ಕಾಲೇಜಿಗೆ ಬಂಕ್ ಹಾಕಿ ಎಣ್ಣೆ ಪಾರ್ಟಿ ಮಾಡಲು ಬಾರ್​​ಗೆ ಹಾಜರಾದ ವಿದ್ಯಾರ್ಥಿಗಳು..!

ಈ ವಿದ್ಯಾರ್ಥಿಗಳು ಬಾರ್​​ಗೆ ಹೋಗಿ ಕುಡಿಯುತ್ತಿರುವ ವಿಷಯವನ್ನು ಯಾರೋ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು ಅವರು ಕಾಲೇಜಿನ ಉಪನ್ಯಾಸಕರನ್ನು ಕರೆದುಕೊಂಡು ಬಾರ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಈ ವಿದ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಪ್ರಾಂಶುಪಾಲರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು(ಫೆ.08): ಕಾಲೇಜಿಗೆ ಬಂಕ್ ಹೊಡೆದು ಸಿನಿಮಾ ನೋಡೋಕೆ ಹೋಗೋದು, ಅದು ಪೋಷಕರಿಗೆ ಗೊತ್ತಾಗಿ ಪರದಾಡೋದು, ಇದೆಲ್ಲವನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಆದರೆ ಈ ಒಂದು ಘಟನೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ಬಂಕ್ ಹೊಡೆದು ಬಾರ್​​ಗೆ ಹಾಜರಾಗಿದ್ರು. ಅದು ಯಾಕೆ ಅಂತಾ ನಿಮ್ಮೆಲ್ಲರಿಗೂ ಅಚ್ಚರಿಯಾಗುತ್ತಿರಬಹುದು ಅಲ್ವಾ.? ಹೌದು ಈ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಆರಂಭವಾಗಿದ್ದ ತರಗತಿಗಳಿಗೆ ಬಂಕ್ ಹಾಕಿ ಬಾರ್​ನಲ್ಲಿ ಎಣ್ಣೆ ಪಾರ್ಟಿ ಮಾಡೋದಕ್ಕೆ ಹಾಜರಾಗಿಬಿಟ್ಟಿದ್ದರು. ಇದೇನು ಇಷ್ಟೊಂದು ಹೆಂಡಕುಡುಕರ ಈ ವಿದ್ಯಾರ್ಥಿಗಳು ಅಂತಾ ಯೋಚಿಸುತ್ತಿದ್ದಿರಾ?. ಈ ವಿದ್ಯಾರ್ಥಿಗಳು ಮದ್ಯಪಾನಕ್ಕೆ ಅಷ್ಟೊಂದು ದಾಸರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮಟ ಮಟ ಮಧ್ಯಾಹ್ನವೇ ತರಗತಿಗಳನ್ನು ಬಿಟ್ಟು ಬಾರ್​​ಗೆ ಹಾಜರಾಗಿದ್ದರು.

ಹೌದು, ಈ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದಲ್ಲಿ. ವಿರಾಜಪೇಟೆ ಪಟ್ಟಣದ ಸೆಂಟ್ ಆ್ಯನ್ಸ್ ಕಾಲೇಜಿನ ದ್ವಿತೀಯ ತರಗತಿಯ ವಿದ್ಯಾರ್ಥಿಗಳು. ಕೊರಓನಾ ಮಹಾಮಾರಿಗೆ ಹೆದರಿ ಕಾಲೇಜಿಗೆ ಬರೋಬ್ಬರಿ ಏಳೆಂಟು ತಿಂಗಳ ಕಾಲ ಸಂಪೂರ್ಣ ರಜೆ ನೀಡಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ದ್ವಿತೀಯ ಪಿಯು ತರಗತಿಗಳು ಆರಂಭವಾಗಿದ್ದವು. ಪರೀಕ್ಷೆಗಳು ಇನ್ನೇನು ಆರಂಭವಾಗಿ ಬಿಡುತ್ತವೆ ಎಂದು ಉಪನ್ಯಾಸಕರು ಶ್ರಮಪಟ್ಟು ತರಗತಿಗಳನ್ನು ನಡೆಸುತ್ತಿದ್ದರೆ, ಕಾಲೇಜಿನ ಆರು ವಿದ್ಯಾರ್ಥಿಗಳು ತರಗತಿಗೆ ಗುಡ್ ಬೈ ಹೇಳಿ ಸಮೀಪದಲ್ಲಿಯೇ ಇದ್ದ ಕೀರ್ತಿ ಬಾರ್ ಗೆ ಹೋಗಿ ಜಾಲಿ ಮಾಡಲು ಆರಂಭಿಸಿದ್ದರು.

ಒಂದು ಟೇಬಲ್‍ನಲ್ಲಿ ಕುಳಿತು ಫುಲ್ ಟೈ ಆಗುತ್ತಿದ್ದರು. ಇವರ ಗ್ರಹಚಾರ ಕೆಟ್ಟಿತ್ತು ಎನಿಸುತ್ತದೆ, ಈ ವಿದ್ಯಾರ್ಥಿಗಳು ಬಾರ್​​ಗೆ ಹೋಗಿ ಕುಡಿಯುತ್ತಿರುವ ವಿಷಯವನ್ನು ಯಾರೋ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು ಅವರು ಕಾಲೇಜಿನ ಉಪನ್ಯಾಸಕರನ್ನು ಕರೆದುಕೊಂಡು ಬಾರ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಈ ವಿದ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಪ್ರಾಂಶುಪಾಲರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ನರೇಗಾ ಕಾರ್ಮಿಕರ ಜೊತೆ ಭಾನುವಾರ ಕಳೆದ ಲಕ್ಷ್ಮೀ ಹೆಬ್ಬಾಳ್ಕರ್; ಸಮಸ್ಯೆ ಕೇಳಿ, ಜತೆಗೆ ಊಟ ಮಾಡಿದ ಶಾಸಕಿ

ಅಷ್ಟೊತ್ತಿಗಾಗಲೇ ಈ ವಿದ್ಯಾರ್ಥಿಗಳು ಹಲವು ಬಾಟಲ್ ಗಳನ್ನು ಖಾಲಿ ಮಾಡಿ ಟೇಬಲ್ ಮೇಲೆ ಬಾಟಲ್ ಗಳನ್ನು ಉರುಳಿ ಹಾಕಿದ್ದಾರೆ. ಪ್ರಾಂಶುಪಾಲ ಮದಲೈ ಮುತ್ತು ಎಣ್ಣೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಅಷ್ಟೊತ್ತಿಗೆ ಟೈಟ್ ಆಗಿದ್ದ ಅವರು ಪ್ರಾಂಶುಪಾಲರಿಗೆ ತಿರುಗಿ ಮಾತನಾಡಿದ್ದಾರೆ. ಮೊದಲೇ ಸಿಟ್ಟಿಗೆದ್ದಿದ್ದ ಪ್ರಾಂಶಪಾಲರ ಕೋಪದ ಕಟ್ಟೆ ಒಡೆದು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ ನಮ್ಮ ಗ್ರಹಚಾರ ಕೆಟ್ಟಿತು ಎಂದು ಅರಿತ ವಿದ್ಯಾರ್ಥಿಯೊಬ್ಬ ಅಲ್ಲಿಂದ ಮೆಲ್ಲನೆ ಕಾಲ್ಕೀಳಲು ಯತ್ನಿಸಿದ. ಅವನನ್ನೂ ಹಿಡಿದು ನಿಲ್ಲಿಸಿ ಆತನ ತಲೆಗೂ ಪ್ರಾಂಶುಪಾಲ ಎರಡು ಪೆಟ್ಟು ಕೊಟ್ಟಿದ್ದಾರೆ.

ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಎನ್ನುವುದನ್ನು ನೋಡದೆ ಬಾರ್​ಗೆ ಎಂಟ್ರಿಕೊಟ್ಟು ಅವರಿಗೆ ಮದ್ಯ ಸಪ್ಲೇ ಮಾಡಿದ್ದ ಬಾರ್​​ನ ಕ್ಯಾಷಿಯರ್ ಗೆ ತೀವ್ರ ತರಾಟೆಗೆ ತೆಗೆದುಕೊಂಡು ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ? ಇನ್ನೊಮ್ಮೆ ಹೀಗೆ ಮಾಡಿದ್ರೆ ನಿಮ್ಮ ವಿರುದ್ಧ ಕಂಪ್ಲೇಟ್ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಹಲವು ತಿಂಗಳಿನಿಂದ ದೂರ ದೂರವಿದ್ದ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆರಂಭವಾಗುತ್ತಿದ್ದಂತೆ ಒಟ್ಟಿಗೆ ಸೇರಿ ಪಾರ್ಟಿ ಮಾಡಲು ಹೋಗಿ ಸರಿಯಾಗಿ ತಗಲಾಕಿಕೊಂಡಿದ್ದಾರೆ.
Published by:Latha CG
First published: