• Home
  • »
  • News
  • »
  • state
  • »
  • Mangaluru Auto Blast: ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತಾ ಪ್ಲಾನ್? ಕೇಸ್​ಗೆ ಕೊಯಂಬತ್ತೂರು ನಂಟು?

Mangaluru Auto Blast: ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತಾ ಪ್ಲಾನ್? ಕೇಸ್​ಗೆ ಕೊಯಂಬತ್ತೂರು ನಂಟು?

ಸ್ಫೋಟ ನಡೆದ ಸ್ಥಳ

ಸ್ಫೋಟ ನಡೆದ ಸ್ಥಳ

ಮಂಗಳೂರಿನ ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದ ಸುತ್ತಲಿನ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ.

  • Share this:

ಮಂಗಳೂರಿನ ನಾಗುರಿಯಲ್ಲಿ (Naguri, Mangaluru) ನಡೆದ ಆಟೋರಿಕ್ಷಾ ಸ್ಫೋಟದ ಹಿಂದೆ ಉಗ್ರರ (Terrorist) ಕೈವಾಡ ಇರೋದನ್ನು ಡಿಜಿಪಿ ಪ್ರವೀಣ್ ಸೂದ್ (DGP Praveen Sood) ಖಚಿತಪಡಿಸಿದ್ದಾರೆ. ಇತ್ತ ಎನ್​ಐಎ (NIA Team) ಐದು ತಂಡಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಫೋಟಗೊಂಡ ಸ್ಥಳದಲ್ಲಿಯೇ ಆಟೋ ತಂದು ನಿಲ್ಲಿಸಿ, ಪೆಂಡಾಲ್​ನಿಂದ ಮರೆ ಮಾಡಲಾಗಿದೆ. ಆಟೋ ಮತ್ತು ಸ್ಪೋಟಗೊಂಡ ಸ್ಥಳದ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದ್ದು, ಪೊಲೀಸರನ್ನು (Police) ನಿಯೋಜಿಸಲಾಗಿದೆ. ಈ ನಡುವೆ ಉಗ್ರರು ಮಂಗಳೂರು ನಗರದಲ್ಲಿಯೇ (Managaluru City) ಸ್ಫೋಟಕ್ಕೆ ಸಂಚು ರೂಪಿಸಿದ್ದರಾ ಅನ್ನೋ ಅನುಮಾನಗಳು ವ್ಯಕ್ತವಾಗಿವೆ. ಟಾರ್ಗೆಟ್ ಮಾಡಿದ್ದ ಸ್ಥಳ ತಲುಪುವ ಮೊದಲೇ ಅಂದ್ರೆ ಮಾರ್ಗ ಮಧ್ಯೆದಲ್ಲಿಯೇ ಬಾಂಬ್ ಸ್ಫೋಟವಾಗಿರುವ ಸಾಧ್ಯತೆಗಳು ವ್ಯಕ್ತವಾಗಿದೆ. ಸಮಾಜದಲ್ಲಿಯ ಶಾಂತಿ ಕದಡುವ ಉದ್ದೇಶದಿಂದ ಲಘು ಸಾಮರ್ಥ್ಯದ ಬಾಂಬ್ ಸ್ಫೋಟಿಸಲು ಸಂಚು ಮಾಡಿರುವ ಶಂಕೆಗಳು ವ್ಯಕ್ತವಾಗಿವೆ.


ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತಾ ಪ್ಲಾನ್?


ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಅಟೋ ಹತ್ತಿದ ವ್ಯಕ್ತಿ ತನ್ನನ್ನು ಪಂಪ್​​ವೆಲ್ ಸರ್ಕಲ್​​ಗೆ ಬಿಡಿ ಎಂದು ಹೇಳಿದ್ದನಂತೆ. ಶನಿವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಾಹ್ನವರೆಗೂ ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾಗಿದ್ದರು.


ಮಂಗಳೂರಿನ ಸಂಘನಿಕೇತನದಲ್ಲೂ ಕನ್ನಡ‌ ಶಾಲಾ ಮಕ್ಕಳ ಹಬ್ಬ ಪ್ರಯುಕ್ತ 15 ಸಾವಿರಕ್ಕೂ ಅಧಿಕ ಮಕ್ಕಳು ಸೇರಿದ್ದರು. ಸದ್ಯ ಮಂಗಳೂರಿನಲ್ಲಿ ಇಂದು ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಪೊಲೀಸ್ ಭಧ್ರತೆ ಕಲ್ಪಿಸಲಾಗಿದೆ.


mangaluru auto blast case injured passenger given different statement mrq
ಸ್ಫೋಟ ನಡೆದ ಸ್ಥಳ


ತಮಿಳುನಾಡಿನ ಕೊಯಂಬತ್ತೂರು ನಂಟು?


ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್​ ರಾಜ್​ ಕೊಣಗಿ ಕೊಯಂಬತ್ತೂರಿನವನು ಎಂದು ತಿಳಿದು ಬಂದಿದೆ. ಆದ್ರೆ ಆಟೋದಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್​​ನಲ್ಲಿ ಪ್ರೇಮ್​ರಾಜ್ ಹುಬ್ಬಳ್ಳಿಯ ನಿವಾಸಿ ಎಂದು ದಾಖಲಾಗಿದೆ. ಈತ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮಂಗಳೂರಿಗೆ ಬಂದಿದ್ದನಾ ಅನ್ನೋ ಅನುಮಾನ ಸಹ ಮೂಡಿದೆ.


ಮೈಸೂರು ಮಾರ್ಗವಾಗಿ ಮಂಗಳೂರು ತಲುಪಿದ ಪ್ರೇಮ್ ರಾಜ್ ರೈಲು ಇಳಿದು ಬೇರೆ ಕಡೆ ಹೋಗಲು ಆಟೋ ರಿಕ್ಷಾದಲ್ಲಿ ಹೊರಟಿದ್ದನು. ಮಾರ್ಗ ಮಧ್ಯೆ ನಾಗುರಿ ಬಳಿ ಆಟೋದಲ್ಲಿ  ಸ್ಫೋಟ ಉಂಟಾಗಿದೆ. ಸ್ಫೋಟದ ತೀವ್ರತೆಗೆ ಪ್ರೇಮ್​ರಾಜ್​  ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಆಟೋ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ:  Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ


ರಾಜ್ಯಾದ್ಯಂತ ಹೈ ಅಲರ್ಟ್​


ರಾಜ್ಯಾದ್ಯಂತ ಸೂಕ್ಷ್ಮ ಹಾಗೂ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಂದ ರಾಜ್ಯದ ಎಲ್ಲಾ ಎಸ್​​​ಪಿಗಳಿಗೆ ಸೂಚನೆ ನೀಡಲಾಗಿದೆ. ರೈಲ್ವೆ ಸ್ಟೇಷನ್, ಮಾರ್ಕೆಟ್, ಬಸ್ ನಿಲ್ದಾಣಗಳು ಸೇರಿ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.


mangaluru auto blast case injured passenger given different statement mrq
ಆಟೋ ಬ್ಲಾಸ್ಟ್​ ನಡೆದ ಸ್ಥಳ


ಮಂಗಳೂರಿನಲ್ಲಿ ಹೆಚ್ಚಿನ ಭದ್ರತೆ


ಮಂಗಳೂರಿನ ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದ ಸುತ್ತಲಿನ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಮಂಗಳೂರಿನ ಮಾರುಕಟ್ಟೆ, ರೈಲ್ವೇ ನಿಲ್ದಾಣ ಬಸ್ ನಿಲ್ದಾಣ ದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


ಇದನ್ನೂ ಓದಿ:  Autorickshaw Explodes: ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ, ಕುಕ್ಕರ್ ಬಾಂಬ್ ಸ್ಫೋಟದ ಸಾಧ್ಯತೆ


ಕುಕ್ಕರ್ ಬಾಂಬ್?


ಇನ್ನು ಸ್ಫೋಟಗೊಂಡಿರುವ ಆಟೋ ಒಳಗೆ ಕುಕ್ಕರ್​​ನೊಳಗೆ ತಯಾರಿಸುವ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿ ವಸ್ತು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್​​ಗೆ ಬೇಕಾದ ಸಾಧನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Published by:Mahmadrafik K
First published: