ಸಿಎಂ ಬಣ್ಣದ ಮಾತಿಗೆ ಮರುಳಾಗಿ ನೆರೆ ಸಂತ್ರಸ್ತರಿಂದ ಬಿಜೆಪಿಗೆ ಮತ - ಗೆದ್ದ ಶಾಸಕರ ವರ್ತನೆಯಿಂದ ಸಂತ್ರಸ್ತರು ಅತಂತ್ರ

ಕಾಗವಾಡ ಉಪ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನ ಸರ್ಕಾರ ಇದುವರೆಗೂ ಇಡೇರಿಸಿಲ್ಲ. ಯಡಿಯೂರಪ್ಪ ಸಿ ಎಂ ಖುರ್ಚಿ ಗಟ್ಟಿಯಾಯ್ತು, ಅನರ್ಹರು ಗೆದ್ದು ಅರ್ಹರಾದರು, ಆದರೆ, ಈಗಲೂ ಸಹ ಸಾವಿರಾರು ಕುಟುಂಬಗಳು ಬೀದಿಯಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಮುಂದುವರೆದಿದೆ.

G Hareeshkumar | news18-kannada
Updated:January 22, 2020, 3:28 PM IST
ಸಿಎಂ ಬಣ್ಣದ ಮಾತಿಗೆ ಮರುಳಾಗಿ ನೆರೆ ಸಂತ್ರಸ್ತರಿಂದ ಬಿಜೆಪಿಗೆ ಮತ - ಗೆದ್ದ ಶಾಸಕರ ವರ್ತನೆಯಿಂದ ಸಂತ್ರಸ್ತರು ಅತಂತ್ರ
ನೆರೆ ಸಂತ್ರಸ್ಥರು
  • Share this:
ಚಿಕ್ಕೋಡಿ(ಜ.22 ): ಚುನಾವಣೆಗೂ ಮುನ್ನ ಒಂದು ವರಸೆ ಚುನಾವಣೆ ಮುಗಿದ ಬಳಿಕ ಮತ್ತೊಂದು ವರಸೆ, ನಿಮ್ಮ ಸಮಸ್ಯೆಯೇ ನಮ್ಮ ಸಮಸ್ಯೆ ಎಂದಿದ್ದರೂ ಅಂದು ಸಿಎಂ ಹಾಗೂ ಅನರ್ಹ ಶಾಸಕರು, ಬಣ್ಣದ ಮಾತು ಕೇಳಿ ಸಂತ್ರಸ್ತರು ಮತ ಹಾಕಿದ್ರು ಆದರೆ, ಮತ ಪಡೆದ ಶಾಸಕರು ಮಾತ್ರ ಇತ್ತ ತಿರುಗಿ ನೋಡುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ತರ ಜೀವನ ಆಗಿದೆ. 

ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಗ್ರಾಮಗಳಲ್ಲಿ ಪ್ರವಾಹ ಬಂದು ಐದು ತಿಂಗಳುಗಳು ಕಳೆದ್ರು ಸಂತ್ರಸ್ತರು ಪರಿಸ್ಥಿತಿ ಮಾತ್ರ ಇದುವರೆಗೂ ಬದಲಾಗಿಲ್ಲ. ಕೃಷ್ಣಾ ತೀರದ 11 ಗ್ರಾಮಗಳು ಮುಳುಗಡೆಯಾಗಿದ್ದವು. ಸಾವಿರಾರು ಜನ ತಮ್ಮ ಮನೆಗಳನ್ನ ಕಳೆದುಕೊಂಡಿದರು.

ಪ್ರವಾಹದ ಬಳಿಕ ಮನೆಗಳ ಸರ್ವೆ ಮಾಡಿದ್ಧ ಅಧಿಕಾರಿಗಳ ಲೋಪದೋಷಗಳಳಿಂದ ಮನೆಗಳ ಸರ್ವೆ ಕಾರ್ಯ ಕೂಡ ಸ್ಥಗಿತಗೊಂಡಿತು. ಆದರೆ, ಅಷ್ಟರಲ್ಲೆ ಕಾಗವಾಡ ಉಪ ಚುನಾವಣೆ ಆಗುತ್ತಿದ್ದಂತೆ ಅಂದು ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಸಂತ್ರಸ್ತರು ನೋಂದಣಿ ಕಾರ್ಯ ಬಂದ್ ಮಾಡಿದ ಸರ್ಕಾರ ಇದುವರೆಗೂ ಪುನಃ ಆರಂಭಿಸಿಲ್ಲ. ಪರಿಣಾಮ ಕಾಗವಾಡ ಕ್ಷೇತ್ರದ 11 ಗ್ರಾಮದ 994 ಸಂತ್ರಸ್ತರಿಗೆ ಇದುವರೆಗೂ ಮನೆ ಕಟ್ಟಲು ಒಂದು ನಯಾ ಪೈಸೆ ಕೂಡ ಬಂದಿಲ್ಲ.

ಇನ್ನು ಚುನಾವಣೆ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿ ಈ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಚುನಾವಣೆ ಮುಗಿಯುತ್ತಿದ್ದಂತೆ ನಿಮ್ಮ ಸಮಸ್ಯೆಗಳನ್ನ ಬಗೆ ಹರಿಸುತ್ತೇವೆ. ಮನೆ ಕಳೆದುಕೊಂಡ ಎಲ್ಲರಿಗೂ ಮನೆ ಕೊಡುತ್ತೇವೆ. ನಮ್ಮದೆ ಸರ್ಕಾರ ಬರುತ್ತೆ ನಮ್ಮ ಶಾಸಕರಿಗೆ ಮತ ನೀಡಿ ನಿಮ್ಮ ಸಮಸ್ಯೆಯೆ ನಮ್ಮ ಸಮಸ್ಯೆ ಅಂತೆಲ್ಲ ಹೇಳಿ ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದರು. ಕಾಗವಾಡ ಉಪ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನ ಸರ್ಕಾರ ಇದುವರೆಗೂ ಇಡೇರಿಸಿಲ್ಲ. ಯಡಿಯೂರಪ್ಪ ಸಿ ಎಂ ಖುರ್ಚಿ ಗಟ್ಟಿಯಾಯ್ತು, ಅನರ್ಹರು ಗೆದ್ದು ಅರ್ಹರಾದರು, ಆದರೆ, ಈಗಲೂ ಸಹ ಸಾವಿರಾರು ಕುಟುಂಬಗಳು ಬೀದಿಯಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಮುಂದುವರೆದಿದೆ.

ಇದನ್ನೂ ಓದಿ : ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ - ಕಣ್ಣೀರಲ್ಲೇ ಹಬ್ಬ ಆಚರಿಸುತ್ತಿರುವ ಸಂತ್ರಸ್ತರು

ಒಟ್ಟಿನಲ್ಲಿ ಸರ್ಕಾರ ರಚನೆಗೂ ಮುನ್ನ ಯಡಿಯೂರಪ್ಪ ಹಾಗೂ ಶಾಸಕ ಶ್ರೀಮಂತ ಪಾಟೀಲ್ ಭರವಸೆಗಳ ಸುರಿಮಳೆಯನ್ನೆ ಹರಿಸಿದರು. ಆದರೆ, ಈಗ ಸಂತ್ರಸ್ತರ ಸಮಸ್ಯೆ ಕೇಳಲು ಯಾರು ಇಲ್ಲಾ. ಅತ್ತ ಸಿಎಂ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆ ಚಿಂತೆಯಾದ್ರೆ ಇಲ್ಲಿನ ಶಾಸಕರಿಗೆ ಸಚಿವರಾಗೋ ಕನಸು ಶುರುವಾಗಿದೆ. ಆದರೆ, ಮತ ಹಾಕಿ ಗೆಲ್ಲಿಸಿದ ನೆರೆ ಸಂತ್ರಸ್ತರ ಸೂರಿನ ಕನಸು ಮಾತ್ರ ಕನಸಾಗಿಯೆ ಉಳಿದಿದೆ.

(ವಿಶೇಷ ವರದಿ : ಲೋಹಿತ್​ ಶಿರೋಳ)
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ