Coal Shortage in India| ಕಲ್ಲಿದ್ದಲಿನ ಕೊರತೆ; ಕರ್ನಾಟಕದಲ್ಲೂ ವಿದ್ಯುತ್​ ಅಭಾವ ಉಂಟಾಗುವ ಸಾಧ್ಯತೆ!

ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಟ್ಟು ಎಂಟು ಘಟಕಗಳಿಂದ ಉಷ್ಣ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಘಟಕಗಳು ಹೊಂದಿವೆ. ಆದರೆ, ಕಲ್ಲಿದ್ದಲು ಕೊರತೆಯಿಂದಾಗಿ ಈಗಾಗಲೇ ನಾಲ್ಕು ಘಟಕಗಳಲ್ಲಿ ವಿದ್ಯುತ್​ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

ರಾಯಚೂರಿನ ಉಷ್ಣ ವಿದ್ಯುತ್​ ಸ್ಥಾವರ.

ರಾಯಚೂರಿನ ಉಷ್ಣ ವಿದ್ಯುತ್​ ಸ್ಥಾವರ.

 • Share this:
  ರಾಯಚೂರು (ಅಕ್ಟೋಬರ್​ 07); ಚೀನಾ ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿ ವಿದ್ಯುತ್​ ಅಭಾವ ಸೃಷ್ಟಿಯಾಗಿರುವುದು ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಿಗೆ ಭಾರತದಲ್ಲೂ ಕಲ್ಲಿದ್ದಲಿನ ಕೊರತೆ (Coal Shortage in India) ಉಂಟಾಗಿದೆ ಎನ್ನಲಾಗಿತ್ತು. ಇದೀಗ ರಾಜ್ಯದಲ್ಲೂ ಕಲ್ಲಿದ್ದಲಿನ ಕೊರತೆಯಾಗಿದ್ದು ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಾಜ್ಯಕ್ಕೆ ಶೇ 45 ರಷ್ಟು ವಿದ್ಯುತ್ ಅನ್ನು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ (Raichur Thermal Power Station) ಪೂರೈಕೆ ಮಾಡಲಾಗುತ್ತದೆ. ಆದರೆ, ಇಲ್ಲಿ ಇದೀಗ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಆರ್ಟಿಪಿಎಸ್ ವಿದ್ಯುತ್ ಉತ್ಪಾದನೆ ಮೇಲೆ ಕರಿ‌ನೆರಳು ಮೂಡಿದೆ ಎನ್ನಲಾಗಿದೆ.

  ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಟ್ಟು ಎಂಟು ಘಟಕಗಳಿಂದ ಉಷ್ಣ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಘಟಕಗಳು ಹೊಂದಿವೆ. ಆದರೆ, ಕಲ್ಲಿದ್ದಲು ಕೊರತೆಯಿಂದಾಗಿ ಈಗಾಗಲೇ ನಾಲ್ಕು ಘಟಕಗಳಲ್ಲಿ ವಿದ್ಯುತ್​ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

  ಉಳಿದಿರುವ ಘಟಕಗಳಿಂದ 480 ರಿಂದ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದ್ದು, ನಾಲ್ಕು ಘಟಕಗಳಿಗೆ ನಿನ್ನೆಗೆ ಮಾತ್ರ ಸಾಕಾಗಿದೆ. ಎಂಟು ಘಟಕಗಳು ಉತ್ಪಾದನೆಗೆ ಪ್ರತಿನಿತ್ಯ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಬರುತ್ತಿತ್ತು.

  ಪ್ರಸ್ತುತ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಮಾತ್ರ ಬರುತ್ತಿದೆ. ಹೀಗಾಗಿ ಇಂದು ವಿದ್ಯುತ್ ಉತ್ಪಾದಿಸುತ್ತಿರುವ 4 ಘಟಕಗಳು ಶೀಘ್ರದಲ್ಲಿ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನೂ ವೈಟಿಪಿಎಸ್ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದೆ. ಆದರೆ, ಇದು ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ ಹಾಗಾಗಿ ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆ ಎಂಬ ಆತಂಕ ಇದೀಗ ಮನೆ ಮಾಡಿದೆ.

  ದೇಶದಾದ್ಯಂತ ಇದೆ ಕಥೆ:

  ಭಾರತದ ಕಲ್ಲಿದ್ದಲು ಪೂರೈಕೆಯ ಮೇಲೆ ಹದಗೆಡುತ್ತಿರುವ ಒತ್ತಡದಿಂದ ವಿದ್ಯುತ್‌ ಬಿಕ್ಕಟ್ಟು ಎದುರಾಗುವ ಆತಂಕಗಳು ಕಾಡುತ್ತಿದೆ. ಇದರಿಂದ ವಿಶ್ವದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಪ್ರಮುಖ ಆರ್ಥಿಕತೆಯನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನೂ ಉಂಟು ಮಾಡುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಅಂತ್ಯದಲ್ಲಿ ಸರಾಸರಿ ನಾಲ್ಕು ದಿನಗಳ ಇಂಧನದ ದಾಸ್ತಾನು ಹೊಂದಿದ್ದವು. ಇದು ವರ್ಷದಲ್ಲೇ ಕನಿಷ್ಠ ಮಟ್ಟವಾಗಿದ್ದು, ಮತ್ತು ಆಗಸ್ಟ್ ಆರಂಭದಲ್ಲಿದ್ದ 13 ದಿನಗಳಿಗಿಂತ ಕಡಿಮೆಯಾಗಿದೆ. ಅಲ್ಲದೆ, ಅರ್ಧಕ್ಕಿಂತ ಹೆಚ್ಚು ಭಾರತೀಯ ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳುವ ಆತಂಕವೂ ಎದುರಾಗಿದೆ.

  ಸುಮಾರು 70% ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲನ್ನು ಬಳಸುವುದರಿಂದ, ಸ್ಪಾಟ್ ಪವರ್ ದರಗಳು ಏರಿಕೆಯಾಗಿದೆ. ಆದರೆ ಅಲ್ಯೂಮಿನಿಯಂ ಸ್ಮೆಲ್ಟರ್‌ಗಳು ಮತ್ತು ಸ್ಟೀಲ್ ಮಿಲ್‌ಗಳು ಸೇರಿದಂತೆ ಪ್ರಮುಖ ಗ್ರಾಹಕರಿಂದ ಇಂಧನದ ಸರಬರಾಜುಗಳನ್ನು ಬೇರೆಡೆಗೆ ವರ್ಗಾಯಿಸಲಾಗುತ್ತಿದೆ.

  ಚೀನಾದಂತೆಯೇ, ಭಾರತವು ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದು, ಈ ಪೈಕಿ ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಮತ್ತು ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಕುಸಿತದ ನಂತರ ಕೈಗಾರಿಕಾ ಚಟುವಟಿಕೆ ಮರುಕಳಿಸುವಂತೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ದೇಶವು ತನ್ನ ಬೇಡಿಕೆಯ ಮುಕ್ಕಾಲು ಭಾಗವನ್ನು ಸ್ಥಳೀಯವಾಗಿ ಪೂರೈಸುತ್ತದೆ, ಆದರೆ ಭಾರಿ ಮಳೆಯಿಂದಾಗಿ ಗಣಿ ಮತ್ತು ಪ್ರಮುಖ ಸಾರಿಗೆ ಮಾರ್ಗಗಳು ಜಲಾವೃತಗೊಂಡಿವೆ.

  ಕಲ್ಲಿದ್ದಲು ಆಧಾರಿತ ಕಾರ್ಖಾನೆಗಳ ಆಪರೇಟರ್‌ಗಳು ಲಭ್ಯವಿರುವ ಯಾವುದೇ ಸ್ಥಳೀಯ ಪೂರೈಕೆ ಪಡೆಯಲು ಅಥವಾ ದೇಶೀಯ ಹರಾಜಿನಲ್ಲಿ ದೊಡ್ಡ ಪ್ರೀಮಿಯಂಗಳನ್ನು ಪಾವತಿಸಬೇಕೋ ಅಥವಾ ಬೆಲೆಗಳು ಅತಿ ಹೆಚ್ಚು ಇರುವ ಕಡಲ ಕಲ್ಲಿದ್ದಲು ಮಾರುಕಟ್ಟೆಗೆ ಧಾವಿಸಬೇಕೋ ಎಂಬ ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ, ಕೇಂದ್ರ ಸರ್ಕಾರವು ನಿಷ್ಕ್ರಿಯ ವಿದ್ಯುತ್ ಕೇಂದ್ರಗಳನ್ನು ಮತ್ತೆ ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಅವುಗಳ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ.

  "ಸರಬರಾಜು ಸಂಪೂರ್ಣವಾಗಿ ಸ್ಥಿರಗೊಳ್ಳುವವರೆಗೆ, ನಾವು ಕೆಲವು ಕಡೆ ವಿದ್ಯುತ್ ಕಡಿತವನ್ನು ಕಾಣುವ ಸಾಧ್ಯತೆಯಿದೆ, ಆದರೆ ಇತರೆಡೆ ಗ್ರಾಹಕರು ವಿದ್ಯುತ್‌ಗಾಗಿ ಹೆಚ್ಚು ಹಣ ಪಾವತಿಸುವಂತೆ ಕೇಳಬಹುದು’’ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಕ್ರಿಸಿಲ್ ಲಿಮಿಟೆಡ್‌ನ ಮೂಲಸೌಕರ್ಯ ಸಲಹಾ ನಿರ್ದೇಶಕ ಪ್ರಣವ್ ಮಾಸ್ಟರ್ ಹೇಳಿದ್ದಾರೆ.

  ಆಮದು ಮಾಡಿದ ಕಲ್ಲಿದ್ದಲು ಬೆಲೆಗಳು ವಿಪರೀತ ಏರಿಕೆಯಾಗಿದ್ದು, ಇದರಿಂದ ದೇಶೀಯ ಕಲ್ಲಿದ್ದಲಿನ ಮೇಲೆ ಚಾಲನೆಯಲ್ಲಿರುವ ಸ್ಥಾವರಗಳ ಮೇಲೆ ಹೊರೆ ಹೆಚ್ಚಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದೂ ಹೇಳಿದರು.

  ಇನ್ನೊಂದೆಡೆ, ಈ ವಿದ್ಯುತ್‌ ಬಿಕ್ಕಟ್ಟಿನ ಪರಿಣಾಮ ಗ್ರಾಹಕರ ಮೇಲೆ ತಕ್ಷಣ ಪರಿಣಾಮ ಬೀರದಿದ್ದರೂ, ಕೆಲವು ತಿಂಗಳ ನಂತರ, ವಿತರಣಾ ಉಪಯುಕ್ತತೆಗಳು ವೆಚ್ಚವನ್ನು ರವಾನಿಸಲು ನಿಯಂತ್ರಕ ಅನುಮೋದನೆಗಳನ್ನು ಪಡೆದಾಗ ವಿದ್ಯುತ್‌ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

  ಇದನ್ನೂ ಓದಿ: Lakhimpur Kheri Violence| ಸ್ವಯಂ ದೂರು ದಾಖಲಿಸಿಕೊಂಡ‌ ಸುಪ್ರೀಂ ಕೋರ್ಟ್: ಇಂದು ವಿಚಾರಣೆ!

  ಸರ್ಕಾರದ ಮಾಹಿತಿಯ ಪ್ರಕಾರ, ಭಾರತೀಯ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನುಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 8.1 ದಶಲಕ್ಷ ಟನ್‌ಗಳಿಗೆ ಇಳಿದಿದ್ದು, ಇದು ಒಂದು ವರ್ಷದ ಹಿಂದಿನ ದಾಸ್ತಾನಿಗಿಂತ ಸುಮಾರು ಶೇ.76ರಷ್ಟು ಕಡಿಮೆಯಾಗಿದೆ. ಇನ್ನು, ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್ ಲಿಮಿಟೆಡ್‌ನಲ್ಲಿ ಸರಾಸರಿ ಸ್ಪಾಟ್ ವಿದ್ಯುತ್ ಬೆಲೆಗಳು ಸೆಪ್ಟೆಂಬರ್‌ನಲ್ಲಿ 63%ಕ್ಕಿಂತ ಅಧಿಕ ಹೆಚ್ಚಳ ಕಂಡಿದ್ದು, ಒಂದು ಕಿಲೋವ್ಯಾಟ್ ಗಂಟೆಗೆ 4.4 ರೂಪಾಯಿಗಳಿಗೆ ($ 0.06) ಏರಿಕೆಯಾಗಿದೆ.
  Published by:MAshok Kumar
  First published: