• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • R Shankar ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ: ಮತದಾರರಿಗೆ ಹಂಚಲು ತಂದಿದ್ದ ವಸ್ತುಗಳು ವಶಕ್ಕೆ

R Shankar ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ: ಮತದಾರರಿಗೆ ಹಂಚಲು ತಂದಿದ್ದ ವಸ್ತುಗಳು ವಶಕ್ಕೆ

ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಇನ್ನು ಆರ್.ಶಂಕರ್ ನಿವಾಸದ ಮೇಲೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

  • Share this:

ಹಾವೇರಿ: ಮಾಜಿ ಸಚಿವ, ಬಿಜೆಪಿ ಎಂಎಲ್​​ಸಿ ಆರ್.ಶಂಕರ್ (BJP MLC R.Shankar) ಅವರ ರಾಣೇಬೆನ್ನೂರು (Ranebennuru, Haveri) ನಗರದ ಬೀರೇಶ್ವರ ಬಡವಾಣೆಯಲ್ಲಿರುವ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಆಯುಕ್ತರು (Commissioner of Commercial Taxes) ದಾಳಿ ನಡೆಸಿದ್ದಾರೆ. ಹಾವೇರಿ ವಾಣಿಜ್ಯ ತೆರಿಗೆ ಆಯುಕ್ತರಾದ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕ್ಷೇತ್ರದ ಜನತೆಗೆ ವಿತರಿಸಲು ತಂದಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಎಂದು ವಿತರಣೆ ಮಾಡಲು ತಂದಿರುವ ವಸ್ತುಗಳನ್ನು ಇರಿಸಲಾಗಿತ್ತು. ಶಂಕರ್ ಅವರ‌ ಭಾವಚಿತ್ರವುಳ್ಳ ಸೀರೆ ಬಾಕ್ಸ್, ತಟ್ಟೆ ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ವಿದ್ಯಾರ್ಥಿಗಳಿಗೆ ಹಂಚಲು ತಂದಿದ್ದ ಬ್ಯಾಗ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ದಾಳಿ ವೇಳೆ ಆರ್. ಶಂಕರ್ ಮನೆಯಲ್ಲಿದ್ದರು.


ದಾಳಿ ವೇಳೆ ಅಧಿಕಾರಿಗಳು ಆರ್.ಶಂಕರ್ ನಿವಾಸದಲ್ಲಿ ವಶಕ್ಕೆ ಪಡೆದ ವಸ್ತುಗಳ ದಾಖಲೆ ಪತ್ರ, ಬಿಲ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ಬಳಿಕ ಹಾವೇರಿ ಎಸಿ ನಾರಾಯಣರೆಡ್ಡಿ ಕನಕರೆಡ್ಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.


30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು ವಶಕ್ಕೆ


6000ಕ್ಕೂ ಹೆಚ್ಚು ಸೀರೆ, 9000 ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್ ಗಳು ಸೇರಿದಂತೆ ತಟ್ಟೆಲೋಟಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಸೀಜ್ ಆಗಿರುವ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ‌ ವಶಕ್ಕೆ ನೀಡಿದ್ದಾರೆ. ಸುಮಾರು ಏಳು ಗಂಟೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.


commercial tax department raid at mlc r shankar home sarees and school bag seized mrq
ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ


ಕೋರ್ಟ್ ಅನುಮತಿ ಪಡೆದು ಕಚೇರಿಯಿಂದ ವಸ್ತುಗಳನ್ನು ಪೊಲೀಸರು ಸ್ಥಳಾಂತರ ಮಾಡಲಿದ್ದಾರೆ. ಚುನಾವಣಾ ಪೂರ್ವದಲ್ಲೇ ಮತದಾರರಿಗೆ ಆಮಿಷ ತೋರಿಸುತ್ತಿರುವ ಆರೋಪದ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.


ಶಂಕರ್ ನಿವಾಸದ ಮುಂದೆ ಅಭಿಮಾನಿಗಳ ಪ್ರತಿಭಟನೆ


ಇನ್ನು ಆರ್.ಶಂಕರ್ ನಿವಾಸದ ಮೇಲೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.


commercial tax department raid at mlc r shankar home sarees and school bag seized mrq
ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ


ಆರ್.ಶಂಕರ್ ಅವರ ಗೆಲವು ಕಂಡು ಅನೇಕ ರಾಜಕೀಯ ಮುಖಂಡರು ಭಯಗೊಂಡಿದ್ದಾರೆ. ಅದಕ್ಕೆ ಷಡ್ಯಂತ್ರ ಮಾಡಿ ತಪ್ಪು ಮಾಹಿತಿ ನೀಡಿದ್ದಾರೆ. ನಾವೆಲ್ಲರೂ ಆರ್.ಶಂಕರ್ ಪರ ನಿಲ್ಲುತ್ತೇವೆ. ನಮ್ಮ ನಾಯಕರ ಬಳಿ ವಶಕ್ಕೆ ಪಡೆದ ವಸ್ತುಗಳ ದಾಖಲೆ ಮತ್ತು ಬಿಲ್​ಗಳಿವೆ. ಎಲ್ಲವನ್ನೂ ಅಧಿಕಾರಿಗಳ ಮುಂದೆ ಹಾಜರುಪಡಿಸುತ್ತಾರೆ ಎಂದು ಆರ್.ಶಂಕರ್ ಬೆಂಬಲಿಗರು ಹೇಳಿದ್ದಾರೆ.


BC ಪಾಟೀಲ್ ಬಳಿ 1000 ಕೋಟಿ ಸಿಗುತ್ತೆ


ಬಿಜೆಪಿ ಪಕ್ಷ, ದುಡ್ಡು , ಯುಬಿ ಬಣಕಾರ ಎಲ್ಲವೂ ಸೇರಿ ಬಿ.ಸಿ.ಪಾಟೀಲ ಮಂತ್ರಿ ಆದ. ಮಂತ್ರಿಯಾದ ನಂತರ ಏನಾದರೂ ಮಾಡಿದ್ದಾನಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


commercial tax department raid at mlc r shankar home sarees and school bag seized mrq
ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ


ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು 4 ವರ್ಷ ಆಗಿತ್ತು. ಆಲಿಬಾಬಾ ಚಾಲೀಸ್ ಚೋರ್‌ ಅಂತಾರಲ್ಲಾ ಅದರಲ್ಲಿ ಬಿ.ಸಿ.ಪಾಟೀಲ್ ಕೂಡಾ ಒಬ್ಬ. ಬಿಸಿ.ಪಾಟೀಲ್ ಮನೆ ರೇಡ್ ಮಾಡಿದರೆ ಕನಿಷ್ಠ ಒಂದು ಸಾವಿರ ಕೋಟಿ ಸಿಗಬಹುದು ಎಂದು ಸಿದ್ದರಾಮಯ್ಯ ಕಿಡಿಕಾರಿದರು.


ಇದನ್ನೂ ಓದಿ:  Bengaluru-Mysuru Expressway ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ನೀಡಿದ KSRTC


ದೇವೇಗೌಡ್ರೇ ಟಿಕೆಟ್ ಫೈನಲ್ ಮಾಡ್ತಾರೆ


ಹಾಸನ ಜಿಲ್ಲೆಯ ಸಂಪೂರ್ಣ ನರನಾಡಿ ನನಗೆ ಗೊತ್ತಿಲ್ಲ. ನಾನು ಇಲ್ಲಿಯವರೆಗೆ ಹಾಸನ ಜಿಲ್ಲೆಯ ರಾಜಕೀಯದ ಬಗ್ಗೆ ಹೆಚ್ಚು ಸಮಯ ಕೊಟ್ಟಿಲ್ಲ. ದೇವೇಗೌಡರಿಗೆ ಇಂಚಿಂಚು ವಿಚಾರ ಗೊತ್ತಿದೆ. ಅಂತಿಮ ನಿರ್ಣಯವನ್ನು ದೇವೇಗೌಡರೇ ಮಾಡ್ತಾರೆ ಎನ್ನುವ ಮೂಲಕ ಹಾಸನ ಟಿಕೆಟ್ ಗೊಂದಲವನ್ನು ದೇವೇಗೌಡರ ಅಂಗಳಕ್ಕೆ ಕುಮಾರಸ್ವಾಮಿ ಎಸೆದಿದ್ದಾರೆ. ನಾಳೆ ನಾಲ್ಕನೇ ಹೆಸರು ಬಂದರೂ ಬರಬಹುದು. ಚುನಾವಣೆ ಘೋಷಣೆ ಆಗುವವರಿಗೆ ಪಟ್ಟಿ ದೊಡ್ಡದಾಗಬಹುದು ಎಂದು ಹೇಳಿದರು.
ಹೆಚ್​​ಡಿಕೆಗೆ ಬಂಪರ್ ಗಿಫ್ಟ್


ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಗಂಡಸಿ, ನಾಗರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಸುಮಾರು 2 ಲಕ್ಷ ಮೌಲ್ಯದ ಜೋಡಿ ಎತ್ತು ನೀಡಿದ್ದಾರೆ. ಜೋಡೆತ್ತುಗಳನ್ನು ಮೆರವಣಿಗೆ ಮಾಡಿ, ಬಳಿಕ ಗಿಫ್ಟ್ ನೀಡಿದ್ದಾರೆ.

Published by:Mahmadrafik K
First published: