ಸಂಪುಟ ವಿಸ್ತರಣೆ ಕಗ್ಗಂಟು: ಅಮಿತ್ ಶಾ ಭೇಟಿಗೆ ಸಿಎಂ ಬಿಎಸ್​ವೈ ನಾಳೆ ದೆಹಲಿಗೆ?

ದೆಹಲಿ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಆಗುತ್ತೆ ಎನ್ನುವುದೆಲ್ಲಾ ಸುಳ್ಳು. ಯಾರೂ ಕೂಡ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನೂರಕ್ಕೆ ನೂರು ಸಂಪುಟ ವಿಸ್ತರಣೆ ಆಗೇ ಆಗುತ್ತೆ. ನಾನು ದಾವೋಸ್​ಗೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಬಿಎಸ್​ವೈ ಹೇಳಿದ್ಧಾರೆ.

news18
Updated:January 13, 2020, 10:54 AM IST
ಸಂಪುಟ ವಿಸ್ತರಣೆ ಕಗ್ಗಂಟು: ಅಮಿತ್ ಶಾ ಭೇಟಿಗೆ ಸಿಎಂ ಬಿಎಸ್​ವೈ ನಾಳೆ ದೆಹಲಿಗೆ?
ಸಿಎಂ ಯಡಿಯೂರಪ್ಪ
  • News18
  • Last Updated: January 13, 2020, 10:54 AM IST
  • Share this:
ಬೆಂಗಳೂರು(ಜ. 13): ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಎಲ್ಲಾ ರೆಬೆಲ್ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದಾ ಎಂಬ ಅನುಮಾನಗಳ ಮಧ್ಯೆ ಸಂಪುಟ ವಿಸ್ತರಣೆಯ ಕಗ್ಗಂಟು ಮುಂದುವರಿದಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಭಿನ್ನಮತೀಯರಿಗಾದರೂ ಸಂಪುಟದಲ್ಲಿ ಸ್ಥಾನ ಸಿಗಲಬೇಕೆಂದು ರಮೇಶ್ ಜಾರಕಿಹೊಳಿ ಮತ್ತಿತರರು ಪಟ್ಟು ಹಿಡಿದುಕೂತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲವನ್ನೂ ಬಿಟ್ಟಿರುವ ಯಡಿಯೂರಪ್ಪ ಅವರು ನಾಳೆ ದೆಹಲಿಗೆ ಹೋಗಲು ಸಿದ್ಧರಾಗಿದ್ಧಾರೆ. ಏನೇ ಆದರೂ ದಾವೋಸ್​ಗೆ ಹೋಗುವ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಿಯೇ ಹೋಗುತ್ತೇನೆ ಎಂದವರು ಭರವಸೆ ನೀಡಿದ್ಧಾರೆ.

ಯಡಿಯೂರಪ್ಪ ಹೇಳುವ ಪ್ರಕಾರ ಇವತ್ತೇ ಅವರು ಅಮಿತ್ ಶಾರನ್ನು ಭೇಟಿಯಾಗಬೇಕಿತ್ತು. ಇವತ್ತು ಗೃಹ ಸಚಿವರು ಭೇಟಿಗೆ ಸಮಯ ನೀಡಿದ್ದರು. ಆದರೆ, ದೇವದುರ್ಗದಲ್ಲಿ ಇಂದು ಹಾಲುಮತದ ಕಾರ್ಯಕ್ರಮ ಇರುವುದರಿಂದ ದೆಹಲಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ಧಾರೆ.

ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ; ದೆಹಲಿಯತ್ತ ಸಿದ್ದರಾಮಯ್ಯ

ಇವತ್ತು ನನ್ನ ಭೇಟಿಗೆ ಅಮಿತ್ ಶಾ ಸಯಮ ಕೊಟ್ಟಿದ್ದರು. ಆದರೆ, ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಬಹಳ ಮುಖ್ಯವಿದ್ದು, ಅದಕ್ಕೆ ತಾನು ಹೋಗಲೇಬೇಕಿದೆ. ಹಾಗಾಗಿ ಇವತ್ತು ದೆಹಲಿಗೆ ಹೋಗುತ್ತಿಲ್ಲ. ನಾಳೆ ಅಮಿತ್ ಶಾ ಅವರು ಸಿಗುತ್ತಾರೆಂದು ತನ್ನೆಲ್ಲಾ ಕಾರ್ಯಕ್ರಮಗಳನ್ನೂ ರದ್ದು ಮಾಡಿ ದೆಹಲಿಗೆ ಹೋಗುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ಧಾರೆ.

ಒಂದು ವೇಳೆ ನಾಳೆ ಅಮಿತ್ ಶಾ ಅವರು ಸಿಗದೇ ಹೋದರೂ ಜ. 17 ಮತ್ತು 18ರಂದು ರಾಜ್ಯದಲ್ಲೇ ಇರಲಿದ್ದಾರೆ. ಆಗ ಅಮಿತ್ ಶಾ ಜೊತೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡುತ್ತೇನೆ. ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುತ್ತೇನೆ. ತಮ್ಮನ್ನು ನಂಬಿ ಬಂದವರಿಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದ್ಧಾರೆ.

ದೆಹಲಿ ಚುನಾವಣೆಯ ನಂತರ ಸಂಪುಟ ವಿಸ್ತರಣೆ ಆಗುತ್ತೆ ಎನ್ನುವುದೆಲ್ಲಾ ಸುಳ್ಳು. ಯಾರೂ ಕೂಡ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನೂರಕ್ಕೆ ನೂರು ಸಂಪುಟ ವಿಸ್ತರಣೆ ಆಗೇ ಆಗುತ್ತೆ. ನಾನು ದಾವೋಸ್​ಗೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದವರು ಹೇಳಿದ್ಧಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಸಭೆಗೆ ಬಳಸಿದ್ದ 2,500 ಕುರ್ಚಿಗಳಿಗೆ ಕಿಡಿಗೇಡಿಗಳಿಂದ ಬೆಂಕಿಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಪತನಗೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಾಗಿತ್ತು. 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 11 ರೆಬೆಲ್ ಶಾಸಕರು ಗೆಲುವು ಸಾಧಿಸಿದ್ದಾರೆ. ಇಬ್ಬರು ಸೋತಿದ್ದಾರೆ. ರಾಜೀನಾಮೆ ನೀಡಿದ್ದ ಎಲ್ಲಾ 17 ಮಂದಿಗೂ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಯಡಿಯೂರಪ್ಪ ವಾಗ್ದಾನ ನೀಡಿದ್ದರು. ಆದರೆ, ಏಳೆಂಟು ಮಂದಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಆಪರೇಷನ್ ಕಮಲದ ರೂವಾರಿ ರಮೇಶ್ ಜಾರಕಿಹೊಳಿ ಅವರು ತಮ್ಮ ಜೊತೆಗಿರುವ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಸಿಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದವರಷ್ಟೇ ಅಲ್ಲ, ಸೋತ ರೆಬೆಲ್ ನಾಯಕರನ್ನೂ ಮಂತ್ರಿ ಮಾಡಿ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಮಾತು ತಪ್ಪಿದರೆ ಎಲ್ಲರೂ ಒಗ್ಗಟ್ಟಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್​ವೈ ಅವರ ಎರಡನೇ ಸಂಪುಟ ವಿಸ್ತರಣೆಯ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading