Money Fraud: ಜನರಿಗೆ ಕೈಕೊಟ್ಟ ಸಹಕಾರಿ ಬ್ಯಾಂಕ್! 3 ಕೋಟಿಗೂ ಅಧಿಕ ಹಣ ಪಡೆದು ಸಿಬ್ಬಂದಿ ಎಸ್ಕೇಪ್!

ಹಕಾರ ಇಲಾಖೆಯಿಂದ ನೊಂದಾಯಿತ ಸಹಕಾರ ಸಂಘದ ಬ್ಯಾಂಕ್ ನವರೇ 150 ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದಾರೆ. ಜನರಿಂದ ಫಿಕ್ಸಡ್ ಡಿಪಾಸಿಟ್ (Fixed Deposit) ಹಾಗೂ ಪಿಗ್ಮಿ ಹಣ (Pygmy money) ಪಡೆದು ಮೋಸ ಮಾಡಲಾಗಿದೆ.

ಹಣ ಕಳೆದುಕೊಂಡ ಜನರು

ಹಣ ಕಳೆದುಕೊಂಡ ಜನರು

  • Share this:
ಯಾದಗಿರಿ: ಬ್ಯಾಂಕ್ ನಲ್ಲಿ (Bank) ಹಣ ಜಮಾ (Deposit) ಮಾಡುವ ಮುನ್ನ ಹುಷಾರ್ ಅಧಿಕ ಬಡ್ಡಿಯ (interest) ಆಸೆಗೆ ನೀವು ಸಹಕಾರಿ ಸಂಘದ ಬ್ಯಾಂಕ್ (Co-Operative Society Bank) ನವರ ಬಣ್ಣ ಬಣ್ಣದ ಮಾತು ನಂಬಿ ಸಹಕಾರ ಸಂಘದ ಖಾತೆಗೆ (Account) ಹಣ ಜಮಾ ಮಾಡಿದರೆ ಹಣ ಕಳೆದುಕೊಂಡು ಅಲೆದಾಡಬೇಕಾಗುತ್ತದೆ. ಸಹಕಾರ ಇಲಾಖೆಯಿಂದ ನೊಂದಾಯಿತ ಸಹಕಾರ ಸಂಘದ ಬ್ಯಾಂಕ್ ನವರೇ 150 ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದಾರೆ. ಜನರಿಂದ ಫಿಕ್ಸಡ್ ಡಿಪಾಸಿಟ್ (Fixed Deposit) ಹಾಗೂ ಪಿಗ್ಮಿ ಹಣ (Pygmy money) ಪಡೆದು ಮೋಸ ಮಾಡಲಾಗಿದೆ. ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ನಗರದಲ್ಲಿರುವ (Shahapur City) ಶ್ರೀ ರೇವಣಸಿದ್ದೇಶ್ವರ ಸಹಕಾರ ಸಂಘವು ಠೇವಣಿದಾರರಿಗೆ ಪಂಗನಾಮ ಹಾಕಿದೆ. 3 ಕೋಟಿ ರೂಪಾಯಿ ಅಧಿಕ ಹಣ ಮೋಸ ಮಾಡಿದ್ದ ಆರೋಪ ಕೇಳಿ ಬಂದಿದೆ.

ಅಧಿಕ ಬಡ್ಡಿ ಆಸೆಗೆ ಹಣ ಕಳೆದುಕೊಂಡ ಜನರು

ರೇವಣಸಿದ್ದೇಶ್ವರ ಸಂಘವು ಕಳೆದ 13 ವರ್ಷದ ಹಿಂದೆ ಆರಂಭ ಮಾಡಲಾಗಿದೆ. ಆರಂಭದಲ್ಲಿ ಜನರ ನಂಬಿಕೆ ಗಳಿಸಿದೆ .ಅದೆ ರೀತಿ ಸರಕಾರದ ಸಹಕಾರ ಸಂಘದಿಂದ ಮಾನ್ಯತೆ ಪಡೆದ ಸಂಘವಾದ ಹಿನ್ನೆಲೆ ಜನರು ನಂಬಿ ಹೊಲ ಮಾರಾಟ ಮಾಡಿದ ಹಾಗೂ ದುಡಿದು ಸಂಪಾದಿಸಿದ ಹಣವನ್ನು ಸಂಘದ ಖಾತೆಯಲ್ಲಿ ಜಮಾ ಮಾಡಿ ಅಧಿಕ ಬಡ್ಡಿ ಬರುತ್ತದೆಂದು ನಂಬಿ ಹಣ ಜಮಾ ಮಾಡಿ ಮೋಸ ಹೋಗಿದ್ದಾರೆ.

ಮೋಸಮಾಡಿದ ಬ್ಯಾಂಕ್


ಸಹಕಾರ ಸಂಘದ ಸಿಇಓ ಎಸ್ಕೇಪ್‌

ಶ್ರೀ ರೇವಣಸಿದ್ದೇಶ್ವರ ಸಹಕಾರ ಸಂಘದ  ಸಿಇಓ ಸೋಮನಾಥ ಹಿರೇಗೌಡ ಅವರು ಹಣಕ್ಕೆ ಟೋಪಿ ಹಾಕಿ, ಸಂಘದ ಕಚೇರಿ ಬಂದ್ ಮಾಡಿ, ಎಸ್ಕೆಪ್ ಅಗಿದ್ದಾನೆ‌. ಜಮೀನು ಮಾರಾಟ ಹಾಗೂ ನಿತ್ಯವು ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಜನರು ಸಂಘದ ಖಾತೆಯಲ್ಲಿ ಹಣ ಜಮಾ ಮಾಡಿ ಮೋಸ ಹೋಗಿದ್ದಾರೆ. ಸಂಘದ ಕಚೇರಿ ಬಂದ್ ಮಾಡಿ ಎಸ್ಕೆಪ್ ಆದ ಹಿನ್ನೆಲೆ ಠೇವಣಿದಾರರು ಅನುಮಾನ ಗೊಂಡು ನಿತ್ಯವೂ ಸಂಘದ ಕಚೇರಿಗೆ ಅಲೆದಾಡಿದ್ದಾರೆ‌. ಆದರೆ, ಓಪನ್ ಮಾಡದಕ್ಕೆ ಈಗ ಎಸ್ಪಿ, ಜಿಲ್ಲಾಧಿಕಾರಿ ವರೆಗೂ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

ಇದನ್ನೂ ಓದಿ: DK Shivakumar: ಬಿಜೆಪಿಯವರು ಬೆಳ್ಳುಳ್ಳಿ-ಅಡಿಕೆ ಬೆಳೆದು ಆಸ್ತಿ ಮಾಡಿದ್ರಾ? ಆಪ್ತನಿಗೆ ನೋಟಿಸ್ ಕೊಟ್ಟಿದ್ದಕ್ಕೆ ಡಿಕೆಶಿ ಕಿಡಿ!

ಜೀವನಾಧಾರವೂ ಇಲ್ಲ, ಹಣವೂ ಇಲ್ಲ!

ಈ ಬಗ್ಗೆ ಮೋಸಹೋದ ಸರಸ್ವತಿ ಅವರು ಮಾತನಾಡಿ, ಸರ್ ನಾನು ಹೊಲ ಮಾಡಿ ಎಫ್ ಡಿ ಮಾಡಿದ್ದೆನೆ 15 ಲಕ್ಷ ರೂಪಾಯಿ ಹಣ ಜಮಾ ಮಾಡಿದ್ದೆನೆ. ನನಗೆ ಗಂಡ ಇಲ್ಲ ಮಕ್ಕಳು ಇಲ್ಲ,ಇತ್ತ ಹಣವು ಇಲ್ಲ. ನನಗೆ ವಯಸ್ಸಾಗಿದೆ. ನಾನು ಹೇಗೆ ಜೀವನ ಸಾಗಿಸಬೇಕು‌? ನನಗೆ ಹಣ ಕೊಟ್ಟು ಬದುಕಿಸಿ ಎಂದು ನೋವು ತೊಡಿಕೊಂಡಿದ್ದಾಳೆ.

ಮೋಸ ಹೋದ ಜನರು


ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ

ಕಷ್ಟ ನಷ್ಟದ ನಡುವೆ ಕೂಲಿ ನಾಲಿ ಮಾಡಿ ಬಂದ ಹಣವು ಜಮಾ ಮಾಡಿ ಈಗ. ಬಡ ಠೇವಣಿದಾರರು ಮೋಸ ಹೋಗಿದ್ದಾರೆ. ಈ ಬಗ್ಗೆ ಸಹಕಾರ ಸಂಘದ ಸಹಾಯಕ ನಿಬಂಧಕರಾದ ಸೀಮಾ ಅವರು ಮಾತನಾಡಿ, ಈ ಬಗ್ಗೆ ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ. ಕಾರ್ಯದರ್ಶಿ ಸೋಮನಾಥ ಓಡಿ ಹೋಗಿದ್ದು , ಯಾರೆ ಇದ್ದರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Idgah Ground: ಈದ್ಗಾ ಮೈದಾನದಲ್ಲಿ ಶುಕ್ರವಾರದ ಪ್ರಾರ್ಥನೆಗಿಲ್ಲ ಅವಕಾಶ, ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಮಧ್ಯಂತರ ಆದೇಶ

ಇನ್ನು ಕೊಟ್ಟ ಮಾತಿನಂತೆ ಈ ಬಗ್ಗೆ ಸೂಕ್ತ ತನೀಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಮೋಸ ಹೋದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ.
Published by:Annappa Achari
First published: