HOME » NEWS » State » COCONUT TREES CUT BY VILLAGE ACCOUNTANT IN A DISPUTE LAND IN TIPPUR OF GUBBI TUMKUR LG

ತುಮಕೂರು ಗ್ರಾಮ ಲೆಕ್ಕಿಗನ ದರ್ಪ; 250 ತೆಂಗಿನ ಮರಗಳ ಮಾರಣಹೋಮ; ರೈತನ ಕಣ್ಣೀರಿಗೆ ಉತ್ತರಿಸುತ್ತಾ ಸರ್ಕಾರ?

ಗ್ರಾಮದ  ಸರ್ವೇ ನಂಬರ್ 13ರಲ್ಲಿ 5.18 ಗುಂಟೆ ಜಮೀನು ಇತ್ತು.  ಇದು ಉಡಸಲಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿತ್ತು. ಉಡಸಲಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಈ ಜಮೀನನ್ನು ಸಿದ್ದಮ್ಮ-ಮುನಿ ಕೆಂಪಯ್ಯರಿಗೆ ದಶಕಗಳ ಹಿಂದೆಯೇ ಉಚಿತವಾಗಿ ನೀಡಲಾಗಿತ್ತು. 

news18-kannada
Updated:March 9, 2020, 11:09 AM IST
ತುಮಕೂರು ಗ್ರಾಮ ಲೆಕ್ಕಿಗನ ದರ್ಪ; 250 ತೆಂಗಿನ ಮರಗಳ ಮಾರಣಹೋಮ; ರೈತನ ಕಣ್ಣೀರಿಗೆ ಉತ್ತರಿಸುತ್ತಾ ಸರ್ಕಾರ?
ತೆಂಗಿನ ಮರಗಳ ಮಾರಣಹೋಮ
  • Share this:
ತುಮಕೂರು(ಮಾ.09): ವಿವಾದಿತ ಜಮೀನಿನಲ್ಲಿ ಫಸಲು ಬಂದಿದ್ದ ಅಡಿಕೆ ಮತ್ತು ತೆಂಗಿನ ಮರಗಳಿಗೆ ಗ್ರಾಮ ಲೆಕ್ಕಿಗ ಕೊಡಲಿ ಹಾಕಿರುವ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.  ಸುಮಾರು 100 ಅಡಿಕೆ ಹಾಗೂ 50 ತೆಂಗಿನ ಮರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದಾರೆ.  ತುಮಕೂರು ಕಂದಾಯ ಅಧಿಕಾರಿಗಳ ಈ ಅಮಾನುಷ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುರುಳಿ ಮರಗಳನ್ನು ಕಡಿಸಿದ ಗ್ರಾಮ ಲೆಕ್ಕಿಗ. ವಿವಾದಿತ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಗುಬ್ಬಿ ತಹಶೀಲ್ದಾರ್ ಮಮತಾ ಆದೇಶವಿದೆ ಎಂದು ಗ್ರಾಮ ಲೆಕ್ಕಿಗ ಮುರುಳಿ ಎಲ್ಲಾ ಮರಗಳನ್ನು ಕತ್ತರಿಸಿ ಹಾಕಿದ್ದಾರೆ. ಆದರೆ ಗ್ರಾಮಸ್ಥರು ಮುರುಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮರ ಕಡಿಯಲು ತಹಶೀಲ್ದಾರ್ ಆದೇಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜೊತೆಗೆ ರೈತ ವಿರೋಧಿ ಅಧಿಕಾರಿಗಳಿಗೆ, ರೈತ ವಿರೋಧಿ ರಾಜಕಾರಣಿಗಳಿಗೆ, ರೈತ ವಿರೋಧಿ ನಿಲುವುಗಳಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಈ ಸಂಬಂಧ ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೋಹನ್ ಭಾಗವತ್ ಸಮಾವೇಶದ ಮೇಲೆ ಉಗ್ರರ ಕಣ್ಣು; ಪೊಲೀಸರಿಂದ ತಪ್ಪಿತಾ ಅನಾಹುತ?

ಇನ್ನು, ಸಿದ್ದಮ್ಮ ಸಂಬಂಧಿ ತೋಟದಲ್ಲೂ ಕಂದಾಯ ಇಲಾಖೆಯ ಅಧಿಕಾರಿಗಳು ಅಡಿಕೆ ಮರಗಳನ್ನು ಕತ್ತರಿಸಿ ಹಾಕಿದ್ದಾರೆ. ಸಣ್ಣ ಕೆಂಪಯ್ಯ ಎಂಬುವವರಿಗೆ ಸೇರಿದ ಸುಮಾರು 120 ಅಡಿಕೆ ಮರಗಳನ್ನು ನಾಶ ಮಾಡಲಾಗಿದೆ.

 

ಏನಿದು ವಿವಾದ?ಗ್ರಾಮದ  ಸರ್ವೇ ನಂಬರ್ 13ರಲ್ಲಿ 5.18 ಗುಂಟೆ ಜಮೀನು ಇತ್ತು.  ಇದು ಉಡಸಲಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿತ್ತು. ಉಡಸಲಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಈ ಜಮೀನನ್ನು ಸಿದ್ದಮ್ಮ-ಮುನಿ ಕೆಂಪಯ್ಯರಿಗೆ ದಶಕಗಳ ಹಿಂದೆಯೇ ಉಚಿತವಾಗಿ ನೀಡಲಾಗಿತ್ತು. ಅದರಲ್ಲಿ ಮುನಿ ಕೆಂಪಯ್ಯ ಕುಟುಂಬ ಅಡಿಕೆ, ತೆಂಗಿನ ತೋಟ ಮಾಡಿಕೊಂಡಿದ್ದರು. ಜೊತೆಗೆ ಮುನಿ ಕೆಂಪಯ್ಯ ಕುಟುಂಬ ಈ ಜಮೀನಿನ ಸಂಪೂರ್ಣ ಸ್ವಾಧೀನ ಕೋರಿ ಜಿಲ್ಲಾಧಿಕಾರಿ ಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಸಿದ್ದರು.ಇನ್ನು, ಈ ದೇವಾಲಯಕ್ಕೆ ಒಟ್ಟು ಆರು ಜನ ಅರ್ಚಕರಿದ್ದಾರೆ. ಈ 6 ಜನ ಅರ್ಚಕರು ಸಹ  ದೇವಾಲಯಕ್ಕೆ ಸೇರಿದ ಜಾಗಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಡಿಸಿ ಕೋರ್ಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜೂನ್ 6ಕ್ಕೆ ಜಿಲ್ಲಾಧಿಕಾರಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಈ ಜಮೀನು ವಿವಾದ ಕೋರ್ಟ್‌ನಲ್ಲಿರುವಾಗಲೇ ಗ್ರಾಮ ಲೆಕ್ಕಿಗ ತೋಟ ನಾಶ ಮಾಡಿದ್ದಾರೆ.

Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

ಕಲ್ಪತರು ನಾಡು ಎಂದೇ ಕರೆಯಲಾಗುವ ತುಮಕೂರಿನಲ್ಲಿ ಇಂತಹ ಹೇಯ ಕೃತ್ಯ ನಡೆದಿದೆ. ರೈತನ ಕಣ್ಣೀರಿಗೆ ಸರ್ಕಾರ ಬೆಲೆ ಕೊಡುತ್ತಾ? ಇಂತಹ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
Youtube Video
First published: March 9, 2020, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories