• Home
  • »
  • News
  • »
  • state
  • »
  • Karnataka Politics: ಯಾರು ಹೇಳಿದ್ರೂ ನೋ ನೋ; ಮುಗಿಯದ ಡಿಕೆಶಿ, ಸಿದ್ದರಾಮಯ್ಯ ಮುನಿಸು

Karnataka Politics: ಯಾರು ಹೇಳಿದ್ರೂ ನೋ ನೋ; ಮುಗಿಯದ ಡಿಕೆಶಿ, ಸಿದ್ದರಾಮಯ್ಯ ಮುನಿಸು

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಜನವರಿ 30ರಿಂದ ಪ್ರತ್ಯೇಕ ಬಸ್‌ ಯಾತ್ರೆ ಹೊರಡೋದು ಖಚಿತವಾಗಿದೆ. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಬಸ್​ಯಾತ್ರೆ ನಡೆಸುದರೆ ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಬಸ್​​ ಯಾತ್ರೆ ನಡೆಯಲಿದೆ.

  • Share this:

Siddaramaiah Vs DK Shivakumar: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮಧ್ಯೆ ಮುಸುಕಿನ ಗುದ್ದಾಟ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಹೈಕಮಾಂಡ್ (Congress High command)​ ಹೇಳಿದ್ರೂ ಮುನಿಸು ಮುಗಿದಿಲ್ಲ. ಜಂಟಿ ಬಸ್​ಯಾತ್ರೆ (Bus Yatre) ಮಾಡಿ ಅಂದ್ರೆ ಪ್ರತ್ಯೇಕ ಯಾತ್ರೆಗೆ ಕೈ ಪಡೆ ನಿರ್ಧಾರ ಮಾಡಿದೆ. ಕೊಪ್ಪಳದ ಮದುವೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್​ ಅಭ್ಯರ್ಥಿಗಳು (Congress Candidats) ಇವರೇ ಅಂತ ಘೋಷಣೆ ಮಾಡಿದ್ರು. ಆಮೇಲೆ ಸಿದ್ದರಾಮಯ್ಯಗೆ ಅಭ್ಯರ್ಥಿಗಳ ಘೋಷಣೆ ಅಧಿಕಾರ ಇಲ್ಲ ಅಂತ ಡಿಕೆ ಶಿವಕುಮಾರ್ ಕಡ್ಡಿ ತುಂಡಾದಂಗೆ ಹೇಳಿದ್ದರು.ಮೂರು ದಿನಗಳ ಹಿಂದೆ ನಡೆದ ದೆಹಲಿ ಸಭೆಯಲ್ಲೂ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅಧ್ಯಕ್ಷತೆಯಲ್ಲಿ ಒಟ್ಟಾಗಿರಿ, ಅಭ್ಯರ್ಥಿಗಳ ಹೆಸರು ಘೋಷಣೆ ಹೈಕಮಾಂಡ್​​ಗೆ ಬಿಡಿ ಅಂದಿದ್ದರು. ಆದ್ರೂ ಸಿದ್ದರಾಮಯ್ಯ ಬುಧವಾರ ಮತ್ತೆ ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರ್​ಗೆ (Vijayanand Kashappanavar) ಟಿಕೆಟ್​ ಕೊಡ್ತೀವಿ ಆಶೀರ್ವಾದ ಮಾಡಿ ಅಂತ ಘೋಷಣೆ ಮಾಡಿದ್ದಾರೆ.


ಡಿಕೆಶಿ-ಸಿದ್ದರಾಮಯ್ಯ ಪ್ರತ್ಯೇಕ ಪ್ರಚಾರ


ದೆಹಲಿಯಿಂದ ಬಂದ್ಮೇಲೆ ಡಿ.ಕೆ.ಶಿವಕುಮಾರ್​ ಅಭ್ಯರ್ಥಿ ಆಯ್ಕೆ ಪಟ್ಟಿ ರೆಡಿ ಮಾಡ್ತಿದ್ದಾರೆ. ಇನ್ನೊಂದ್ಕಡೆ ಸಿದ್ದರಾಮಯ್ಯ ಪ್ರವಾಸನೂ ನಡೆಯುತ್ತಿದೆ. ಆದ್ರೆ ಜನವರಿಂದ ನಡೆಯಲಿರುವ ಕಾಂಗ್ರೆಸ್​​ ಮಹಾಯಾತ್ರೆಯಲ್ಲಿ ಮೊದಲು ಡಿಕೆಶಿ-ಸಿದ್ದು ಜಂಟಿ ಪ್ರಚಾರ ಆಮೇಲೆ ಪ್ರತ್ಯೇಕ ಪ್ರಚಾರಕ್ಕೂ ಮುಹೂರ್ತ ನಿಗದಿಯಾಗಿದೆ.


ಜನವರಿ 9 ರಿಂದ 25ರವರೆಗೆ 17 ದಿನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಜಂಟಿ ಪ್ರಚಾರ ನಡೆಸುತ್ತಾರೆ. 20 ಜಿಲ್ಲೆಗಳಲ್ಲಿ ಡಿಕೆಶಿ-ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಯಲಿದ್ದು ,ಹೆಲಿಕಾಪ್ಟರ್​-ವಿಶೇಷ ವಿಮಾನಗಳ ಬಳಕೆಗೆ ನಿರ್ಧಾರ ಆಗಿದೆ.


ಮಾಸ್ಟರ್​ ಪ್ಲ್ಯಾನ್​ಗೆ ಬ್ರೇಕ್


20 ಜಿಲ್ಲೆಗಳ 150 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಯಲಿದ್ದು, ಬಸ್​ ಯಾತ್ರೆ ಮಾಡಿದ್ರೆ ಸಮಯ ಸಾಲಲ್ಲ ಅನ್ನೋದು ಸಿದ್ದರಾಮಯ್ಯ ಅನಿಸಿಕೆಯಾಗಿದೆ.


ಜನವರಿ 25ರವರೆಗೆ ಇಬ್ಬರು ಜಂಟಿಯಾಗಿ ಸಮಾವೇಶಗಳಲ್ಲಿ ಭಾಗಿಯಾಗ್ತಾರೆ. ಒಟ್ಟಿಗೆ ಬಸ್​ ಯಾತ್ರೆ ನಡೆಸೋದಕ್ಕೂ ಮಾಸ್ಟರ್​ ಪ್ಲ್ಯಾನ್​ ಹಾಕಿ ಬ್ರೇಕ್​ ಹಾಕಿದ್ದಾರೆ. ಅಷ್ಟೇ ಅಲ್ಲ ಜನವರಿ 30ರಿಂದ ಡಿಕೆ.ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ ಬಸ್​ಯಾತ್ರೆ ನಡೆಸೋ ನಿರ್ಧಾರನೂ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಸಿದ್ದು ಆ ಕಡೆ- ಡಿಕೆಶಿ ಈ ಕಡೆ


ಜನವರಿ 30ರಿಂದ ಪ್ರತ್ಯೇಕ ಬಸ್‌ ಯಾತ್ರೆ ಹೊರಡೋದು ಖಚಿತವಾಗಿದೆ. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಬಸ್​ಯಾತ್ರೆ ನಡೆಸುದರೆ ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಬಸ್​​ ಯಾತ್ರೆ ನಡೆಯಲಿದೆ.


ಇದನ್ನೂ ಓದಿ:  JDS Program: ರಾಮನಗರದಲ್ಲಿ ಜೆಡಿಎಸ್​ ಪಂಚರತ್ನ ರಥ ಯಾತ್ರೆಗೆ ಅಖಾಡ ರೆಡಿ! HDK ಹುಟ್ಟುಹಬ್ಬಕ್ಕೂ ಭರ್ಜರಿ ತಯಾರಿ


ಬಸವ ಕಲ್ಯಾಣದಿಂದ ಸಿದ್ದರಾಮಯ್ಯ ಬಸ್​ಯಾತ್ರೆ ಆರಂಭ ಆಗುತ್ತದೆ. ಚಾಮರಾಜನಗರದಿಂದ ಡಿಕೆಶಿ ಪ್ರತ್ಯೇಕ ಬಸ್​ಯಾತ್ರೆ ಶುರುವಾಗುತ್ತೆ ಅಂತ ಗೊತ್ತಾಗಿದೆ.


ಸಮಯದ ಕಾರಣ


ಒಟ್ಟಿಗೆ ಬಸ್​ನಲ್ಲಿ ಯಾತ್ರೆ ಮಾಡೋಕೆ ಸಿದ್ದರಾಮಯ್ಯಗೂ ಮನಸ್ಸಿಲ್ಲ. ಡಿಕೆ ಶಿವಕುಮಾರ್​ಗೂ ಆಸೆ ಇಲ್ಲ ಅನ್ನಿಸುತ್ತೆ. ಹಾಗಾಗಿನೇ ಸಮಯದ ಅಭಾವದ ಕಾರಣ ಕೊಟ್ಟು ಪ್ರತ್ಯೇಕ ಯಾತ್ರೆ ಮಾಡ್ತಿದ್ದಾರೆ ಅನ್ನೋದು ಬಿಜೆಪಿ ಹೇಳಿಕೆ.


ಇದನ್ನೂ ಓದಿ:  Rain Update: ವಾಯುಭಾರ ಕುಸಿತ, ಮತ್ತೆ ರಾಜ್ಯದಲ್ಲಿ ಭಾರೀ ಮಳೆಯ ಸಾಧ್ಯತೆ!


ಇದು ಸತ್ಯನೋ ಸುಳ್ಳೋ ಅಂತ ಕೇಳಿದ್ರೆ ಇದೆಲ್ಲಾ ಮಾಧ್ಯಮದವರು, ಬಿಜೆಪಿಯವರು ಹುಟ್ಟುಹಾಕೋದು ಅಂತಾರೆ. ಒಟ್ನಲ್ಲಿ ಎಷ್ಟೇ ಪ್ರಯತ್ನಪಟ್ರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಮಧ್ಯೆ ಇರುವ ಒಳಮುನಿಸು ಕಮ್ಮಿ ಆಗಿಲ್ಲ ಅನ್ನೋದಂತೂ ಸ್ಪಷ್ಟ.


ಸಿಎಂ ಆಗಮನಕ್ಕೆ ಗುಂಡಿಗಳಿಗೆ ತೇಪೆ


ಕೊಪ್ಪಳದಲ್ಲಿ ರಸ್ತೆ ಗುಂಡಿ ಮುಚ್ಚಲು ಸಿಎಂ ಬೊಮ್ಮಾಯಿ ಅವರೇ ಜಿಲ್ಲೆಗೆ ಬರಬೇಕಾ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ. ಇಂದು ಸಿಎಂ ಬೊಮ್ಮಾಯಿ ಹಾಗೂ ಜೆ.ಪಿ ನಡ್ಡಾ ಕೊಪ್ಪಳಕ್ಕೆ ಬರ್ತಿರೋ ಹಿನ್ನೆಲೆ ನಗರದ ಹಲವೆಡೆ ಬಾಯಿ ತೆರೆದು ಕೂತಿದ್ದ ನೂರಾರು ಗುಂಡಿಗಳನ್ನ ಜಿಲ್ಲಾಡಳಿತ ಕೊನೆಗೂ ಮುಚ್ಚಿದೆ. ಆದ್ರೆ ಈ ನೂರಾರು ಗುಂಡಿಗಳನ್ನ ಮೊದಲೇ ಮುಚ್ಚಿದ್ರೆ ಜನರಿಗೆ ಅನುಕೂಲ ಆಗ್ತಿತ್ತು ಅಲ್ವಾ? ಈ ಗುಂಡಿ ಮುಚ್ಚೋಕೆ ಸಿಎಂ ಬೊಮ್ಮಾಯಿ ಕೊಪ್ಪಳಕ್ಕೆ ಬರಬೇಕಾ ಅಂತಾ ಜನ ಜಿಲ್ಲಾಡಳಿತದ ನಡೆಯನ್ನ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ. ಬಸಾಪುರ. ಕಿಡದಾಳ ಬಳಿ ನೂರಾರು ಗುಂಡಿಗಳಿಗೆ ಜಿಲ್ಲಾಡಳಿತ ತೇಪೆ ಹಾಕಿದೆ.

Published by:Mahmadrafik K
First published: