ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ: ಮೇಕೆದಾಟು ವಿಚಾರವಾಗಿ ಪಿಎಂ ಜೊತೆ ಚರ್ಚೆ

ನಾಯಕತ್ವ ಬದಲಾವಣೆ  ಪ್ರಶ್ನೆಗೆ ಉತ್ತರಿಸಿದ  ಯಡಿಯೂರಪ್ಪ ಅವರು ’’ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ನೀವೆ ಏನಾದರೂ ಹೇಳಿ’’ ಎಂದು ಉತ್ತರಿಸಿ ನಗುತ್ತಾ ಹೊರಟು ಹೋದರು.

ಪ್ರಧಾನಿ ಭೇಟಿಯಾದ ಸಿಎಂ ಯಡಿಯೂರಪ್ಪ

ಪ್ರಧಾನಿ ಭೇಟಿಯಾದ ಸಿಎಂ ಯಡಿಯೂರಪ್ಪ

 • Share this:
  ನವ ದೆಹಲಿ, ಜುಲೈ 16: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಕೆಲ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ನೆರವು ಒದಗಿಸುವಂತೆ ಮನವಿ ಮಾಡಿದರು.

  ಬಯಲು ಸೀಮೆಗೆ ನೀರನ್ನು ಒದಗಿಸುವ, ಬಹು ದಿನಗಳ ಕನಸಾಗೆ ಉಳಿದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು, ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ 6 ಸಾವಿರ ಕೋಟಿ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮನವಿ ಮಾಡಿದರು.

  https://twitter.com/PMOIndia/status/1416031931578429441

  ಈ ಸಂದರ್ಭದಲ್ಲಿ ವಿವಾದಿತ ಮೇಕೆದಾಟು ಯೋಜನೆ, ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
  ಮುಖ್ಯಮಂತ್ರಿಯವರ ಕಾರ್ಯದರ್ಶಿ ಗಿರೀಶ್ ಹೊಸೂರ್ ಇದೇ ವೇಳೆ ಜೊತೆಗಿದ್ದರು.

  ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಮಾಧ್ಯಮದವರು ಕೇಳಿದ  ನಾಯಕತ್ವ ಬದಲಾವಣೆ  ಪ್ರಶ್ನೆಗೆ ಉತ್ತರಿಸಿದ  ಯಡಿಯೂರಪ್ಪ ಅವರು
  ’’ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ನೀವೆ ಏನಾದರೂ ಹೇಳಿ’’ ಎಂದು ಉತ್ತರಿಸಿ ನಗುತ್ತಾ ಹೊರಟು ಹೋದರು.

  ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ, ಮೇಕೆದಾಟು ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಏನೂ ಉತ್ತರಿಸದ ಮುಖ್ಯಮಂತ್ರಿ ಯಡಿಯೂರಪ್ಪ ಅವರು,  ಏನೂ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

  ರಾಜ್ಯದಿಂದ ಹೊಸದಾಗಿ ಕೇಂದ್ರ ಸಂಪುಟ ಸೇರಿರುವ ಸಚಿವರ ಜೊತೆ ಔತಣಕೂಟ ಆಯೋಜಿಸಲಾಗಿದ್ದು ಅದರಲ್ಲಿ ಭಾಗವಹಿಸಲಿ  ಸಿಎಂ ಯಡಿಯೂರಪ್ಪ ಅವರು ಹೋರಟು ಹೋದರು.

  ದೆಹಲಿಯ ಕರ್ನಾಟಕ ಭವನದಲ್ಲಿ ನಡೆಯುತ್ತಿರುವ ಔತಣಕೂಡ ನಡೆಯುತ್ತಿದ್ದು. ಔತಣಕೂಟದಲ್ಲಿ ನೂತನ ಸಚಿವರಾದ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಭಾಗಿಯಾಗಿದ್ದಾರೆ.

  ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಮೇಕೆದಾಟು ವಿಚಾರವಾಗಿ ತಮಿಳುನಾಡು ಕ್ಯಾತೆ ಹಾಗೂ ಯೋಜನೆಯ ಅನುಕೂಲತೆಗಳ ಬಗ್ಗೆ ಪ್ರಧಾನಿಯವರಿಗೆ ವಿವರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಯಾವ ಆಯಾಮದಲ್ಲಿ ಸಿಎಂ ಅವರು ಪ್ರಧಾನಿ ಅವರ ಬಳಿ ಮಾತನಾಡಿದ್ದಾರೆ ಎಂಬುದು ಮುಂದಷ್ಟೇ ತಿಳಿಯಬೇಕಿದೆ.

  ಇದನ್ನೂ ಓದಿ: ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರಾ, ಹೈಕಮಾಂಡೇ ಕರೆಸಿಕೊಂಡಿದೆಯಾ? ವಿಶ್ವನಾಥ್ ಮಾತಿನ ಅರ್ಥವೇನು?

  ಅಲ್ಲದೇ ನಾಯಕತ್ವ ಬದಲಾವಣೆಯ ಕೂಗು ಪ್ರಬಲವಾಗಿ ರಾಜ್ಯದಲ್ಲಿ ಎದ್ದಿದ್ದರಿಂದ ಆ ಕುರಿತಾಗಿಯೂ ಏನಾದರೂ ಬ್ರೇಂಕಿಂಗ್​ ನ್ಯೂಸ್​ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮಾಧ್ಯಮದವರ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಸಿಎಂ ಅವರ ನಡೆ ಇನ್ನೂ ನಿಗೂಡವಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: