• Home
  • »
  • News
  • »
  • state
  • »
  • Bengaluru: ಶೌಚಾಲಯದಲ್ಲಿದ್ದ ವಿದ್ಯಾರ್ಥಿನಿಯರ ವಿಡಿಯೋ ಮಾಡ್ತಿದ್ದ ಯುವಕ ಪೊಲೀಸರ ವಶಕ್ಕೆ

Bengaluru: ಶೌಚಾಲಯದಲ್ಲಿದ್ದ ವಿದ್ಯಾರ್ಥಿನಿಯರ ವಿಡಿಯೋ ಮಾಡ್ತಿದ್ದ ಯುವಕ ಪೊಲೀಸರ ವಶಕ್ಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಲೇಜಿನ ವಿದ್ಯಾರ್ಥಿನಿಯರ ಶೌಚಕ್ಕೆ ಹೋಗಿ, ಒಂದು ರೂಮಿನ ಮೇಲೆ ನಿಂತು ಅವರ ಖಾಸಗಿ ಅಂಗಗಳ ವಿಡಿಯೋ ಮಾಡಿಕೊಳ್ಳುತ್ತಿದ್ದೆ ಎಂದು ಶುಭಂ  ತಪ್ಪೊಪ್ಪಿಕೊಂಡಿದ್ದಾನೆ.

  • Share this:

ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ (Female Students Toilet) ವಿಡಿಯೋ (Video Record) ಮಾಡುತ್ತಿದ್ದ ವಿದ್ಯಾರ್ಥಿಯನ್ನು ಗಿರಿನಗರ ಪೊಲೀಸರು (Girinagara Police Station) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜಿನಲ್ಲಿ (Private College) ಈ ಘಟನೆ ನಡೆದಿದ್ದು, ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಎಫ್​ಐಆರ್ (FIR) ದಾಖಲಾಗಿದೆ. ಶೌಚಾಲಯದ ಮೇಲ್ಭಾಗದಲ್ಲಿ ಕುಳಿತು ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳನ್ನು ವಿದ್ಯಾರ್ಥಿ ಸೆರೆ ಹಿಡಿಯುತ್ತಿದ್ದನು. ವಿದ್ಯಾರ್ಥಿನಿಯರು ಈ ವಿಷಯವನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಶೌಚಾಲಯದ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು (CCTV Footage) ಪರಿಶೀಲಿಸಿದಾಗ ವಿಡಿಯೋ ಸೆರೆ ಹಿಡಿಯುತ್ತಿದ್ದ ಯುವಕ ತಮ್ಮದೇ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯದ ಚಿತ್ರ ಪ್ರಿಂಟ್ ಹಾಕಿಸಿ ಎಲ್ಲಾ ವಿಭಾಗದ ಉಪನ್ಯಾಸಕರಿಗೆ ಕಳುಹಿಸಿದಾಗ ವಿದ್ಯಾರ್ಥಿಯ ಗುರುತು ಪತ್ತೆ ಹಚ್ಚಿದ್ದಾರೆ.


ಶುಭಂ ಎಂ ಆಜಾದ್ ಎಂಬಾತನೇ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಮನಸ್ಸಿನ ಯುವಕ. ಈತ ಇದೇ ಕಾಲೇಜಿನಲ್ಲಿ ಬಿಬಿಎ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾನೆ.  ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.


ಏನಿದು ಪ್ರಕರಣ?


ಕಾಲೇಜು ಆಡಳಿತ ಮಂಡಳಿ ನೀಡಿದ ದೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ನವೆಂಬರ್ 13, 2022ರಂದು ಸುಮಾರು ಸಂಜೆ 5.30ಕ್ಕೆ ಶೌಚಾಲಯಕ್ಕೆ ಹೋದಾಗ ರೂಮ್​ಗಳು ಲಾಕ್​ ಆಗಿತ್ತು. ಒಳಗೆ ಯಾರೋ ಇರಬಹುದು ಎಂದು ಹೊರಗೆ ಕಾಯುತ್ತೆ ನಿಂತೆವು. ತುಂಬಾ ಸಮಯದ ಬಳಿಕ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದ ಒಳಗಿದ್ದವರಿಗೆ ಹೊರಗೆ ಬರುವಂತೆ ಹೇಳಲಾಯ್ತು. ಈ ವೇಳೆ ಶೌಚಾಲಯದ ಮೇಲ್ಭಾಗದಲ್ಲಿ ಯುವಕನೋರ್ವ ಕುಳಿತಿರೋದು ನಮ್ಮ ಗಮನಕ್ಕೆ ಬಂತು.


ನಾವು ಜೋರಾಗಿ ತಳ್ಳಿದಾಗ ಶೌಚಾಲಯದ ಬಾಗಿಲು ಓಪನ್ ಆಯ್ತು. ಆದ್ರೆ ಆ ಯುವಕ ನಮ್ಮಿಂದ ತಪ್ಪಿಸಿಕೊಂಡು ಹೋದನು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.


college student detained for taking photos and videos of female students in toilet mrq
ಸಾಂದರ್ಭಿಕ ಚಿತ್ರ


ಶುಭಂ ಗುರುತು ಪತ್ತೆ ಹಚ್ಚಿದ ಸಿಸಿಟಿವಿ


ಕಾಲೇಜು ಅಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯ  ಗಮನಕ್ಕೆ ಈ ವಿಷಯವನ್ನು ವಿದ್ಯಾರ್ಥಿನಿಯರು ತಂದಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಯುವಕ ಶುಭಂ ಎಂ.ಅಜಾದ್​ನನ್ನು ಗುರುತಿಸಿದ್ದಾರೆ.


ಇದನ್ನೂ ಓದಿ:  Mangaluru Blast Case: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್; ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತಾ ಪ್ಲಾನ್​!?


ನವೆಂಬರ್ 16ರಂದು ವಿದ್ಯಾರ್ಥಿ ಶುಭಂ ವಿಚಾರಣೆ ನಡೆಸಿದ ಕಾಲೇಜು ಆಡಳಿತ ಮಂಡಳಿಗೆ ಶಾಕ್ ಎದುರಾಗಿತ್ತು. ಕಾಲೇಜಿನ ವಿದ್ಯಾರ್ಥಿನಿಯರ ಶೌಚಕ್ಕೆ ಹೋಗಿ, ಒಂದು ರೂಮಿನ ಮೇಲೆ ನಿಂತು ಅವರ ಖಾಸಗಿ ಅಂಗಗಳ ವಿಡಿಯೋ ಮಾಡಿಕೊಳ್ಳುತ್ತಿದ್ದೆ ಎಂದು ಶುಭಂ  ತಪ್ಪೊಪ್ಪಿಕೊಂಡಿದ್ದಾನೆ.


ವಿದ್ಯಾರ್ಥಿಯಿಂದ ಕ್ಷಮಾಪಣಾ ಪತ್ರ


ಸುಮಾರು ಮೂರರಿಂದ ನಾಲ್ಕು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ತನ್ನ ಬಳಿಯಲ್ಲಿವೆ. ಇದೇ ರೀತಿ ತನ್ನ ಬಳಿ ಸುಮಾರು 1000 ರಿಂದ 1200 ಮಹಿಳೆಯರ ಫೋಟೋ ಮತ್ತು ವಿಡಿಯೋಗಳು ತನ್ನ ಮೊಬೈಲ್​ನಲ್ಲಿವೆ ಎಂದು ಹೇಳಿದ್ದಾನೆ.


college student detained for taking photos and videos of female students in toilet mrq
ಸಾಂದರ್ಭಿಕ ಚಿತ್ರ


ವಿಚಾರಣೆ ಬಳಿಕ ಸೂಕ್ಷ್ಮ ತಿಳುವಳಿಕೆ ನೀಡಿದ ಕಾಲೇಜು ಆಡಳಿತ ಮಂಡಳಿ ಶುಭಂ ಬಳಿಯಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದರು.


ಇದನ್ನೂ ಓದಿ:  Davanagere: ಗರ್ಭಿಣಿ ಪತ್ನಿಯನ್ನ ಕೊಲೆಗೈದ ಗಂಡ; ತಿಂಗಳ ಮುಂಚೆಯೇ ಗುಂಡಿ ತೋಡಿದ್ದ ನೀಚ


ಎಚ್ಚರಿಕೆ ಬಳಿಕವೂ ಹಳೆ ಚಾಳಿ ಮುಂದುವರಿಸಿದ್ದ ಶುಭಂ


ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ನೀಡಿದ್ರೂ ನವೆಂವರ್ 18 ಮತ್ತು 19ರಂದು ಕ್ಯಾಂಪಸ್​ನಲ್ಲಿರುವ ಮಹಿಳಾ ಶೌಚಾಲಯದ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದಾನೆ. ಕೆಲವು ಮಹಿಳೆಯರನ್ನು ಶುಭಂ ಹಿಂಬಾಲಿಸುತ್ತಿದ್ದನು. ಈ ಹಿನ್ನೆಲೆ ಶುಭಂ ವಿರುದ್ಧ ಕಾಲೇಜು ಆಡಳಿತ ಮಂಡಳಿಯೇ ದೂರು ಸಲ್ಲಿಕೆ ಮಾಡಿದೆ.

Published by:Mahmadrafik K
First published: