ಆಂಧ್ರ ಸಿಎಂ ಖಾತೆಯಿಂದ 58 ಕೋಟಿ ರೂ. ದೋಚಲು ಯತ್ನ; ಕೋಸ್ಟಲ್​ವುಡ್ ನಿರ್ದೇಶಕ ಉದಯ ಶೆಟ್ಟಿ ಅರೆಸ್ಟ್​

ಆಂಧ್ರ ಸಿಎಂ ರಿಲೀಫ್​ ಫಂಡ್​ನಿಂದ 58 ಕೋಟಿ ರೂಪಾಯಿ ವಿತ್​ಡ್ರಾ ಆಗುತ್ತಿದೆ ಎನ್ನುವ ವಿಚಾರ ಬ್ಯಾಂಕ್​ನವರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಈ ಬಗ್ಗೆ ಬ್ಯಾಂಕ್​ ಮ್ಯಾನೆಜರ್​ ಆಂಧ್ರ ಸರ್ಕಾರದ ಜೊತೆ ಮಾತನಾಡಿದ್ದರು.

ಉದಯ್​ ಶೆಟ್ಟಿ

ಉದಯ್​ ಶೆಟ್ಟಿ

  • Share this:
ಮಂಗಳೂರು (ಸೆಪ್ಟೆಂಬರ್ 8): ಆಂಧ್ರ ಪ್ರದೇಶ ಸಿಎಂ ರಿಲೀಫ್​ ಫಂಡ್​ಗೆ ಕನ್ನ ಹಾಕಲು ಹೋದ ಕೋಸ್ಟಲ್​ವುಡ್​ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಂದೇ ಬಾರಿಗೆ ಶ್ರೀಮಂತರಾಗಬೇಕು ಎಂದು ದುರಾಸೆ ಮಾಡಿದವರು ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಳು. ಇನ್ನೂ ಇಬ್ಬರ ಬಂಧನವಾಗಿದ್ದು, ಪೊಲೀಸರು ಹೆಸರನ್ನು ಹೇಳಿಲ್ಲ ಎನ್ನಲಾಗಿದೆ.

ಈ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್​ ಡ್ರಾ ಮಾಡಲು ಮುಂದಾಗಿತ್ತು. ಅದೂ ಸಾವಿರ, ಲಕ್ಷ ರೂಪಾಯಿ ಅಲ್ಲ. ಬರೋಬ್ಬರಿ 58 ಕೋಟಿ ರೂಪಾಯಿ! ಈ ತಂಡ ಫೇಕ್​ ಚೆಕ್​ ಸೃಷ್ಟಿ ಮಾಡಿತ್ತು. ಆಂಧ್ರ ಸಿಎಂ ರಿಲೀಫ್​ ಫಂಡ್​ ನೀಡಿದ ಚೆಕ್​ ಇದು ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಬ್ಯಾಂಕ್​ನಲ್ಲಿ ಡ್ರಾ ಮಾಡಲು ಮುಂದಾಗಿತ್ತು.

 ಸಿಕ್ಕಿ ಬಿದ್ದಿದ್ದು ಹೇಗೆ?

ಆಂಧ್ರ ಸಿಎಂ ರಿಲೀಫ್​ ಫಂಡ್​ನಿಂದ 58 ಕೋಟಿ ರೂಪಾಯಿ ವಿತ್​ಡ್ರಾ ಆಗುತ್ತಿದೆ ಎನ್ನುವ ವಿಚಾರ ಬ್ಯಾಂಕ್​ನವರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಈ ಬಗ್ಗೆ ಬ್ಯಾಂಕ್​ ಮ್ಯಾನೆಜರ್​ ಆಂಧ್ರ ಸರ್ಕಾರದ ಜೊತೆ ಮಾತನಾಡಿದ್ದರು. ಈ ವೇಳೆ ಅಷ್ಟು ಮೊತ್ತದ ಚೆಕ್ ಕೊಟ್ಟಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿತ್ತು. ಈ ವೇಳೆ ಬ್ಯಾಂಕ್​ ಮ್ಯಾನೇಜರ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಇವರನ್ನು ಬಂಧಿಸಲಾಗಿದೆ.

ಹಲವು ವರ್ಷಗಳಿಂದ ಇದೇ ದಂಧೆ?
ಈ ಆರು ಜನರು ಹಲವು ವರ್ಷಗಳಿಂದ ಈ ರೀತಿಯ ದಂಧೆಯಲ್ಲಿ ತೊಡಗಿದ್ದರು ಎನ್ನುವುದನ್ನು ಇವರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
Published by:Rajesh Duggumane
First published: