ಜೆಡಿಎಸ್​​-ಕಾಂಗ್ರೆಸ್ಸಿಗರಿಗೆ ಅಭಿವೃದ್ದಿ ಬದಲಿಗೆ ಮಧ್ಯಂತರ ಚುನಾವಣೆ ಬೇಕಾಗಿದೆ; ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಕೊಡುಗೆ ಏನು ? ಜನ‌ಹಿತ ಮರೆದು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸಿದ್ದೆ ದೊಡ್ಡ ಸಾಧನೆ. ಶಾಸಕರ, ಜನರ ನೋವಿಗೆ ಸ್ಪಂದಿಸಲಿಲ್ಲ ಎಂದರು

G Hareeshkumar | news18-kannada
Updated:November 28, 2019, 3:38 PM IST
ಜೆಡಿಎಸ್​​-ಕಾಂಗ್ರೆಸ್ಸಿಗರಿಗೆ ಅಭಿವೃದ್ದಿ ಬದಲಿಗೆ ಮಧ್ಯಂತರ ಚುನಾವಣೆ ಬೇಕಾಗಿದೆ; ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಕಾರವಾರ(ನ.28): ಕಾಂಗ್ರೆಸ್ ಜೆಡಿಎಸ್ ನವರಿಗೆ ಅಭಿವೃದ್ಧಿ ಬೇಕಾಗಿಲ್ಲ, ಅವರಿಗೆ ಚುನಾವಣೆ ಬೇಕಾಗಿತ್ತು. ಅವರು ಅಂದು ಕೊಂಡಂತೆ ಮೂರು ಮೂರು ತಿಂಗಳಿಗೆ ಚುನಾವಣೆ ಮಾಡಲು ಆಗುವುದಿಲ್ಲ. ನಿಮ್ಮ ಯೋಗ್ಯತೆಗೆ ಒಟ್ಟಾಗಿ ಮೈತ್ರಿ ಸರ್ಕಾರ ಮಾಡದಿರುವುದಕ್ಕೆ ನಾನು ಕಾರಣನಲ್ಲ. ನೀವೆ ಕಾರಣ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ದ ಸಿಂ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್​​​ ಹೆಬ್ಬಾರ್​ ಅವರ ಪರವಾಗಿ ಮುಂಡಗೋಡಿನಲ್ಲಿ ಪ್ರಚಾರದಲ್ಲಿ ಮಾತನಾಡಿದ ಬಿಎಸ್​ವೈ, ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಕೊಡುಗೆ ಏನು ? ಜನ‌ಹಿತ ಮರೆದು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸಿದ್ದೆ ದೊಡ್ಡ ಸಾಧನೆ. ಶಾಸಕರ, ಜನರ ನೋವಿಗೆ ಸ್ಪಂದಿಸಲಿಲ್ಲ ಎಂದರು

ಕಾಂಗ್ರೆಸ್ ನವರು ಅಧಿಕೃತ ಲೋಕಸಭೆಯಲ್ಲಿ ವಿರೋದ ಪಕ್ಷ ಆಗುವ ಅರ್ಹತೆ ಇಲ್ಲ.  ಮೈತ್ರಿ ಸರ್ಕಾರ ಇದ್ದರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಒಂದೊಂದು ಸ್ಥಾನ. ಇಂದಿನಿಂದ ಮತ್ತೆ 15 ಕ್ಷೇತ್ರಕ್ಕೆ‌ ಪ್ರಚಾರಕ್ಕೆ ತೆರಳುತ್ತೇನೆ. ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ. ಹೆಚ್ಚಿನ ಅಂತರಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದ 24 ಘಂಟೆಯಲ್ಲಿ ರೈತರಿಗೆ ನಾಲ್ಕು ಸಾವಿರ ಹಣ ಕೊಡುವ ಕಾರ್ಯ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟುಗಳನ್ನು ಗೆದ್ದಿದ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ? ನಮಗೆ ಟೀಕೆ ಮಾಡುವ ಹಕ್ಕು ನಿಮ್ಮಿಬ್ಬರಿಗೂ ಇಲ್ಲ. ಬೇಜವಾಬ್ದಾರಿ ಹೇಳಿಕೆ ಮೊದಲು ನಿಲ್ಲಿಸಿ ಎಂದು ಹೇಳಿದರು.

ಇದನ್ನೂ ಓದಿ : ಒಂದೇ ಗಂಟೆಯಲ್ಲಿ ಸಚಿವರ ಪಟ್ಟಿಯಲ್ಲಿದ್ದ ನನ್ನ ಹೆಸರು ನಾಪತ್ತೆ: ಮಂತ್ರಿಗಿರಿ ಕೈ ತಪ್ಪಿದ ರಹಸ್ಯ ಬಿಚ್ಚಿಟ್ಟ ವಿಶ್ವನಾಥ್​​

ಅನರ್ಹ ಶಾಸಕರು ಮೈತ್ರಿ ಸರಕಾರದಲ್ಲೆ ಮಂತ್ರಿ ಆಗಬಹುದಿತ್ತು. ಆದರೆ, ಒತ್ತಡ ನಿಭಾಯಿಸಿ 17ಶಾಸಕರು ಬಂದಿದಕ್ಕೆ ಇವತ್ತು ಮುಖ್ಯಮಂತ್ರಿ ಆಗಿದ್ದೆನೆ. ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ನಿವಾರಿಸುವ ಭರವಸೆ ಕೊಟ್ಟ ಸಿಎಂ ಯಡಿಯೂರಪ್ಪ. ಶಿವರಾಮ್ ಹೆಬ್ಬಾರ್​ ಅವರನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸಿ ಎಂದು ಸಾರ್ವಜನಿಕರಲ್ಲಿ ಸಿಎಂ ಮನವಿ ಮಾಡಿದರು.
 
First published:November 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ