ಇನ್ನೂ ನಿಂತಿಲ್ವಾ ಜಾರಕಿಹೊಳಿ VS ಹೆಬ್ಬಾಳ್ಕರ್ ಶೀತಲ ಸಮರ​? ಸಚಿವರಾದ ನಂತರ ಲಕ್ಷ್ಮೀ ಕ್ಷೇತ್ರಕ್ಕೆ ಸತೀಶ್​ ಕಾಲಿಟ್ಟಿದ್ದೇಕೆ?

ರಮೇಶ್​ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ನಮಗೆ ರಮೇಶ್​ ಇನ್ನೂ ಸಿಕ್ಕಿಲ್ಲ. ಅವರೊಂದಿಗೆ ಇಂದು ಮಾತಾಡ್ತೇನೆ ಎಂದರು

news18
Updated:January 2, 2019, 3:57 PM IST
ಇನ್ನೂ ನಿಂತಿಲ್ವಾ ಜಾರಕಿಹೊಳಿ VS ಹೆಬ್ಬಾಳ್ಕರ್ ಶೀತಲ ಸಮರ​? ಸಚಿವರಾದ ನಂತರ ಲಕ್ಷ್ಮೀ ಕ್ಷೇತ್ರಕ್ಕೆ ಸತೀಶ್​ ಕಾಲಿಟ್ಟಿದ್ದೇಕೆ?
ಫೈಲ್​ ಫೋಟೊ: ಸತೀಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​
 • News18
 • Last Updated: January 2, 2019, 3:57 PM IST
 • Share this:
ಲೋಹಿತ್​

ಚಿಕ್ಕೋಡಿ: ಕಾಂಗ್ರೆಸ್​ ಹಿರಿಯ ಮುಖಂಡರಾದ ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ನಡುವಿನ ಮುಸುಕಿನ ಗುದ್ದಾಟಕ್ಕೆ ಇನ್ನೂ ತೆರೆ ಬಿದ್ದಂತೆ ಕಾಣುತ್ತಿಲ್ಲ. ಯಾಕೆಂದರೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸತೀಶ್​ ಜಾರಕಿಹೊಳಿ ಮೊದಲು ಕಾಲಿಟ್ಟಿರುವುದು ಹೆಬ್ಬಾಳ್ಕರ್​ ಕ್ಷೇತ್ರದಲ್ಲಿ. ಜತೆಗೆ ಅಲ್ಲಿ ತಮ್ಮ ಮತ್ತು ಕಾಂಗ್ರೆಸ್​ ಬೆಂಬಲಿಗರ ಜತೆ ಸಭೆ ನಡೆಸಿ, ಪರೋಕ್ಷವಾಗಿ ಹೆಬ್ಬಾಳ್ಕರ್​ಗೆ ಎಚ್ಚರಿಕೆಯ ಸಂದೇಶವನ್ನು ಜಾರಕಿಹೊಳಿ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬುಧವಾರ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಕ್ಷೇತ್ರ ಬೆಳಗಾವಿ ಗ್ರಾಮಾಂತರಕ್ಕೆ ಭೇಟಿ ನೀಡಿದ ಸತೀಶ್​ ಜಾರಕಿಹೊಳಿ ಬೆಂಬಲಿಗರ ಸಭೆ ನಡೆಸಿದರು. ಆದರೆ ಅಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಉಪಸ್ಥಿತರಿರಲಿಲ್ಲ. ಈ ಕಾರಣಕ್ಕಾಗಿಯೇ, ಇಬ್ಬರ ನಡುವಿನ ಮುಸುಕಿನ ಗುದ್ದಾಟ ಇನ್ನೂ ಅಂತ್ಯಗೊಂಡಿಲ್ಲ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ರಮೇಶ್ ರಾಜೀನಾಮೆ ಕೊಡಲ್ಲ:

ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸತೀಶ್​ ಜಾರಕಿಹೊಳಿ ಅತೃಪ್ತ ಶಾಸಕ ಹಾಗೂ ತಮ್ಮ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮಾತನಾಡಿದರು. ರಮೇಶ್​ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ನಮಗೆ ರಮೇಶ್​ ಇನ್ನೂ ಸಿಕ್ಕಿಲ್ಲ. ಅವರೊಂದಿಗೆ ಇಂದು ಮಾತಾಡ್ತೇನೆ ಎಂದರು.

ಗೋಕಾಕ್ ನಗರಸಭೆ ಸದಸ್ಯರು ರಾಜೀನಾಮೆ ನೀಡುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜೀನಾಮೆ ಕೊಡುವ ಸ್ಥಿತಿ ಇನ್ನೂ ಬಂದಿಲ್ಲ. ರಾಜೀನಾಮೆ ಕೊಟ್ಟರೆ ನಾವೇನು ಮಾಡೋಕೆ ಆಗಲ್ಲ, ಎಂದರು.

ಇದನ್ನೂ ಓದಿ: ಜಾರಕಿಹೊಳಿ ಸಹೋದರರು- ಹೆಬ್ಬಾಳ್ಕರ್ ನಡುವೆ ನೇರಾನೇರ ಫೈಟ್ ಆರಂಭ..!ರಮೇಶ್​ ರಾಜೀನಾಮೆ ಕೊಟ್ಟರೆ ಮುಂದೇನು?:

ಒಂದು ವೇಳೆ ಊಹಾಪೋಹಗಳಂತೆ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್​, ಕಾಂಗ್ರೆಸ್​ನಲ್ಲಿಯೇ ಮುಂದುವರೆಯುವುದಾಗಿ ತಿಳಿಸಿದರು. ರಮೇಶ್ ರಾಜೀನಾಮೆ ಕೊಟ್ಟರೆ ನಮಗೆ ಸಂಬಂಧವಿಲ್ಲ, ನಾವು ಪಕ್ಷದಲ್ಲೆ ಮುಂದುವರಿಯುತ್ತೆವೆ ಎಂದು ಹೇಳಿಕೆ ನೀಡಿದರು.

First published:January 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,280

   
 • Total Confirmed

  1,677,298

  +73,646
 • Cured/Discharged

  372,439

   
 • Total DEATHS

  101,579

  +5,887
Data Source: Johns Hopkins University, U.S. (www.jhu.edu)
Hospitals & Testing centres