ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ- ಉಪ ಚುನಾವಣೆ ಬಳಿಕ ಬಿಜೆಪಿ ಮತ್ತಷ್ಟು ಬಲಿಷ್ಠ; ಸಚಿವ ಸಿ.ಸಿ.ಪಾಟೀಲ್

ಬಿಜೆಪಿ ಸರ್ಕಾರ ಸುಭದ್ರವಾಗಿದೆ, ಇನ್ನು ಮೂರುವರೆ ವರ್ಷ ನಮ್ಮದೆ ಸರ್ಕಾರ ಸಿದ್ದರಾಮಯ್ಯ ಏನೂ ಜೋತಿಷ್ಯ ಹೇಳ್ತಾರಾ, ಮತದಾರರು ಓಟು ಹಾಕುವದು ಇವರಿಗೇನು ಗೊತ್ತು ಎಂದು ಹೇಳಿದರು

G Hareeshkumar | news18-kannada
Updated:November 30, 2019, 2:45 PM IST
ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ- ಉಪ ಚುನಾವಣೆ ಬಳಿಕ ಬಿಜೆಪಿ ಮತ್ತಷ್ಟು ಬಲಿಷ್ಠ; ಸಚಿವ ಸಿ.ಸಿ.ಪಾಟೀಲ್
ಸಿ.ಸಿ. ಪಾಟೀಲ್
  • Share this:
ಧಾರವಾಡ(ನ.30): ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿಳಲು ಸಿದ್ದರಾಮಮಯ್ಯನವರೇ ಕಾರಣ, ಅವರಿಂದಲೇ ಬಿದ್ದದ್ದು, ಈ ವಿಚಾರ ಎಲ್ಲರಿಗೂ ಗೋತಿರೊದು. ಉಪಚುನಾವಣೆ ಬಳಿಕ ಬಿಜೆಪಿ ಇನಷ್ಟು ಸದೃಢವಾಗುತ್ತೆ ಎಂದು ಸಚಿವ ಸಿ.ಸಿ.ಪಾಟಿಲ್ ಹೇಳಿದ್ದಾರೆ. 

ಕಾಗವಾಡ ಉಪಚುನಾವಣೆ ಉಸ್ತುವಾರಿ ನನಗೆ ವಹಿಸಿಕೊಟ್ಟಿದ್ದಾರೆ. ನೂರಕ್ಕೆ ನೂರು ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೆವೆ, ಪಕ್ಷದ ಮುಖಂಡರ ಜೊತೆ ಸೇರಿ ಪ್ರಚಾರ ನಡೆಸಿದ್ದೆನೆ. ರಾಜ್ಯದ ಎಲ್ಲಾ 15 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೆವೆ, ಎಲ್ಲವನ್ನೂ  ಡಿಸೆಂಬರ್​ 9 ರ ನಂತರ ನೋಡಿ ಫಲಿತಾಂಶ ಬರುವವರೆಗೂ ಎಲ್ಲರೂ ಅವರವರ ಅಭಿಪ್ರಾಯ ಹೇಳ್ತಾರೆ  ಎಂದು ತಿಳಿಸಿದರು.

ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಪತನ ಸಿದ್ದರಾಮಯ್ಯ ಹೇಳಿಕೆಕೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ ಸರ್ಕಾರ ಸುಭದ್ರವಾಗಿದೆ, ಇನ್ನು ಮೂರುವರೆ ವರ್ಷ ನಮ್ಮದೆ ಸರ್ಕಾರ ಸಿದ್ದರಾಮಯ್ಯ ಏನೂ ಜೋತಿಷ್ಯ ಹೇಳ್ತಾರಾ, ಮತದಾರರು ಓಟು ಹಾಕುವದು ಇವರಿಗೇನು ಗೊತ್ತು ಎಂದು ಹೇಳಿದರು.

ಯಾವುದೇ ಅಧಿಕಾರಿಗಳು ಏಜೆಂಟರಂತೆ ವರ್ತಿಸುತ್ತಿಲ್ಲ, ಹಿಂದೆ ಅವರ ಸರ್ಕಾರ ಇದ್ದಾಗ ಅವರೇನು ಇವರ ಏಜೆಂಟರ್ ಆಗಿದ್ರಾ. ಸರ್ಕಾರಿ ಅಧಿಕಾರಿಗಳ ಬಗ್ಗೆ ಹಾಗೆಲ್ಲ ಮಾತನಾಡುವದು ತಪ್ಪು. ಹಿಂದಿನ ಸರ್ಕಾರದಲ್ಲಿ ಅವರು ಯಾವ ರೀತಿ ಆಡಳಿತ ನಡೆಸಿದ್ದರು ಎಲ್ಲರಿಗೂ ಗೊತ್ತಿದೆ. ಉಪಚುನಾವಣೆ ಫಲಿತಾಂಶದಲ್ಲಿ ಸೀಟು ಕಡಿಮೆ ಬಿಳುವ ಮಾತಿಲ್ಲ, ಮುಂದಿನ ಅವಧಿಯವರೆಗೂ ನಮ್ಮದೆ ಸರ್ಕಾರ ಇರುತ್ತೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ನಿಮ್ಮ ಕೈಲಿ ಆಗದಿದ್ದರೆ ಬಿಟ್ಟುಹೋಗಿ; ನಾವೇ ಬಂದು ಖಜಾನೆ ಭರ್ತಿ ಮಾಡ್ತೇವೆ ; ಸಿದ್ದರಾಮಯ್ಯ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಸಿಗದೆ ಅಸಮಾಧಾನದ ವಿಚಾರ ಮಾತನಾಡಿದ ಅವರು,  ಲಕ್ಷಣ ಸವದಿ ಈಗಾಗಲೆ ಹೇಳಿಕೆ ನೀಡಿದ್ದಾರೆ. ರಾಷ್ಟ್ರ ಮಟ್ಟದ ಯಾವುದೇ ನಾಯಕರು ಬಂದರು ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ, ಅಸಮಾಧಾನದ ಮಾತೆ ಇಲ್ಲ ಎಂದರು.
First published: November 30, 2019, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading