ಜಗತ್ತಿನಲ್ಲಿ ಎಷ್ಟೋ ರೀತಿಯ ಅಪಾಯಗಳಿಂದ ಜಸ್ಟ್ ಮಿಸ್ (Just Miss) ಆಗಿ ಬದುಕುಳಿದವರನ್ನು ನಾವು ನೋಡುತ್ತೇವೆ. ಅದೆಷ್ಟೋ ವೈರಲ್ ವಿಡಿಯೋಗಳಲ್ಲಿ ಯಮರಾಯ ಹತ್ತಿರ ಬಂದರೂ ಪ್ರಾಣ ಪಡೆಯದೆ ಹಿಂದಿರುಗಿ ಹೋದ ದೃಷ್ಯಗಳನ್ನು ನೀವೂ ಕಣ್ಣಾರೆ ಕಂಡಿರುತ್ತೀರಿ ಅಂತದೇ ಒಂದು ಘಟನೆ (Incident) ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ. ಮನೆಯಂಗಳದಲ್ಲಿ ಆಡುತ್ತಿದ್ದ (Playing) ಮಗುವಿನ ತಲೆ ೨೦ ಅಡಿ ಎತ್ತರದಿಂದ ತೆಂಗಿನ (Coconut) ಕಾಯಿ ಬಿದ್ದಿದೆ ಆದರೂ ಮಗು ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ನಡೆದಿದೆ.
೨೦ ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಬಿದ್ದಿದೆ ಅದೇ ಸಂದರ್ಭದಲ್ಲಿ ಮನೆಯ ಅಂಗಳದಲ್ಲಿ ಎರಡು ವರ್ಷದ ಮಗುವೊಂದು ತನ್ನ ಪಾಡಿಗೆ ತಾನು ಆಟವಾಡುತ್ತಿತ್ತು. ತೆಂಗಿನ ಮರದ ಅಡಿ ಆ ಮಗು ನಿಂತಿರುವುದರಿಂದ ಕಂದಮ್ಮನ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿದೆ. ಬಿದ್ದ ತಕ್ಷಣ ಮಗು ನೆಲಕ್ಕೆ ಕುಸಿದು ಬಿದ್ದಿದೆ. ಆ ಮಗುವಿನ ಪಕ್ಕದಲ್ಲಿ ಇನ್ನೂ ಇಬ್ಬರು ಪುಟ್ಟ ಮಕ್ಕಳೇ ಇದ್ದರು. ಯಾರೂ ದೊಡ್ಡವರು ಅಲ್ಲಿರದ ಕಾರಣ ಏನು ಮಾಡಬೇಕು ಎಂದೂ ಆ ಮಕ್ಕಳಿಗೂ ಸಹ ತಿಳಿದಿರಲಿಲ್ಲ.
ಕೆಲವೇ ಕೆಲವು ಕೂದಲೆಳೆಯ ಅಂತರದಲ್ಲಿ ಸಾವಿನ ಬಲೆಯಿಂದ ಕಂದಮ್ಮ ಪಾರಾಗಿದೆ. ತಕ್ಷಣ ಅಲ್ಲೇ ಇದ್ದ ಇನ್ನೊಬ್ಬ ಪುಟ್ಟ ಬಾಲಕಿ ಗಾಬರಿಗೊಂಡು ಅಕ್ಕ ಪಕ್ಕದ ಮನೆಯವರನ್ನು ಕೂಗಿ ಕರೆದಿದ್ದಾಳೆ. ಅದನ್ನು ಕೇಳಿ ತಲೆಯ ಮೇಲೆ ತೆಂಗಿನ ಕಾಯಿ ಬಿದ್ದ ಮಗುವಿನ ಪಾಲಕರು ಮನೆಯಿಂದ ಹೊರಬಂದಿದ್ದಾರೆ. ಹೊರ ಬಂದು ನೋಡುವುದರೊಳಗೆ ಮಗು ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿತ್ತು.
ಇದನ್ನೂ ಓದಿ: Belagavi Session: ಸದ್ದು ಮಾಡಲಿಲ್ಲ ಬೆಳಗಾವಿ ಅಧಿವೇಶನ; ನಡೆಯಲಿಲ್ಲ ಅರ್ಥಪೂರ್ಣ ಚರ್ಚೆ!
ತಕ್ಷಣ ಅಲ್ಲಿ ನಡೆದ ಘಟನೆಯನ್ನು ಇನ್ನೊಬ್ಬ ಪುಟ್ಟ ಬಾಲಕಿ ವಿವರಿಸಿದ್ದಾಳೆ. ಅದನ್ನು ತಿಳಿದು ಪಾಲಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಸರ್ಜಾಪುರದ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ತಕ್ಷಣ ಚಿಕಿತ್ಸೆ ನೀಡಿ ಕಂದನನ್ನು ಆಸ್ಪತ್ರೆಯ ವೈದ್ಯರು ದೇವರಂತೆ ರಕ್ಷಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತು ಮಗು ಪ್ರಾಣಾಪಾಯದಿಂದ ಪಾರಾಗಿದೆ ಈಗ ಮಗು ಆರೋಗ್ಯವಾಗಿದೆ.
ಗಾಬರಿಗೊಂಡಿದ್ದ ಪಾಲಕರು ಮಗು ಬದುಕುವುದು ಕಷ್ಟ ಎಂದುಕೊಂಡಿದ್ದರು.
ಮಗುವಿನ ತಲೆಗೆ ಗಂಭೀರ ಏಟಾಗಿದ್ದು ಮಗುವಿನ ದೇಹದ ಒಂದು ಭಾಗದ ಸ್ವಾಧೀನವೇ ಇಲ್ಲದಂತಾಗಿತ್ತು. ಮಗು ತನ್ನ ಕೈ ಕಾಲುಗಳನ್ನು ಅಲುಗಾಡಿಸಲೂ ಸಹ ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ಮಗುವನ್ನು ಮಣಿಪಾಲ ಆಸ್ಪತ್ರೆ ಯ ಸತತ ಪ್ರಯತ್ನ ದಿಂದ ಯಶಸ್ವಿ ಚಿಕಿತ್ಸೆ ನಡೆಸಿ ಸರಿಪಡಿಸಲಾಗಿದೆ. ಈ ಮಗುವು ಪ್ರಾಣಾಪಾಯದಿಂದ ಪಾರಾಗಿದ್ದು ಒಂದು ಆಶ್ಚರ್ಯವೇ ಸರಿ ಏಕೆಂದರೆ ಈ ಮಗುವಿನ ದೇಹದ ಸ್ವಾದೀನ ಕಳೆದುಕೊಂಡಾಗ 48 ಗಂಟೆಗಳ ಕಾಲ ನಿರಂತರವಾಗಿ ನಡೆಸಿದ ಆಪರೇಷನ್ ಮಾಡಿ ಮಗುವನ್ನು ಬದುಕಿಸಿದ್ದಾರೆ
ಮಗುವಿನ ಆಸೆಯನ್ನು ಕೈಬಿಟ್ಟ ಪೋಷಕರಿಗೆ ಮರುಜೀವ ಕೊಟ್ಟ ವೈದ್ಯರು
ತಮ್ಮ ಮಗು ಬದುಕುಳಿಯುವುದೇ ಕಷ್ಟ ಎಂದು ಬಾವಿಸಿದ್ದ ಪಾಲಕರಿಗೆ ವೈದ್ಯರು ದೇವರಂತೆ ನೆರವಾಗಿದ್ದಾರೆ. ಯಮನಿಗೆ ಸೆಡ್ಡು ಹೊಡೆದು ಬದುಕಿ ಬಂದ ಕಂದ ಪೋಷಕರಲ್ಲಿ ಸಂತಸ ತಂದಿದೆ. ಪೋಷಕರ ಕಣ್ಣಲ್ಲಿ ಖುಷಿ ಕಾಣಿಸಿದೆ. ಮಗು ಈಗ ಆರೋಗ್ಯವಾಗಿದೆ. ಆದರೂ 48 ಗಂಟೆಗಳ ಕಾಲ ಆಪರೇಷನ್ ಮಾಡಿ ಬದುಕಿ ಬಂದಿದ್ದು ಪವಾಡ ಸದೃಷವಾಗಿದೆ. ಆದರೂ ಇದು ವೈದ್ಯರ ಪ್ರಯತ್ನದಿಂದ ಮಗು ಪ್ರಾಣಾಪಾಯದಿಂದ ಆರಾಮಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ