Udupi ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ V/S ಕೇಸರಿ ಶಾಲು..ವಿವಾದ Twitterನಲ್ಲಿ No.1ಆಗಿದ್ದೇಕೆ?

ತರಗತಿಯೊಳಗೆ ಹಿಜಾಬ್ ಧರಿಸಿ ಬರಲು ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ನಡೆಸುತ್ತಿರುವ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ.

ಸರ್ಕಾರಿ ಕಾಲೇಜು

ಸರ್ಕಾರಿ ಕಾಲೇಜು

  • Share this:
ಉಡುಪಿ:  ತರಗತಿಯೊಳಗೆ ಹಿಜಾಬ್ (Hijab) ಧರಿಸಿ ಬರಲು ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು (Students) ನಡೆಸುತ್ತಿರುವ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಸಮವಸ್ತ್ರ ಧರಿಸಿ ಬಂದು ತರಗತಿಯೊಳಗೆ (Classroom) ಕೂರಲು ಅವಕಾಶವಿಲ್ಲ ಎಂದು ಕಾಲೇಜು ( College) ಆಡಳಿತ ಮಂಡಳಿ ಸ್ಪಷ್ಟವಾಗಿ ತಿಳಿಸಿದೆ. ಹಠಕ್ಕೆ ಬಿದ್ದಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ, ಈ ವಿವಾದವನ್ನು ಟ್ವಿಟ್ಟರ್ ನಲ್ಲಿ  ಟ್ರೆಂಡಿಂಗ್ ಮಾಡಿ  ರಾಷ್ಟ್ರದ ಗಮನ ಸೆಳೆಯಲು ಪ್ರಯತ್ನಿಸಿದೆ. ಪೋಷಕರ ವಿರೋಧ ಇಲ್ದೇ ಇದ್ರೂ ಸಂಘಟನೆಯ ಮುಂದಾಳತ್ವ ಹಲವು ಅನುಮಾನಗಳಿಗೆ ಎಡೆಮಾಡಿದೆ.ಈ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅಂತಹ ಯಾವುದೇ ವಿವಾದ ಇರಲಿಲ್ಲ. ಕಳೆದ ಮೂವತ್ತೇಳು ವರ್ಷಗಳಿಂದ, ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿ ನಲ್ಲಿ ಸರ್ವಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಮಾತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಅದನ್ನು ತೆಗೆದಿರಿಸಿ ಪಾಠ ಕೇಳುತ್ತಿದ್ದರು. ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇವರ ಪೈಕಿ ಕೇವಲ ಹನ್ನೆರಡು ಮಂದಿ ವಿದ್ಯಾರ್ಥಿನಿಯರು ಇದೀಗ ತಗಾದೆ ತೆಗೆದಿದ್ದಾರೆ.

ಹಿಜಾಬ್ ಹಠ ಏಕೆ? 

ಸದ್ಯ ಪೋಷಕರ ಮನವೊಲಿಸಿದ ಬಳಿಕ ಆರು ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದಾರೆ. ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ವಿದ್ಯಾರ್ಥಿ ಸಂಘಟನೆಯ ಬೆಂಬಲದೊಂದಿಗೆ, ತರಗತಿಗೆ ಹಾಜರಾಗದೆ ಹೊರಗುಳಿದಿದ್ದಾರೆ. ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶವಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ವಿದ್ಯಾರ್ಥಿನಿಯರು ಆಕ್ಷೇಪವೆತ್ತಿದ್ದಾರೆ. ಇಲ್ಲಿ ಓರ್ವ ಪೋಷಕರ ವಿರೋಧ ಬಿಟ್ರೆ ಇನ್ನುಳಿದ ಯಾವುದೇ ಪೋಷಕರ ವಿರೋಧ ಇಲ್ವಂತೆ. ಕೇವಲ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹಠ ಹಾಗೂ ಬೆಂಬಲ. ಸಂಘಟನೆಯ ಈ ಬೆಂಬಲದಿಂದ ವಿದ್ಯಾರ್ಥಿನಿಯರು ಹಿಜಾಬ್ ಹಠಕ್ಕೆ ಬಿದ್ದಂತಿದೆ.

ಇದನ್ನೂ ಓದಿ: Karnataka Weekend Curfew: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ: ನೈಟ್ ಕರ್ಫ್ಯೂ ವಿಸ್ತರಣೆ, ಶಾಲೆಗಳು ಬಂದ್​

ವಿದ್ಯಾರ್ಥಿನಿಯರ ಒತ್ತಾಯ 

ಇನ್ನು ಈ ಬಗ್ಗೆ ನ್ಯೂಸ್ ೧೮ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು, ಹಿಜಾಬ್ ನಮ್ಮ ಹಕ್ಕು . ನಮ್ನ ಧರ್ಮ ಪಾಲಿಸಲು ಅವಕಾಶ ನೀಡಿ. ನಮ್ಮ ತಂದೆ ನಮ್ಮ ಸಹೋದರ ಎದುರು ಮಾತ್ರ ನಮ್ಮ ತಲೆಗೂದಲು ತೋರಿಸಲು ನಮ್ಮ ಧರ್ಮದಲ್ಲಿ ಅವಕಾಶ ಇದೆ. ಬಾಲಕಿಯರ ಕಾಲೇಜು ಆದರೂ ಪುರುಷ ಅಧ್ಯಾಪಕರು ಇರುತ್ತಾರೆ. ಹೀಗಾಗಿ ಅವರ ಮುಂದೆ ಹಿಜಾಬ್ ಇಲ್ಲದೆ ಬರಲು ಸಾಧ್ಯವಿಲ್ಲ . ನಮ್ಮ ಮುಖ ಹಿಜಾಬ್ ಧರಿಸಿಯೂ ಕಾಣುತ್ತೆ. ಹೀಗಾಗಿ ಹಿಜಾಬ್ ಅವಕಾಶ ನೀಡುವವರೆಗೆ ತರಗತಿಗೆ ಬರುವುದಿಲ್ಲ. ಹೀಗಂತ ಬೇಸರ ‌ಹೊರಹಾಕಿದ್ದಾರೆ ವಿದ್ಯಾರ್ಥಿನಿಯರು.

ವಿವಾದ ತಾರಕಕ್ಕೇರಿದ್ದು ಏಕೆ? 

ತರಗತಿಯೊಳಗೆ ಸಮವಸ್ತ್ರದಲ್ಲೇ ವಿದ್ಯಾರ್ಥಿನಿಯರು ಕುಳಿತುಕೊಳ್ಳಬೇಕು. ಈ ನಿಯಮಾವಳಿ ಎಲ್ಲರಿಗೂ ಅನ್ವಯವಾಗುತ್ತದೆ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಹಿಜಾಬ್ ಧರಿಸಿ ಅನ್ಯ ವಿದ್ಯಾರ್ಥಿನಿಯರು ತರಗತಿಗಳಿಗೆ ಬರಲು ಅವಕಾಶವಾಗುತ್ತದೆ. ವಿದ್ಯಾರ್ಥಿನಿಯರ ಗುರುತು ಹಾಗೂ ಸುರಕ್ಷತೆಯ ದೃಷ್ಟಿಯಿಂದ ತರಗತಿಯೊಳಗೆ ಸಮವಸ್ತ್ರದ ಶಿಸ್ತು ಅಗತ್ಯ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ಆರು ಮಂದಿ ವಿದ್ಯಾರ್ಥಿನಿಯರನ್ನು ಹೊರತುಪಡಿಸಿದರೆ ಇತರ ಮುಸ್ಲಿಂ ಪೋಷಕರಿಗೆ ಯಾವುದೇ ಆಕ್ಷೇಪವಿಲ್ಲ. ಸಭೆ ನಡೆಸಿದಾಗ ಈ ವಿದ್ಯಾರ್ಥಿನಿಯರ ಪೋಷಕರು ಕೂಡ ಪ್ರಾಂಶುಪಾಲರ ಅಭಿಪ್ರಾಯಕ್ಕೆ ಬಹುತೇಕ ಒಪ್ಪಿದ್ದರು. ಆದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಧ್ಯ ಪ್ರವೇಶಿಸಿದ ನಂತರ ವಿವಾದ ತಾರಕಕ್ಕೇರಿದೆ.

ಕೇಸರಿ ಶಾಲು ಧರಿಸಲು ಅವಕಾಶ

ಭಾನುವಾರ ಈ ವಿಚಾರವನ್ನು ಇಟ್ಟುಕೊಂಡು ಟ್ವಿಟ್ಟರ್ ನಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಒಂದು ಗಂಟೆಯ ಮಟ್ಟಿಗೆ ಈ ವಿಚಾರ ರಾಷ್ಟ್ರದಲ್ಲಿ ಟ್ರೆಂಡಿಂಗ್ ಕೂಡಾ ಆಗಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಶಾಸಕ ರಘುಪತಿ ಭಟ್, ಪ್ರಾಂಶುಪಾಲರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಮನೆಯಿಂದ ತರಗತಿಯವರೆಗೂ ಹಿಜಾಬ್ ಹರಿಸುವುದಕ್ಕೆ ಅವಕಾಶವಿದೆ. ತರಗತಿಯೊಳಗೆ ಸಮವಸ್ತ್ರ ಕಡ್ಡಾಯ, ಈ ವಿಚಾರವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ, ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಲು ಅವಕಾಶ ಕೇಳಿದ್ದಾರೆ. ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವದೇ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಇನ್ನು  ಹಿಂದೂ ಸಂಘಟನೆಗಳು ಕೂಡ ಧರ್ಮ ತರಗತಿಯಲ್ಲಿ ಅಗತ್ಯವಿಲ್ಲ. ಒಂದು ವೇಳೆ ಹಿಜಾಬ್ ಧರಿಸಿ ಬಂದಲ್ಲಿ ಹಿಂದೂ ವಿದ್ಯಾರ್ಥಿನಿಯರು ಕೇಸರಿ ಉಡುಗೆಯಲ್ಲಿ  ಬರುತ್ತಾರೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Kodagu: ಕರೆಂಟೇ ಇಲ್ಲದಿದ್ದರೂ ಶಾಕ್.. ಸಾವಿರಾರು ರೂಪಾಯಿ ಬಿಲ್ ಕಂಡು ಹಾಡಿ ಜನಕ್ಕೆ ಆಘಾತ!

ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ದೆಹಲಿ ಹೈಕೋರ್ಟ್ , ತರಗತಿಯೊಳಗೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಆದೇಶ ನೀಡಿರುವ ಉದಾಹರಣೆ ಇದೆ. ಸುಶಿಕ್ಷಿತರ ಜಿಲ್ಲೆ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಹಿಜಾಬ್ ವಿವಾದ ಈ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಕೇವಲ ಅಕ್ಷರ ಅಭ್ಯಾಸ ನಡೆಸಿದರೆ ಸಾಲದು, ಶಿಕ್ಷಣದ ಮೂಲಕ ಜ್ಞಾನ ಸಂಪಾದನೆ ಮಾಡದಿದ್ದರೆ ಏನು ಪ್ರಯೋಜನ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
Published by:Kavya V
First published: