• Home
  • »
  • News
  • »
  • state
  • »
  • Mangaluru Blast: ಮಂಗಳೂರು ಬ್ಲಾಸ್ಟ್​ ಕೇಸಲ್ಲಿ ಸಾಕ್ಷ್ಯ ಸಂಗ್ರಹವೇ ಸವಾಲು

Mangaluru Blast: ಮಂಗಳೂರು ಬ್ಲಾಸ್ಟ್​ ಕೇಸಲ್ಲಿ ಸಾಕ್ಷ್ಯ ಸಂಗ್ರಹವೇ ಸವಾಲು

ಮಂಗಳೂರು ಬ್ಲಾಸ್ಟ್​ ಕೇಸ್

ಮಂಗಳೂರು ಬ್ಲಾಸ್ಟ್​ ಕೇಸ್

ಒಂದು ವೇಳೆ ಚೇತರಿಸಿಕೊಂಡರು ಶಾರೀಕ್ ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಾನಾ ಅನ್ನೋ ಅನುಮಾನ ಸಹ ಮೂಡಿದೆ. ಕುಕ್ಕರ್ ಬಾಂಬ್​ ಸ್ಫೋಟದಲ್ಲಿ ಶಾರೀಕ್ ಹೇಳಿಕೆ ನಿರ್ಣಾಯಕವಾಗಿದ್ದು, ಆತನ ಆರೋಗ್ಯ ಚೇತರಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ.

  • News18 Kannada
  • Last Updated :
  • Mangalore, India
  • Share this:

Mangaluru Cooker Bomb Blast: ಮಂಗಳೂರಿನಲ್ಲಿ‌ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಸಾಕ್ಷ್ಯ ಸಂಗ್ರಹವೇ ದೊಡ್ಡ ಸವಾಲು ಆಗಿದೆ. ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿರು ಶಾರೀಕ್​ಗೆ (Sharik) ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ (Father Muller Medical College Hospital Mangalore) ಚಿಕಿತ್ಸೆ (Treatment) ನೀಡಲಾಗುತ್ತಿದೆ. ಈ ಹಿನ್ನೆಲೆ ಪೊಲೀಸರು (Mangaluru Police) ಇನ್ನು ಶಾರೀಕ್ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಶಾರೀಕ್ ಬಲಗಣ್ಣು, ಎರಡೂ ಕೈಗಳಿಗೆ ಸುಟ್ಟು ಗಾಯಗಳಾಗಿವೆ. ಇದರ ಜೊತೆಗೆ ಮುಖ ಹಾಗೂ ಹೊಟ್ಟೆ ಭಾಗದಲ್ಲೂ ಸುಟ್ಟ ಗಾಯಗಳಾಗಿವೆ. ಶಾರೀಕ್​​ಗೆ ಸುಟ್ಟ ಗಾಯಗಳಿಂದ ಕಿಡ್ನಿ ಇನ್ಫೆಕ್ಷನ್ (Kidney Inspection)  ಸಾಧ್ಯತೆಗಳಿದ್ದು, ಹೇಳಿಕೆ (Sharik Statement) ನೀಡಲು ಇನ್ನು ಒಂದು ವಾರ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.


ಒಂದು ವೇಳೆ ಚೇತರಿಸಿಕೊಂಡರೂ ಶಾರೀಕ್ ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಾನಾ ಅನ್ನೋ ಅನುಮಾನ ಸಹ ಮೂಡಿದೆ. ಕುಕ್ಕರ್ ಬಾಂಬ್​ ಸ್ಫೋಟದಲ್ಲಿ ಶಾರೀಕ್ ಹೇಳಿಕೆ ನಿರ್ಣಾಯಕವಾಗಿದ್ದು, ಆತನ ಆರೋಗ್ಯ ಚೇತರಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ.


ಮಂಗಳೂರಿನ ನಾಗುರಿಯಲ್ಲಿ ಕುಕ್ಕರ್‌ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ NIA ಹೆಗಲಿಗೆ ವಹಿಸಿದೆ. ಕುಕ್ಕರ್‌ ಬಾಂಬ್ ಸ್ಫೋಟದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆ NIAಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.


ಆರಗ ಜ್ಞಾನೇಂದ್ರ ಪ್ರಕಟಣೆ


ಇನ್ನು ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಣೆ ಹೊರಡಿಸಿದ್ದಾರೆ.


ಮಂಗಳೂರು ಪೊಲೀಸರು NIAಗೆ  ವರದಿ ಸಲ್ಲಿಸಿದ್ದಾರೆ. ಆ ವರದಿ ಆಧಾರದ ಮೇಲೆ NIA ಅಧಿಕಾರಿಗಳು FIR ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಮಂಗಳೂರಿನಲ್ಲಿಯೇ ಬೀಡು ಬಿಟ್ಟಿರುವ ಎನ್​ಐಎ ತಂಡ


FIRನಲ್ಲಿ ಶಂಕಿತ ಉಗ್ರ ಶಾರೀಕ್​ನನ್ನು A1 ಆರೋಪಿಯಾಗಿ ಉಲ್ಲೇಖಿಸುವ ಸಾಧ್ಯತೆ ಇದೆ. ಸದ್ಯ NIA ಅಧಿಕಾರಿಗಳ ಒಂದು ತಂಡ ಮಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಇನ್ನೂ ಕೆಲ ತಂಡಗಳು ಮೈಸೂರು, ಕೊಯಮತ್ತೂರು, ಕನ್ಯಾಕುಮಾರಿ, ಕೊಚ್ಚಿನ್‌ನಲ್ಲಿ ತನಿಖೆ ನಡೆಸುತ್ತಿವೆ.


ಇದನ್ನೂ ಓದಿ:  Mangaluru Blast: ಶಾರೀಕ್ ಮೊಬೈಲ್​​ನಲ್ಲಿ ಸ್ಪೋಟಕ ಮಾಹಿತಿ ಪತ್ತೆ; ಈ ವ್ಯಕ್ತಿಯ ಭಾಷಣದ ವಿಡಿಯೋಗಳು ಲಭ್ಯ


ಅಲೋಕ್ ಕಮಾರ್​ಗೆ ಜೀವ ಬೆದರಿಕೆ


ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್​ಕುಮಾರ್​ಗೆ ಎಚ್ಚರಿಕೆ ನೀಡಿದೆ. ನಿಮ್ಮ ಸಂತೋಷ್ ತುಂಬಾ ದಿನ ಇರಲ್ಲ. ನಾವು ನಮ್ಮ ಕೆಲಸ ಮುಂದುವರಿಸಿದ್ದೇವೆ. ನಾವು ನಿಮ್ಮ ಬಳಿ ಯಾವಾಗ ಬರ್ತೀವೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಜೀವ ಬೆದರಿಕೆ ಹಾಕಿದೆ.


ಐಸಿಸ್​ ಸೇರಲು ಯತ್ನ


ಶಾರೀಕ್ ಐಸಿಸ್ ಸೇರಲು ಆಸೆ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದೇ ಈ ಕಾರಣಕ್ಕೆ ಎನ್ನಲಾಗ್ತಿದೆ.


ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ಇದನ್ನೂ ಓದಿ:  Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?


ಶಾರೀಕ್ ಸಂಪರ್ಕಿತರ ಮೊಬೈಲ್​ಗಳು ಆಫ್


ಮಂಗಳೂರಿನಲ್ಲಿ ಬಾಂಬ್ ಸ್ಫೋಟದಲ್ಲಿ ಶಾರೀಕ್‌ ಕೃತ್ಯ ಬಯಲಾದ ಬೆನ್ನಲ್ಲೇ ಸಂಪರ್ಕಿತರ ಫೋನ್‌ ಸ್ವಿಚ್ಡ್‌ ಆಫ್ ಆಗಿವೆ. ಶಾರೀಕ್ ಮೊಬೈಲ್ ರಿಟ್ರೀವ್ ವೇಳೆ ಹಲವು ನಂಬರ್‌ಗಳು ಪತ್ತೆಯಾಗಿದ್ದು, ಪೊಲೀಸರು ಆ ನಂಬರ್​ಗಳಿಗೆ ಕರೆ ಮಾಡಿದಾಗ ಆ ನಂಬರ್​ಗಳು ಸ್ವಿಚ್ಡ್ ಆಫ್ ಬರ್ತಿವೆ. ಕೆಲ ನಂಬರ್​ಗಳ ಲೊಕೇಷನ್​ ತಮಿಳುನಾಡು, ಕೇರಳವನ್ನೂ ತೋರಿಸ್ತಿವೆ.

Published by:Mahmadrafik K
First published: