ಮೂವರನ್ನು ಬಲಿ ಪಡೆದ ಚಿರತೆ ಹುಡುಕಾಟಕ್ಕೆ ಮುಂದಾದ ಶಾಸಕ; ಐದುದಿನಗಳಿಂದ ನಡೆದಿದೆ ನರಭಕ್ಷಕನ ಪತ್ತೆಗೆ ಕಸರತ್ತು

ಚಿರತೆ ಸೆರೆಗಾಗಿ ಸ್ವತಃ ಶಾಸಕ ಮಸಾಲೆ ಜಯರಾಂ ಕೂಡ ಹುಡುಕಾಟ ನಡೆಸಲು ಮುಂದಾಗಿದ್ದು, ಜನರಲ್ಲಿ ನಿತ್ಯ ಭಯ ಮೂಡಿಸುತ್ತಿರುವ  ಚಿರತೆ ಶೂಟೌಟ್​ಗೆ ಅನುಮತಿ ಕೊಡಿ ಎನ್ನುತ್ತಿದ್ದಾರೆ

news18-kannada
Updated:January 14, 2020, 11:21 AM IST
ಮೂವರನ್ನು ಬಲಿ ಪಡೆದ ಚಿರತೆ ಹುಡುಕಾಟಕ್ಕೆ ಮುಂದಾದ ಶಾಸಕ; ಐದುದಿನಗಳಿಂದ ನಡೆದಿದೆ ನರಭಕ್ಷಕನ ಪತ್ತೆಗೆ ಕಸರತ್ತು
ಸಾಂದರ್ಭಿಕ ಚಿತ್ರ
  • Share this:
ತುಮಕೂರು (ಜ.14): ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ  ಮೂವರನ್ನು ಬಲಿ ಪಡೆದಿರುವ ಚಿರತೆ ಆತಂಕ ಸೃಷ್ಟಿಸಿದ್ದು, ಅದರ ಸೆರೆಗೆ ನಿರಂತರವಾಗಿ ಕೂಬಿಂಗ್​ ನಡೆಸಿದರೂ ಅರಣ್ಯಾಧಿಕಾರಿಗಳ ಬೋನಿಗೆ ಇನ್ನು ಚಿರತೆ ಬಿದ್ದಿಲ್ಲ.

ತಾಲೂಕಿನ ಮಣಿಕುಪ್ಪೆ, ದೊಡಮಳವಾಡಿ, ಚಿಕ್ಕಮಳವಾಡಿ, ಸಿಎಎಸ್ ಪುರ, ಹೆಬ್ಬೂರು ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ‌‌ ಚಿರತೆ ಓಡಾಡುತ್ತಿದೆ. ಚಿರತೆ ಭಯದಿಂದ ಸುತ್ತಮುತ್ತಲ ಗ್ರಾಮಸ್ಥರ ಜನರು ಮನೆಯಿಂದ ಹೊರ ಬರಲು ಕೂಡ ಹೆದರುವಂತೆ ಆಗಿದೆ. ಮೂವರನ್ನು ಬಲಿ ಪಡೆದ ಚಿರತೆ, ಜಾನುವಾರುಗಳ ಮೇಲೆ ಕೂಡ ದಾಳಿ ನಡೆಸುತ್ತಿದೆ. ಇದರಿಂದ ಆಂತಕಗೊಂಡ ಜನ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಅದರಂತೆ, ಬನ್ನೆರುಘಟ್ಟ, ಬಂಡಿಪುರ, ನಾಗರಹೊಳೆಯಿಂದ ವಿಶೇಷ ಪಡೆ, 20 ಬೋನ್ ಇಟ್ಟು, ಕಳೆದ ಐದು ದಿನಗಳಿಂದ 60ಕ್ಕೂ ಹೆಚ್ಚು ಸಿಬ್ಬಂದಿಗಳು  ಹಗಲು ರಾತ್ರಿ ಚಿರತೆ ಸೆರೆಗೆ ಕಾದು ಕುಳಿತಿದ್ದಾರೆ.  ಆದರೆ, ಚಿರತೆ ಮಾತ್ರ ಇನ್ನು ಸಿಕ್ಕಿಲ್ಲ.

ಆದರೆ, ಚಿರತೆ ಚಲನವಲನಗಳು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ದೃಶ್ಯವಾಳಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಶಂಕರ ಫಾಲ್ಸ್

ಇನ್ನು ಚಿರತೆ ಸೆರೆಗಾಗಿ ಸ್ವತಃ ಶಾಸಕ ಮಸಾಲೆ ಜಯರಾಂ ಕೂಡ ಹುಡುಕಾಟ ನಡೆಸಲು ಮುಂದಾಗಿದ್ದು, ಜನರಲ್ಲಿ ನಿತ್ಯ ಭಯ ಮೂಡಿಸುತ್ತಿರುವ  ಚಿರತೆ ಶೂಟೌಟ್​ಗೆ ಅನುಮತಿ ಕೊಡಿ ಎನ್ನುತ್ತಿದ್ದಾರೆ. ಆದರೆ, ಇದಕ್ಕೆ ಇನ್ನು ಒಪ್ಪಿಗೆ ಸಿಕ್ಕದ ಹಿನ್ನೆಲೆ ಇಂದು ಕೂಡ ಹಗಲು ರಾತ್ರಿ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ