ಬೆಂಗಳೂರು: ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಅನುಮಾಸ್ಪದ ಸ್ಫೋಟಕ ವಸ್ತು ಪತ್ತೆಯಾಗಿದೆ. ತೆಂಗಿನಕಾಯಿ ಮಾದರಿಯಲ್ಲಿ ಈ ಸ್ಪೋಟಕ ಇದ್ದು, ಎಫ್ಎಸ್ಎಲ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
ಸಿಕ್ಕ ಸ್ಪೋಟಕ ವಸ್ತುವನ್ನು ಹನುಮಂತ ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಎಫ್ಎಸ್ಎಲ್ ತಜ್ಞರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ ಅದನ್ನು ಕೆಂಪೇಗೌಡ ಮೈದಾನಕ್ಕೆ ತಂದು ಪರಿಶೀಲನೆ ಮಾಡಿದರು. ಅದಾದ ಬಳಿಕ ಸ್ಫೋಟಕವನ್ನು ಬಸ್ಸಿನಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಲಾಯಿತು.
ಎಫ್ಎಸ್ಎಲ್ ತಜ್ಞ ಶ್ರೀನಿವಾಸ್ ಅವರು ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿ, ತೆಂಗಿನಕಾಯಿ ಮಾದರಿಯ ಐಸ್ಕ್ರೀ ಡಬ್ಬಿ ಒಳಗಡೆ ಸ್ಪೋಟಕವನ್ನು ತುಂಬಿದ್ದಾರೆ. ಪೊಷಾಷಿಯಂ ನೈಟ್ರೇಟ್ ರಾಸಾಯನಿಕ ಅದು. ಪಟಾಕಿಗೆ ಬಳಸುವಂತಹ ರಾಸಾಯನಿಕ ಇದಾಗಿದೆ. ಈಗಾಗಲೇ ರಾಸಾಯನಿಕವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.