಷ ರೂಪಾಯಿ, ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದರು. 2020 - 21 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಪರಿಕರ ಪೂರೈಕೆ ಮಾಡಿದ್ದರು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಬಿಲ್ ಪಾವತಿ ಮಾಡದೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಬಸವರಾಜ್ ಆರೋಪಿಸಿದ್ದಾರೆ.


commission allegation Contractor Requests Euthanasia In Letter mrq
ಎ ಬಸವರಾಜ್


ಬಿಲ್ ಪಾವತಿ ಮಾಡಲು ಕಡೂರು ಇಓ ದೇವರಾಜ್ ನಾಯಕ್ ಅವರಿಂದ ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕರು ಮತ್ತು ಅಧಿಕಾರಿಗಳಯ ಬೇರೆ ಬೇರೆಯವರ ಹೆಸರಲ್ಲಿ ಬಿಲ್ ಒಟ್ಟು 40 ಪರ್ಸಂಟೇಜ್ ಗಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿದೆ. ಕಡೂರು ತಾಲೂಕು ಪಂಚಾಯಿತಿ EO ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ದಾರೆ. ಶಾಸಕರ ಹೆಸರಲ್ಲಿಯೂ ಅಧಿಕಾರಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ.


ಸೂಚನೆ ಬಂದ್ರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ


ಕಮಿಷನ್ ಹಣ ಪಾವತಿ ಮಾಡದ ಹಿನ್ನೆಲೆ ಅಧಿಕಾರಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಲಯದಿಂದ 4 ಬಾರಿ ಬಿಲ್ ಪಾವತಿಸಲು ಸೂಚನೆ ಬಂದ್ರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.


ಇದನ್ನೂ ಓದಿ:  Bandemutt Swamy Case: ಬಂಡೇಮಠ ಸ್ವಾಮಿ ಆತ್ಮಹತ್ಯೆ ಕೇಸ್; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಅರೆಸ್ಟ್


ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯಾಲಯದಿಂದಲೂ ಆದೇಶ ಬಂದರೂ ಡೋಂಟ್ ಕೇರ್ ಅನ್ನುತ್ತಿದ್ದಾರೆ.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನಿರ್ದೇಶನ ನೀಡಿದರೂ ಬಿಲ್ ಬಿಡುಗಡೆ ಮಾಡಿಲ್ಲ. ಇದರ ನಡುವೆ ಗುತ್ತಿಗೆದಾರ ಬಸವರಾಜ್ ಅವರಿಗೆ ಸಾಲಗಾರರ ಕಾಟವೂ ಜಾಸ್ತಿಯಾಗಿದೆ ಎನ್ನಲಾಗಿದೆ. ಸಾಲಗಾರ ಕಾಟಕ್ಕೆ ನೊಂದು ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವುದಾಗಿ ಬಸವರಾಜ್ ತಿಳಿಸಿದ್ದಾರೆ.


ಶಾಸಕ ಬೆಳ್ಳಿ ಪ್ರಕಾಶ್ ಹೆಸರು ಬಳಕೆ


ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೆಸರನ್ನು ಅಧಿಕಾರಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಾ ಪಂಚಾಯತ್ ಕಾರ್ಯಾನಿರ್ವಾಹಕ ಅಧಿಕಾರಿ ದೇವರಾಜ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ದಯಾಮರಣ ಕೊಡಿ ಅಂತ ಬಸವರಾಜ್ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದ 40 ಪರ್ಸಂಟೇಜ್ ವ್ಯವಹಾರಕ್ಕೆ ಈ ಘಟನೆ ಪುಷ್ಠಿ ನೀಡುವಂತಿದೆ.


ಇದನ್ನೂ ಓದಿ:  Potholes: ಮಳೆ ಬಂದಾಗ ಗುಂಡಿ ಬಿದ್ದೇ ಬೀಳುತ್ತೆ, ಅದನ್ನ ದೊಡ್ಡದು ಮಾಡಿದ್ರೆ ಹೇಗೆ? ಜಗ್ಗೇಶ್ ಪ್ರಶ್ನೆ


ಬೈಕ್​ನಿಂದ ಬಿದ್ದು ಯುವಕ ಸಾವು


ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಕಳೆದ ರಾತ್ರಿ ಮಳೆಗೆ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದು ಆಟೋ ಚಾಲಕ ಪ್ರದೀಪ್ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಬೈಕ್ ನಲ್ಲಿ ಹೋಗ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Published by:Mahmadrafik K
First published: