• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಕೈ ಮೇಲೆ ಭೀಮೇಶ್ ಎಂದು ಬರೆದುಕೊಂಡು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸಾವು

Bengaluru: ಕೈ ಮೇಲೆ ಭೀಮೇಶ್ ಎಂದು ಬರೆದುಕೊಂಡು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸಾವು

ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ ಸಾವು (ಸಾಂದರ್ಭಿಕ ಚಿತ್ರ)

ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ ಸಾವು (ಸಾಂದರ್ಭಿಕ ಚಿತ್ರ)

ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ ಎಂದು ವಿದ್ಯಾರ್ಥಿನಿ ಬರೆದಿದ್ದಾಳೆ ಎನ್ನಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ (Student) ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ (Bengaluru) ಕಾಟನ್​​ಪೇಟೆ ಪೊಲೀಸ್ ಠಾಣೆ (Cottonpet Police Station) ವ್ಯಾಪ್ತಿಯಲ್ಲಿ ನಡೆದಿದೆ. ಕಟ್ಟಡದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಬೆಳಗ್ಗೆ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಆಯಿಶಾ ಬಿ.ಆರ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಿಎಸ್​​​ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ಇಂದು ಬೆಳಗ್ಗೆ ಬಿನ್ನಿ ಮಿಲ್ (Binny Mill) ಸಮೀಪದ ಪೊಲೀಸ್ ಕ್ವಾರ್ಟರ್ಸ್ ನಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವೇಳೆ ಆಕೆ ಕೈ ಮೇಲೆ ಭೀಮೇಶ್​ ಹಾಗೂ ಫೋನ್ ನಂಬರ್ (Phone Number) ಬರೆದುಕೊಂಡಿರುವುದು ಕಂಡು ಬಂದಿದೆ. ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ಕಾಟನ್​ಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಬಳಿಕ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Postmortem) ರವಾನೆ ಮಾಡಿದ್ದಾರೆ.


ನನ್ನ ಸಾವಿಗೆ ನಾನೇ ಕಾರಣ ಅಂತ ವಿದ್ಯಾರ್ಥಿನಿ ಪತ್ರ


ಪೊಲೀಸರು ಮೃತ ವಿದ್ಯಾರ್ಥಿನಿ ಬರೆದಿದ್ದಾಳೆ ಎನ್ನಲಾದ ಡೆತ್​​​ನೋಟ್​​ ಒಂದನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು, ಡೆತ್​​ನೋಟ್​ನಲ್ಲಿ ಈ ನನ್ನ ಸಾವಿಗೆ ಕಾರಣ ಯಾರು ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನಾನೇ ಸ್ವ-ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ ಎಂದು ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Crime News: ಕೈ ಹಿಂದಕ್ಕೆ ಕಟ್ಟಿ, ನೇಣು ಬಿಗಿದು ಕೊಲೆ! ಬೆಂಗಳೂರಿನಲ್ಲಿ ತಾಯಿ-ಮಗಳ ಡಬಲ್​ ಮರ್ಡರ್​


ನನ್ನಿಂದ ಎರಡು ಕುಟುಂಬಗಳಿಗೆ ನೋವಾಗಿದೆ ಅಂತ ಪಶ್ಚಾತ್ತಾಪ


ಅಲ್ಲದೆ, ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆ. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ, ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ.




ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ, ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ, ಈ ನನ್ನ ಆತ್ಮಹತ್ಯೆಗೂ ಭೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ ಎಂದು ಬರೆದಿದ್ದಾಳೆ ಎನ್ನಲಾಗಿದೆ. ನಮ್ಮ ಅಪ್ಪನಿಗೆ SORRY ಹೇಳು ಭೀಮೇಶ್, Iam very sorry ಭೀಮೇಶ್ ನಿನ್ನನ್ನ ಜೈಲಿಗೆ ಕಳಿಸಿದಕ್ಕೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಕೆಲಸದಲ್ಲಿ ಒತ್ತಡ ತಡೆಯಲಾಗದೆ ಯುವಕ ಆತ್ಮಹತ್ಯೆ


ಕಲಬುರಗಿ ನಗರದ ವಿಶ್ವವಿದ್ಯಾಲಯ ಆವರಣದ ಪಾಳು ಬಿದ್ದ ಗೋಡಾನ್‌ನಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜ್ಯೋತಿಬಾ ಪುಲೆ ಬಡಾವಣೆಯ ನಿವಾಸಿ ಶಶಾಂಕ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.


ಮೃತ ಶಶಾಂಕ್​, ಆನ್‌ಲೈನ್ ಎನಿಮೇಶನ್ ಕೆಲಸ ಮಾಡುತ್ತಿದ್ದನಂತೆ. ಆನ್‌ಲೈನ್ ಎನಿಮೇಶನ್ ಕೆಲಸದಲ್ಲಿ ಬಹಳಷ್ಟು ಒತ್ತಡ ಹಾಕಿಕೊಂಡಿದ್ದ, ಒತ್ತಡ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

top videos
    First published: