• Home
  • »
  • News
  • »
  • state
  • »
  • Comedy Kiladi Nayana: ಜೀವ ಬೆದರಿಕೆ ದೂರು ದಾಖಲು; ಕಾಮಿಡಿ ಕಿಲಾಡಿ ನಯನಾ ಪ್ರತಿಕ್ರಿಯೆ

Comedy Kiladi Nayana: ಜೀವ ಬೆದರಿಕೆ ದೂರು ದಾಖಲು; ಕಾಮಿಡಿ ಕಿಲಾಡಿ ನಯನಾ ಪ್ರತಿಕ್ರಿಯೆ

ಕಾಮಿಡಿ ಕಿಲಾಡಿ ನಯನಾ ಮತ್ತು ಸೋಮಶೇಖರ್

ಕಾಮಿಡಿ ಕಿಲಾಡಿ ನಯನಾ ಮತ್ತು ಸೋಮಶೇಖರ್

ಬಹುಮಾನದ ಮೊತ್ತದ ಒಂದು ಮೊತ್ತವನ್ನು ಶೇರ್ ಮಾಡಿದ್ದಾರೆ. ರನ್ನರ್ ತಂಡದ ಐವರು ಸದಸ್ಯರು ಹಣ ಹಂಚಿಕೊಂಡಿದ್ದಾರೆ. ಆದ್ರೆ ರನ್ನರ್ ಆಗಿರುವ ಅನಿಶ್ ಮತ್ತು ಚಿದಂಬರಂಗೆ ಆತ ಹಣ ಕೊಡುತ್ತಿಲ್ಲ. ನಮ್ಮ ಬಳಿ ಪಡೆದುಕೊಂಡಿರುವ ಹಣವನ್ನು ಸೋಮಶೇಖರ್ ಕೊಡುತ್ತಿಲ್ಲ.

  • Share this:

ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ನಯನಾ (Comedy Kiladi Nayana) ವಿರುದ್ಧ ನಟ ಸೋಮಶೇಖರ್ (Actor Somashekhar) ಎಂಬವರು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ (RR Nagara Police Station) ದೂರು ದಾಖಲಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ನಟಿ ನಯನಾ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ರಿಯಾಲಿಟಿ ಶೋ (Reality Show) ವೇಳೆ ನಡೆದ ಘಟನೆ ಮತ್ತು ಹಣಕಾಸಿನ ಕಲಹವನ್ನು (Financial Dispute) ಬಿಚ್ಚಿಟ್ಟಿದ್ದಾರೆ. ಕಾಮಿಡಿ ಗ್ಯಾಂಗ್​​ನಲ್ಲಿದ್ದ  (Comedy Gang) ನಮ್ಮೆಲ್ಲರ ಬಳಿ ಕಷ್ಟ ಅಂತ ಹೇಳಿ ಕೈ ಸಾಲ (Loan) ಮಾಡಿಕೊಂಡಿದ್ದನು. ಇದರ ಜೊತೆಗೆ ಬಹುಮಾನವಾಗಿ ಬಂದಿದ್ದ ಹಣವನ್ನು ಆತನ ಜೊತೆಯಲ್ಲಿದ್ದ ಕಲಾವಿದರಿಗೆ ನೀಡಬೇಕಿತ್ತು. ಆದ್ರೆ ಈಗ ಪಡೆದ ಸಾಲ ಮತ್ತು ಬಹುಮಾನದ ಹಣ (Prize Amount) ವಾಪಸ್ ನೀಡಲ್ಲ ಎಂದು ಹೇಳುತ್ತಿದ್ದಾನೆ. ಈ ಹಣವನ್ನು ನಾನು ಕೇಳಿದ್ದಕ್ಕೆ ನನ್ನ ವಿರುದ್ಧ ದೂರು ಸಲ್ಲಿಸಿದ್ದಾನೆ ಎಂದು ಕಿಡಿಕಾರಿದರು.


ಬಹುಮಾನದ ಮೊತ್ತವನ್ನ ಯಾರಿಗೂ ಕೊಡಬೇಕು ಅಂತ ಏನಿಲ್ಲ. ಏನ್ ಮಾಡ್ಕೊತ್ತೀಯಾ ಮಾಡಿಕೊ ಎಂದು ಹೇಳುತ್ತಿದ್ದಾನೆ. ನಾವು ಸಹ ಅವನ ವಿರುದ್ಧ ದೂರು ನೀಡಬಹುದಿತ್ತು. ಆದ್ರೆ ಒಮ್ಮೆ ತಮ್ಮ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ್ರೆ ತಂದೆ-ತಾಯಿಯ ಮನಸ್ಸಿಗೆ ನೋವು ಆಗುತ್ತೆ ಅಂತ ಸುಮ್ಮನೆ ಇದ್ದೀವಿ ಎಂದು ಹೇಳಿದರು.


ಆತ ಯಾರ ಸಂಪರ್ಕಕ್ಕೂ ಸಿಗ್ತಿಲ್ಲ


ಆ ಒಂದು ಕಾರಣಕ್ಕಾಗಿ ನಾವು ಇಷ್ಟು ದಿನ ಹಲ್ಲು ಕಚ್ಚಿಕೊಂಡು ಸುಮ್ಮನಿದ್ದೇವೆ. ಫೋನ್ ಮಾಡಿದ್ರೆ ರಿಸೀವ್ ಮಾಡ್ತಿಲ್ಲ. ನಮ್ಮ ಮೊಬೈಲ್​ ನಂಬರ್​ಗಳನ್ನ ಬ್ಲಾಕ್ ಮಾಡಿದ್ದಾನೆ. ಹಣ ಬಂದ ನಂತರ ಸೋಮಶೇಖರ್ ನಮ್ಮ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.


comedy kiladi fame nayana first reaction on life threat case mrq
ಸೋಮಶೇಖರ್


ಇದನ್ನೂ ಓದಿ:  Comedy Kiladi Nayana ಕಾಮಿಡಿ ಕಿಲಾಡಿ ನಯನಾ ವಿರುದ್ಧ ಜೀವ ಬೆದರಿಕೆ ದೂರು


ಬಹುಮಾನದ ಮೊತ್ತ ಶೇರ್ ಮಾಡಲು ಒಪ್ಪುತ್ತಿಲ್ಲ


ಮೊದಲಿಗೆ ಕೊಡ್ತೀನಿ ಎಂದು ಒಪ್ಪಿಕೊಂಡಿದ್ದ ವ್ಯಕ್ತಿ ಈಗ ಕೊಡಲ್ಲ ಎಂದು ಹೇಳುತ್ತಿದ್ದಾನೆ. ರಿಯಾಲಿಟಿ ಶೋ ತಂಡದ ಇತರ ನಾಯಕರು ತಮ್ಮ ಸದಸ್ಯರಿಗೆ ದುಡ್ಡು ಕೊಟ್ಟಿದ್ದೇನೆ. ಬಹುಮಾನದ ಮೊತ್ತದ ಒಂದು ಮೊತ್ತವನ್ನು ಶೇರ್ ಮಾಡಿದ್ದಾರೆ. ರನ್ನರ್ ತಂಡದ ಐವರು ಸದಸ್ಯರು ಹಣ ಹಂಚಿಕೊಂಡಿದ್ದಾರೆ. ಆದ್ರೆ ರನ್ನರ್ ಆಗಿರುವ ಅನಿಶ್ ಮತ್ತು ಚಿದಂಬರಂಗೆ ಆತ ಹಣ ಕೊಡುತ್ತಿಲ್ಲ. ನಮ್ಮ ಬಳಿ ಪಡೆದುಕೊಂಡಿರುವ ಹಣವನ್ನು ಸೋಮಶೇಖರ್ ಕೊಡುತ್ತಿಲ್ಲ.


ಇದರ ಜೊತೆಗೆ ಕಲಾವಿದೆ ಮಿಂಚು ಅನುಮತಿ ಇಲ್ಲದೇ ಅವರ ಕಾರ್ ತೆಗೆದುಕೊಂಡು ಹೋಗಿ ಡ್ಯಾಮೇಜ್ ಮಾಡಿದ್ದಾನೆ. ಆಕೆ ಕಾರ್ ರಿಪೇರಿಗಾಗಿ 42 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ತನ್ನ ತಪ್ಪು ಇಟ್ಟುಕೊಂಡು ನಮ್ಮ ವಿರುದ್ಧವೇ ದೂರು ಕೊಟ್ಟಿದ್ದಾನೆ.


comedy kiladi fame nayana first reaction on life threat case mrq
ಕಾಮಿಡಿ ಕಿಲಾಡಿ ನಯನಾ, ನಟಿ


ಈಗ ಉಲ್ಟಾ ಹೊಡೆದಿದ್ದಾನೆ


ನಾನು ವಿನ್ನರ್ ಮತ್ತು ರನ್ನರ್ ತಂಡದಲ್ಲಿ ಇಲ್ಲ. ಆದ್ರೆ ಎಲ್ಲರ ಪರವಾಗಿ ನಿಂತು ಹಣ ಹಂಚಿಕೆ ಮಾಡು ಅಂತ ಹೇಳಿದ್ದಕ್ಕೆ ನನ್ನ ವಿರುದ್ಧ ದೂರು ಕೊಟ್ಟಿದ್ದಾನೆ. ಫೋನ್ ಮಾಡಿದ್ರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಎದುರಿಗೂ ಕಾಣಿಸಿಕೊಳ್ಳುತ್ತಿಲ್ಲ. ಅದೇ ಟೀಂನಲ್ಲಿರುವ ಬೇರೆಯವರನ್ನು ಸಂಪರ್ಕಿಸಿ ವಿಷಯ ತಿಳಿದುಕೊಳ್ಳುತ್ತಿದ್ದಾನೆ.


ಮೊದಲಿಗೆ ಹಣವನ್ನು ಸಮವಾಗಿ ಶೇರ್ ಮಾಡಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡು ಇವಾಗ ಉಲ್ಟಾ ಹೊಡೆದಿದ್ದಾನೆ. ಹಣ ಕೊಡುವೆ ಅಥವಾ ಕೊಡಲ್ಲ ಅನ್ನೋದನ್ನು ಸಹ ಸ್ಪಷ್ಟವಾಗಿ ಹೇಳದೇ ಯಾರ ಸಂಪರ್ಕಕ್ಕೂ ಆತ ಸಿಗುತ್ತಿಲ್ಲ. ಒಂದು ವೇಳೆ ಹೀಗೆ ಮುಂದುವರಿದ್ರೆ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ:  Kamal Haasan: ಕಾಂತಾರ ವೀಕ್ಷಿಸಿದ ಕಮಲ್ ಹಾಸನ್, ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಹೇಳಿದ್ದೇನು?


ಸೋಮಶೇಖರ್​ ನೀಡಿದ ದೂರಿನಲ್ಲಿ ಏನಿದೆ?


ರಿಯಾಲಿಟಿ ಶೋನಲ್ಲಿ ಸೀನಿಯರ್ ಕಲಾವಿದನಾಗಿ ನಾನು ಕೆಲಸ ಮಾಡಿದ್ದೇನೆ. ನನಗೆ ಬಂದಿರುವ ಬಹುಮಾನದ ಮೊತ್ತವನ್ನು ನಮ್ಮ ತಂಡದಲ್ಲಿದ್ದ ಅನಿಲ್ ಮತ್ತು ಚಿದಾನಂದ್ ಅವರಿಗೆ ಕೊಡುವಂತೆ ಬೆದರಿಕೆ ಹಾಕಲಾಗಿದೆ.  ನಾನು ಇದು ನನಗೆ ಬಂದಿರುವ ಹಣ. ಚಾನೆಲ್ ನನ್ನ ಖಾತೆಗೆ ಹಣ ಹಾಕಿದೆ ಎಂದು ಹೇಳಿದ್ರೂ ಕೆಟ್ಟದಾಗಿ ಮೆಸೇಜ್ ಮತ್ತು ವಾಯ್ಸ್ ನೋಟ್ ಕಳುಹಿಸಿದ್ದಾರೆ.


comedy kiladi fame nayana first reaction on life threat case mrq
ಕಾಮಿಡಿ ಕಿಲಾಡಿ ನಯನಾ, ನಟಿ


ಮೆಸೇಜ್ ಮತ್ತು ವಾಯ್ಸ್​ ನೋಟ್ ಮೂಲಕ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಯನಾಳನ್ನು ಠಾಣೆಗೆ ಕರೆಯಿಸಿ ಇನ್ಮುಂದೆ ನಮ್ಮ ತಂಟೆಗೆ ಬರದಂತೆ ತಿಳುವಳಿಕೆ ಹೇಳಿ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಸೋಮಶೇಖರ್ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Published by:Mahmadrafik K
First published: