• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yogi Adityanath: ಇಂದು ರಾಜ್ಯದಲ್ಲಿ ಯುಪಿ ಸಿಎಂ ಕ್ಯಾಂಪೇನ್; ಇಲ್ಲಿದೆ ಪ್ರವಾಸದ ವಿವರ

Yogi Adityanath: ಇಂದು ರಾಜ್ಯದಲ್ಲಿ ಯುಪಿ ಸಿಎಂ ಕ್ಯಾಂಪೇನ್; ಇಲ್ಲಿದೆ ಪ್ರವಾಸದ ವಿವರ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

Election Campaign: ಮಂಡ್ಯ ಬಳಿಕ ನೇರವಾಗಿ ವಿಜಯಪುರಕ್ಕೆ (Vijayapura) ತೆರಳಲಿದ್ದಾರೆ. ಜಿಲ್ಲೆಯ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

  • Share this:

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಬಳಿಕ ಇಂದು ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanth) ಆಗಮಿಸುತ್ತಿದ್ದಾರೆ. ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಇಲ್ಲಿಯೇ ಹೆಚ್ಚು ಪ್ರಚಾರ ನಡೆಸುತ್ತಿದೆ. ಈಗಾಗಲೇ ಮಂಡ್ಯಕ್ಕೆ ಪ್ರಧಾನಿ ಮೋದಿ (PM Modi), ಅಮಿತ್ ಶಾ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಇದೀಗ ಮಂಡ್ಯಕ್ಕೆ (Mandya) ಸಿಎಂ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಮಂಡ್ಯ ಬಳಿಕ ನೇರವಾಗಿ ವಿಜಯಪುರಕ್ಕೆ (Vijayapura) ತೆರಳಲಿದ್ದಾರೆ. ಜಿಲ್ಲೆಯ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.


ಸಿಎಂ ಯೋಗಿ ಆದಿತ್ಯನಾಥ್ ಪ್ರವಾಸದ ವಿವರ


ಬೆಳಗ್ಗೆ 10.30 : ಮೈಸೂರು ಏರ್​ಪೋರ್ಟ್​ಗೆ ಆಗಮನ


ಬೆಳಗ್ಗೆ 10.35 : ಮೈಸೂರು ಏರ್​ಪೋರ್ಟ್​ನಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ


ಬೆಳಗ್ಗೆ 11 : ಮಂಡ್ಯದಲ್ಲಿ ಸಾರ್ವಜನಿಕ ಸಮಾವೇಶ, ಮಂಡ್ಯದಲ್ಲಿ ಅಶೋಕ್ ಜಯರಾಂ ಪರ ಪ್ರಚಾರ


ಮಧ್ಯಾಹ್ನ 2.30 : ವಿಜಯಪುರದ ಬಸವನ ಬಾಗೇವಾಡಿಗೆ ಆದಿತ್ಯನಾಥ್​


ಮಧ್ಯಾಹ್ನ 2.40 : ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ


ಮಧ್ಯಾಹ್ನ 3.05 : ಬಸವನ ಬಾಗೇವಾಡಿಯಲ್ಲಿ ಸಮಾವೇಶ ಬೆಳ್ಳುಬ್ಬಿ ಪರ ಪ್ರಚಾರ


ಮಧ್ಯಾಹ್ನ 4.10 : ಬಸವನಬಾಗೇವಾಡಿಯಿಂದ ಇಂಡಿಗೆ ಪ್ರಯಾಣ
ಮಧ್ಯಾಹ್ನ 4.50 : ಇಂಡಿಯಲ್ಲಿ ಸಾರ್ವಜನಿಕ ಸಮಾವೇಶ, ಇಂಡಿ ಬಿಜೆಪಿ ಅಭ್ಯರ್ಥಿ ಕಸಗೌಡ ಬಿರಾದಾರ್ ಪರ ಪ್ರಚಾರ


ಇದನ್ನೂ ಓದಿ:  Yogi Adityanath: ಒಕ್ಕಲಿಗರನ್ನು ಸೆಳೆಯಲು ಯೋಗಿ ಆದಿತ್ಯ'ನಾಥ' ಅಸ್ತ್ರ! ಸಕ್ಸಸ್ ಆಗುತ್ತಾ ಕೇಸರಿ ಪಾಳೆಯದ ರಣತಂತ್ರ?


ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕ ಎಚ್‌.ಡಿ. ದೇವೇಗೌಡರ ಜೆಡಿಎಸ್ (JDS) ಕಾಂಗ್ರೆಸ್‌ನೊಂದಿಗೆ ನೇರ ಹಣಾಹಣಿಯಲ್ಲಿದೆ. ಇದೀಗ ಯೋಗಿ ಮೂಲಕ ಆ ಭಾಗದ ಒಕ್ಕಲಿಗ ಮತಬುಟ್ಟಿಗೆ ಕೈ ಹಾಕಲು ಬಿಜೆಪಿ ಸಜ್ಜಾಗಿದೆ.

First published: