ವಿಡಿಯೋ ಕಾನ್ಫೆರೆನ್ಸ್​ನಲ್ಲಿ ನೆರೆ ಸಂತ್ರಸ್ತರ ಕಷ್ಟ ಕೇಳಲು ಕೇವಲ 10 ನಿಮಿಷ ವ್ಯಯಿಸಿದ ಬಿಎಸ್​ವೈ

ಸಿಎಂ ಹೊರಟ ನಂತರ ಅವರ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಸಂವಾದ ಮುಂದುವರಿಸಿದರು. ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿ ಎಂದಷ್ಟೇ ಹೇಳಿ ಸಿಎಂ ಅಲ್ಲಿಂದ ಹೊರಹೋದರು.

news18-kannada
Updated:October 23, 2019, 1:58 PM IST
ವಿಡಿಯೋ ಕಾನ್ಫೆರೆನ್ಸ್​ನಲ್ಲಿ ನೆರೆ ಸಂತ್ರಸ್ತರ ಕಷ್ಟ ಕೇಳಲು ಕೇವಲ 10 ನಿಮಿಷ ವ್ಯಯಿಸಿದ ಬಿಎಸ್​ವೈ
ಸಿಎಂ ಬಿ.ಎಸ್.ಯಡಿಯೂರಪ್ಪ
news18-kannada
Updated: October 23, 2019, 1:58 PM IST
ಬೆಂಗಳೂರು(ಅ. 23): ಅದಾಗಲೇ ಪ್ರವಾಹದಿಂದ ಕಂಗೆಟ್ಟು ಈಗ ಮತ್ತೊಮ್ಮೆ ಮಳೆಯಿಂದಾಗಿ ದೊಡ್ಡ ಅಪಾಯದ ಭೀತಿಯಲ್ಲಿರುವ ಉತ್ತರ ಕರ್ನಾಟಕದ ಜನರಿಗೆ ಸಿಎಂ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ನೆರೆ ಸಂತ್ರಸ್ತರಿಗೆ ಸಮಾಧಾನ ಹೇಳಲು ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ಸಿಎಂ ಯಡಿಯೂರಪ್ಪ ಇಂದು ವಿಡಿಯೋ ಕಾನ್ಫೆರೆನ್ಸ್ ನಡೆಸಿದರು. ವಿಪರ್ಯಾಸವೆಂದರೆ, ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಈ ವಿಡಿಯೋ ಕಾನ್ಫೆರೆನ್ಸ್​ಗೆ ಸಿಎಂ ವ್ಯಯಿಸಿದ ಸಮಯ ಕೆಲವೇ ನಿಮಿಷ ಮಾತ್ರ. ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಕೇವಲ 10 ನಿಮಿಷ ಮಾತನಾಡಿ ಹೊರಟುಹೋದರು.

ಸಿಎಂ ಹೊರಟ ನಂತರ ಅವರ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಸಂವಾದ ಮುಂದುವರಿಸಿದರು. ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿ ಎಂದಷ್ಟೇ ಹೇಳಿ ಸಿಎಂ ಅಲ್ಲಿಂದ ಹೊರಹೋದರು.

ಇದನ್ನೂ ಓದಿ: ಜನರ ಕಷ್ಟಕ್ಕೆ ಸ್ಪಂದಿಸದಿದ್ರೆ ಸಸ್ಪೆಂಡ್​ ಆಗೋಗ್ತೀಯ; ಬದಾಮಿಯಲ್ಲಿ ಪಿಡಿಓಗೆ ಸಿದ್ದರಾಮಯ್ಯ ಎಚ್ಚರಿಕೆ

ನೆರೆ ಸಂತ್ರಸ್ತರ ಅಳಲಿಗೆ ಕೇವಲ 10 ನಿಮಿಷ ಮೀಸಲಿಟ್ಟ ಮುಖ್ಯಮಂತ್ರಿಗಳು, ವಿಧಾನಸೌಧದಿಂದ ಹೊರಟು ಸೀದಾ ಹೋಗಿದ್ದು ಮಲ್ಲೇಶ್ವರಮ್​ನಲ್ಲಿರುವ ಪಕ್ಷದ ಕಚೇರಿಗೆ. ರಾಜ್ಯದ ದಕ್ಷಿಣ ಭಾಗದ 8 ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ತರಾತುರಿಯಲ್ಲಿ ಹೋದರು.

ಈ ಸಭೆಯು ಮುಖ್ಯಮಂತ್ರಿಗಳ ಪೂರ್ವನಿಯೋಜಿತ ಕಾರ್ಯಕ್ರಮವಾಗಿರಲಿಲ್ಲ. ಆದರೆ, ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಗೆ ಸಿಎಂ ಬಲವಂತವಾಗಿ ಹೋಗಬೇಕಾಗಿ ಬಂತು ಎಂದು ಮೂಲಗಳು ತಿಳಿಸಿವೆ.

ಇದಾದ ಬಳಿಕ ಸಂಜೆ 6ಕ್ಕೆ ಬಿಜೆಪಿ ಕಚೇರಿಯಲ್ಲೇ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳು ಇವತ್ತು ಇಡೀ ದಿನ ಪಕ್ಷದ ಚಟುವಟಿಕೆಯಲ್ಲೆ ಮುಳುಗಿಹೋಗಲಿದ್ದಾರೆ.

(ವರದಿ: ರಮೇಶ್ ಹಿರೇಜಂಬೂರು / ಕೃಷ್ಣ ಜಿ.ವಿ.)
Loading...

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...